ಹರಾರೆ: ಮಿಂಚಿನ ವೇಗದಲ್ಲಿ ಸಿಕ್ಸರ್, ಬೌಂಡರಿಗಳ ಚಿತ್ತಾರ ಬಿಡಿಸಿದ ‘ವಂಡರ್ ಕಿಡ್’ ವೈಭವ್ ಸೂರ್ಯವಂಶಿ ಯುವ ವಿಶ್ವಕಪ್ ಇತಿಹಾಸದಲ್ಲೇ ಮೈನವಿರೇಳಿಸುವ ಇನಿಂಗ್ಸ್ ಆಡಿದರು. ಅವರ ಸ್ಫೋಟಕ 175 ರನ್ಗಳ ನೆರವಿನಿಂದ ಭಾರತ ತಂಡ ಶುಕ್ರವಾರ ನಡೆದ ಫೈನಲ್ನಲ್ಲಿ ಇಂಗ್ಲೆಂಡ್ ತಂಡವನ್ನು ಬರೋಬ್ಬರಿ 100 ರನ್ಗಳಿಂದ ಸೋಲಿಸಿತು.

ಆಯುಷ್ ಮ್ಹಾತ್ರೆ ನೇತೃತ್ವದ ಚಿಗುರುಮೀಸೆಯ ಹುಡುಗರ ಪಡೆ ದಾಖಲೆಯ ಆರನೇ ಬಾರಿ ಟ್ರೋಫಿ ಎತ್ತಿಹಿಡಿಯಿತು.

ಈಗಾಗಲೇ ಕಿರಿಯರ ಕ್ರಿಕೆಟ್ನಲ್ಲಿ ಛಾಪು ಮೂಡಿಸಿರುವ 14 ವರ್ಷ ವಯಸ್ಸಿನ ಸೂರ್ಯವಂಶಿ ಕೇವಲ 80 ಎಸೆತಗಳಲ್ಲಿ ದಾಖಲೆಯ 175 ರನ್ (4x15, 6x15) ಸಿಡಿಸಿದರು. ಇದರಲ್ಲಿ 150 ರನ್ಗಳು ಬೌಂಡರಿ, ಸಿಕ್ಸರ್ಗಳ ನೆರವಿನಿಂದಲೇ ಹರಿದುಬಂದವು. ಇಂಗ್ಲೆಂಡ್ ಆಟಗಾರರು ಬಸವಳಿದರು. ಭಾರತ 9 ವಿಕೆಟ್ಗೆ 411 ರನ್ಗಳ ಭಾರಿ ಮೊತ್ತ ದಾಖಲಿಸಿತು. ಹರಾರೆ ಸ್ಪೋರ್ಟ್ಸ್ ಕ್ಲಬ್ ಕ್ರೀಡಾಂಗಣದಲ್ಲಿ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದ ಇಂಗ್ಲೆಂಡ್ ಆಗಲೇ ಪಂದ್ಯವನ್ನು ಅರ್ಧ ಸೋತಂತಾಗಿತ್ತು.

ಇಂಗ್ಲೆಂಡ್ ಬೇಗನೇ ರನ್ ಗಳಿಸಿದರೂ ಗುರಿ ಬಲು ದೊಡ್ಡದಾಗಿತ್ತು. ಅಂತಿಮವಾಗಿ 40.2 ಓವರುಗಳಲ್ಲಿ 311 ರನ್ಗಳಿಗೆ ಆಲೌಟ್ ಆಯಿತು. 67 ಎಸೆತಗಳಲ್ಲಿ 115 ರನ್ ಹೊಡೆದ ಕೆಲೆಬ್ ಫಾಲ್ಕ್ನರ್ ಅವರೊಬ್ಬರಿಂದ ಪ್ರತಿರೋಧ ಎದುರಾಯಿತು. ಸೋಲಿನ ಅಂತರವೂ ಇಳಿಯಿತು.

ಆಕ್ರಮಣಕಾರಿ ಆಟವಾಡುವ ತಮ್ಮ ಕೌಶಲವನ್ನು ಈ ಮಹತ್ವದ ಪಂದ್ಯದಲ್ಲೂ ಪ್ರಸ್ತುತಪಡಿಸಿದ ಸೂರ್ಯವಂಶಿ ಕೇವಲ 55 ಎಸೆತಗಳಲ್ಲಿ ಶತಕ ದಾಟಿದರು. ಇದು ಈ ಟೂರ್ನಿಯ ಇತಿಹಾಸದಲ್ಲಿ ಎರಡನೇ ಅತಿ ವೇಗದ ಶತಕ ಎನಿಸಿತು. ಅವರು ಗಳಿಸಿದ 175 ರನ್ ಟೂರ್ನಿಯ ಗರಿಷ್ಠ ವೈಯಕ್ತಿಕ ಮೊತ್ತವೆನಿಸಿತು. ಭಾರತ ಗಳಿಸಿದ ಮೊತ್ತ ಫೈನಲ್ನಲ್ಲಿ ದಾಖಲಾದ ಅತಿ ಹೆಚ್ಚಿನ ಮೊತ್ತ ಎನಿಸಿತು. ಭಾರತದ ಮೊತ್ತ 25 ಓವರುಗಳಲ್ಲೇ 200 ಗಡಿ ದಾಟಿತ್ತು.

ನಾಯಕ ಆಯುಷ್ (53) ಜೊತೆಗೆ ಎರಡನೇ ವಿಕೆಟ್ಗೆ 142 ರನ್ ಸೇರಿಸಿದ ಬಿಹಾರದ ಹುಡುಗ, ಮೂರನೇ ವಿಕೆಟ್ಗೆ ವೇದಾಂತ್ ತ್ರಿವೇದಿ ಜೊತೆಗೆ (36, 32ಎ) ಕೇವಲ 7.2 ಓವರುಗಳಲ್ಲಿ 89 ರನ್ ಸೇರಿಸಿದರು. ಮೊದಲ ಅರ್ಧ ಶತಕಕ್ಕೆ 32 ಎಸೆತ ತೆಗೆದುಕೊಂಡ ಅವರು ನಂತರದ 50 ರನ್ನಿಗೆ 23 ಎಸೆತ ತೆಗೆದುಕೊಂಡರು.

ಯುವ ಏಕದಿನ ಇನಿಂಗ್ಸ್ನಲ್ಲಿ ಅತ್ಯಧಿಕ ಸಿಕ್ಸರ್ಗಳನ್ನು ಬಾರಿಸಿದ ದಾಖಲೆ ಅವರದಾಯಿತು. ಅವರ ಅಬ್ಬರದಿಂದ ಭಾರತ ಓವರಿಗೆ 10 ರನ್ಗಳಂತೆ ಗಳಿಸುತ್ತಾ ಹೋಯಿತು. 26ನೇ ಓವರಿನಲ್ಲಿ ಅವರು ವಿಕೆಟ್ ಕೀಪರ್ಗೆ ಕ್ಯಾಚಿತ್ತ ನಂತರ (3 ವಿಕೆಟ್ಗೆ 251) ಭಾರತ ರನ್ ವೇಗ ಕಡಿಮೆಯಾಯಿತು. ಆದರೆ ಆ ಬುನಾದಿಯಲ್ಲಿ 400 ಮೊತ್ತ ದಾಟಲು ಸಾಧ್ಯವಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.