ಕೊಲಂಬೊ: ಮಹಿಳಾ ಏಕದಿನ ವಿಶ್ವಕಪ್ ಟೂರ್ನಿಯ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ, ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತವು 50 ಓವರ್ಗಳ ಅಂತ್ಯಕ್ಕೆ 10 ವಿಕೆಟ್ಗಳನ್ನು ಕಳೆದುಕೊಂಡು 247 ರನ್ಗಳಿಸಲಷ್ಟೇ ಶಕ್ತವಾಯಿತು.

ಪಾಕಿಸ್ತಾನಕ್ಕೆ 248 ರನ್ಗಳ ಗುರಿ ನೀಡಿದೆ.

ಭಾರತದ ಪರ ಆರಂಭಿಕ ಆಟಗಾರ್ತಿಯರಾದ ಪ್ರತೀಕಾ ರಾವಲ್ 31 ರನ್ (37 ಎಸೆತ), ಸ್ಮೃತಿ ಮಂದಾನ 23 ರನ್ (32 ಎಸೆತ) ಮೊದಲ ವಿಕೆಟ್ಗೆ 48 ರನ್ಗಳ ಜೊತೆಯಾಟ ಆಡಿದರು.

ಹರ್ಲೀನ್ ಡಿಯೋಲ್ 46 ರನ್(65 ಎಸೆತ), ಜೆಮಿಮಾ ರಾಡ್ರಿಗಸ್ 32 ರನ್(37 ಎಸೆತ) ಹಾಗೂ ರಿಚಾ ಘೋಷ್ 35 ರನ್(20 ಎಸೆತ) ತಂಡದ ಮೊತ್ತವನ್ನು ಹಿಗ್ಗಿಸಿದರು.

ಆದರೆ, ಭಾರತದ ಬ್ಯಾಟರ್ಗಳು ದೊಡ್ಡ ಮೊತ್ತವನ್ನು ಗಳಿಸುವಲ್ಲಿ ವಿಫಲರಾದರು.

ಪಾಕ್ ಪರ ಡಯಾನಾ ಬೇಗ್ 4 ವಿಕೆಟ್, ನಾಯಕಿ ಫಾತಿಮಾ ಸನಾ ಹಾಗೂ ಸಾದಿಯಾ ಇಕ್ಬಾಲ್ ತಲಾ 2 ವಿಕೆಟ್ ಪಡೆಯುವ ಮೂಲಕ ಭಾರತದ ಬ್ಯಾಟರ್ಗಳನ್ನು ಕಟ್ಟಿಹಾಕಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.