ಬೆಂಗಳೂರು: ಸತತ ಎರಡನೇ ವರ್ಷವೂ ವಿಜಯ್ ಹಜಾರೆ ಟ್ರೋಫಿ ಜಯಿಸುವ ಕರ್ನಾಟಕ ತಂಡದ ಕನಸು ಕಮರಿತು. ವಿದರ್ಭ ತಂಡವು ‘ಮುಯ್ಯಿ’ ತೀರಿಸಿಕೊಂಡು ‘ಸಂಕ್ರಾಂತಿ’ಯ ಸಿಹಿಯುಂಡಿತು.

ನಗರದ ಹೊರವಲಯದಲ್ಲಿ ರುವ ಸಿಂಗಹಳ್ಳಿಯ ಬಿಸಿಸಿಐ ಶ್ರೇಷ್ಠತಾ ಕೇಂದ್ರದಲ್ಲಿ ಗುರುವಾರ ನಡೆದ ಸೆಮಿ ಫೈನಲ್ನಲ್ಲಿ 6 ವಿಕೆಟ್ಗಳಿಂದ ವಿದರ್ಭ ಜಯಿಸಿತು. ಹೋದ ವರ್ಷದ ಟೂರ್ನಿಯ ಫೈನಲ್ನಲ್ಲಿ ಕರ್ನಾಟಕದ ಎದುರು ಸೋತಿದ್ದ ಸೇಡನ್ನೂ ತೀರಿಸಿಕೊಂಡಿತು.

281 ರನ್ ಗುರಿ ಬೆನ್ನಟ್ಟಿದ ವಿದರ್ಭ ತಂಡವು ಅಮನ್ ಮೊಖಡೆ ( (138; 122ಎ, 4X12, 6X2) ಹಾಗೂ ಆರ್. ಸಮರ್ಥ್ (ಅಜೇಯ 76; 69ಎ, 4X7) ಅವರ ಆಟದ ಬಲದಿಂದ ಜಯಭೇರಿ ಬಾರಿಸಿತು. 46.2 ಓವರ್ಗಳಲ್ಲಿ 4 ವಿಕೆಟ್ ಕಳೆದುಕೊಂಡು 284 ರನ್ ಗಳಿಸಿತು. ಭಾನುವಾರ ಇಲ್ಲಿಯೇ ನಡೆಯಲಿರುವ ಫೈನಲ್ಗೆ ರಹದಾರಿ ಪಡೆಯಿತು.

ಇಡೀ ದಿನ ಕ್ರೀಡಾಂಗಣದ ಕಾಂಪೌಂಡ್ ಹೊರಗೆ ನಿಂತು ಹುರಿದುಂಬಿಸಿದ ಕರ್ನಾಟಕದ ಅಭಿಮಾನಿಗಳು ನಿರಾಶೆಗೊಂಡರು.

ದೇವದತ್ತ ಹಿಂದಿಕ್ಕಿದ ಮೊಖಡೆ: ಈ ಪಂದ್ಯವು ಟೂರ್ನಿಯಲ್ಲಿ ಅತ್ಯಧಿಕ ರನ್ ಗಳಿಸಿದ್ದ ಇಬ್ಬರು ಬ್ಯಾಟರ್ಗಳಾದ ಕರ್ನಾಟಕದ ದೇವದತ್ತ ಪಡಿಕ್ಕಲ್ ಮತ್ತು ಅಮನ್ ಮೊಖಡೆ ಅವರಿಬ್ಬರ ನಡುವಿನ ಪೈಪೋಟಿಯೂ ಆಗಿತ್ತು. ಇದರಲ್ಲಿ ಅಮನ್ ಗೆದ್ದರು. ದೇವದತ್ತ (725 ರನ್) ಅವರನ್ನು ಹಿಂದಿಕ್ಕಿದ ಅಮನ್, ಒಟ್ಟು 781 ರನ್ ಕಲೆಹಾಕಿದರು. ಟೂರ್ನಿಯಲ್ಲಿ ಐದನೇ ಶತಕ ದಾಖಲಿಸಿದರು. ದೇವದತ್ತ ನಾಲ್ಕು ಶತಕ ಹೊಡೆದಿದ್ದಾರೆ. ಅಮನ್ ಅವರಿಗೆ ಕನ್ನಡಿಗ ಆರ್. ಸಮರ್ಥ್ ಕೂಡ ಜೊತೆಯಾದರು. ಎರಡು ವರ್ಷಗಳ ಹಿಂದೆ

ಸಮರ್ಥ್ ಅವರು ಕರ್ನಾಟಕವನ್ನು ತೊರೆದು ಉತ್ತರಾಖಂಡ ತಂಡ ಸೇರಿದ್ದರು. ಈ ಋತುವಿನಲ್ಲಿ ವಿದರ್ಭ ಬಳಗದಲ್ಲಿದ್ದಾರೆ.

ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಕರ್ನಾಟಕ ತಂಡಕ್ಕೆ ಉತ್ತಮ ಆರಂಭ ನೀಡುವಲ್ಲಿ ದೇವದತ್ತ ಯಶಸ್ವಿಯಾಗಲಿಲ್ಲ. ಅವರು ತಮ್ಮ ಖಾತೆಯನ್ನು ತೆರೆಯಲು 15 ಎಸೆತ ತೆಗೆದುಕೊಂಡರು. ಒಂದು ಬೌಂಡರಿ ಮಾತ್ರ ಗಳಿಸಿದರು. ಅವರಿಗಿಂತ ಮುನ್ನ ಮಯಂಕ್ ಕೂಡ 9 ರನ್ ಗಳಿಸಿ ಔಟಾಗಿದ್ದರು. ಈ ಹಂತದಲ್ಲಿ ಅನುಭವಿ ಕರುಣ್ ನಾಯರ್ (76; 90ಎ, 4X8, 6X1) ಅವರು ತಾಳ್ಮೆಯ ಇನಿಂಗ್ಸ್ ಆಡಿದರು. ಭುಜದ ನೋವಿನಿಂದ ವಿಶ್ರಾಂತಿ ಪಡೆದ ಆರ್. ಸ್ಮರಣ್ ಬದಲಿಗೆ ಸ್ಥಾನ ಪಡೆದ ಧ್ರುವ ಪ್ರಭಾಕರ್ (28; 33ಎ, 4X5) ಮೂರನೇ ವಿಕೆಟ್ ಜೊತೆಯಾಟದಲ್ಲಿ 54 ರನ್ ಸೇರಿಸಿದರು.

ಇನಿಂಗ್ಸ್ನ ಮಧ್ಯದಲ್ಲಿ ಪರಿಣಾಮಕಾರಿ ದಾಳಿ ನಡೆಸಿದ ಮಧ್ಯಮವೇಗಿ ದರ್ಶನ್ ನಾಲ್ಕಂಡೆ (48ಕ್ಕೆ5) ಧ್ರುವ ಪ್ರಭಾಕರ್ ವಿಕೆಟ್ ಗಳಿಸಿ ಜೊತೆಯಾಟ ಮುರಿದರು. ಇದರ ನಡುವೆಯೂ ದಿಟ್ಟ ಆಟವಾಡಿದ ಕೆ.ಎಲ್. ಶ್ರೀಜಿತ್ (54; 53ಎ, 4X7) ಅವರು ಕರುಣ್ ಜೊತೆಗೆ 113 ರನ್ ಸೇರಿಸಿದರು. ಹೋದ ಸಲ ವಿದರ್ಭದಲ್ಲಿ ಆಡಿದ್ದ ಕರುಣ್ ಈ ಋತುವಿನಲ್ಲಿ ತವರಿನ ತಂಡಕ್ಕೆ ಮರಳಿದ್ದಾರೆ.

ಆದರೆ ಎಡಗೈ ವೇಗಿ ಅಭಿಲಾಷ್ ಶೆಟ್ಟಿ (48ಕ್ಕೆ3) ಅವರನ್ನು ಬಿಟ್ಟರೆ ಬೇರೆ ಬೌಲರ್ಗಳು ಪರಿಣಾಮಕಾರಿ

ಯಾಗಲಿಲ್ಲ. ಇದರ ಲಾಭ ಪಡೆದ ಅಮನ್ ಮಿಂಚಿದರು. ಅವರು ಅವರು ಪಾಯಿಂಟ್ ಪೊಸಿಷನ್ ನಲ್ಲಿಯೇ ಹೆಚ್ಚು ರನ್ಗಳನ್ನು ಗಳಿಸಿದರು. ಒಟ್ಟಾರೆ ಶಾಂತಚಿತ್ತ ಮತ್ತು ಯೋಜನಾಬದ್ಧ ಬ್ಯಾಟಿಂಗ್ ಅವರದ್ದಾಗಿತ್ತು.

ಸಂಕ್ಷಿಪ್ತ ಸ್ಕೋರು:

ಕರ್ನಾಟಕ: 49.4 ಓವರ್ಗಳಲ್ಲಿ 280 (ಕರುಣ್ ನಾಯರ್ 76, ಧ್ರುವ್ ಪ್ರಭಾಕರ್ 28, ಕೃಷ್ಣನ್ ಶ್ರೀಜಿತ್ 54, ಶ್ರೇಯಸ್ ಗೋಪಾಲ್ 36, ಅಭಿನವ್ ಮನೋಹರ್ 26, ವೈಶಾಖ ವಿಜಯಕುಮಾರ್ 17, ಯಶ್ ಠಾಕೂರ್ 64ಕ್ಕೆ2, ದರ್ಶನ್ ನಾಲ್ಕಂಡೆ 48ಕ್ಕೆ5)

ವಿದರ್ಭ: 46.2 ಓವರ್ಗಳಲ್ಲಿ 4ಕ್ಕೆ284 (ಅಮನ್ ಮೊಖಡೆ 138, ಧ್ರುವ ಶೋರೆ 47, ಆರ್. ಸಮರ್ಥ್ ಔಟಾಗದೇ 76, ಅಭಿಲಾಷ್ ಶೆಟ್ಟಿ 48ಕ್ಕೆ3) ಫಲಿತಾಂಶ: ವಿದರ್ಭ ತಂಡಕ್ಕೆ 6 ವಿಕೆಟ್ ಜಯ. ಪಂದ್ಯ ಶ್ರೇಷ್ಠ: ಅಮನ್ ಮೊಖಡೆ

ವೈಶಾಖಗೆ ಕಂಕಷನ್

ಕರ್ನಾಟಕದ ವೈಶಾಖ ವಿಜಯಕುಮಾರ್ ಅವರು ಬ್ಯಾಟಿಂಗ್ ಮಾಡುವಾಗ ಚೆಂಡು ಹೆಲ್ಮೆಟ್ಗೆ ಅಪ್ಪಳಿಸಿತು. ಪ್ರಥಮ ಚಿಕಿತ್ಸೆ ಪಡೆದ ನಂತರ ಆಟ ಮುಂದುವರಿಸಿದರು. 17 ರನ್ ಗಳಿಸಿದರು.

ನಂತರ ಬೌಲಿಂಗ್ಗೂ ಇಳಿದರು. ಆದರೆ ನಾಲ್ಕು ಓವರ್ಗಳನ್ನು ಮುಗಿಸಿದ ನಂತರ ಅವರು ಅಸ್ವಸ್ಥರಾಗಿ ಡಗ್ಔಟ್ಗೆ ಮರಳಿದರು. ನಂತರ ಅವರನ್ನು ವೈದ್ಯಕೀಯ ತಪಾಸಣೆಗೆ ಕರೆದೊಯ್ಯಲಾಯಿತು. ಇದರಿಂದಾಗಿ ಕಂಕಷನ್ ಸಬ್ಸ್ಟಿಟ್ಯೂಟ್ ಆಗಿ ಎಲ್ ಮನ್ವಂತಕುಮಾರ್ ಆಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.