ನವದೆಹಲಿ: ದೇಶದ ಪ್ರಮುಖ 500 ಕಂಪನಿಗಳಲ್ಲಿ 5 ವರ್ಷಗಳಲ್ಲಿ 1 ಕೋಟಿ ಯುವಕರಿಗೆ ಇಂಟರ್ನ್‌ಶಿಪ್ ಅವಕಾಶ ಒದಗಿಸುವ ಯೋಜನೆಯನ್ನು ಕೇಂದ್ರ ಸರ್ಕಾರ ಈ ಬಾರಿ ಬಜೆಟ್‌ನಲ್ಲಿ ಪ್ರಕಟಿಸಿದೆ.
ಪ್ರಧಾನಮಂತ್ರಿಯರ ಪ್ಯಾಕೇಜ್ ಅಡಿಯಲ್ಲಿ 5ನೇ ಯೋಜನೆಯಾಗಿ, ಸರ್ಕಾರವು ಈ ಸಮಗ್ರ ಯೋಜನೆಯನ್ನು ಪ್ರಕಟಿಸಿದೆ. ಈ ಯೋಜನೆಯಡಿ, ಯುವಕರಿಗೆ ತಿಂಗಳಿಗೆ ₹5,000 ಇಂಟರ್ನ್‌ಶಿಪ್ ಭತ್ಯೆ ಮತ್ತು ₹6,000 ಒಂದು ಬಾರಿ ಧನಸಹಾಯ ನೀಡಲಾಗುತ್ತದೆ. ಕಂಪನಿಗಳು ತಮ್ಮ ಸಿಎಸ್‌ಆರ್ (ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿ) ನಿಧಿಯಿಂದ ತರಬೇತಿ ವೆಚ್ಚ ಮತ್ತು ಇಂಟರ್ನ್‌ಶಿಪ್ ವೆಚ್ಚದ ಶೇಕಡಾ 10ರಷ್ಟು ಭರಿಸಲಿವೆ.
ಇಂಟರ್ನ್‌ಶಿಪ್‌ಗೆ ಸೇರುವ ಯುವಜನರು 12 ತಿಂಗಳ ಕಾಲ, ವಿವಿಧ ವೃತ್ತಿಗಳು ಮತ್ತು ಉದ್ಯೋಗಾವಕಾಶಗಳಿಗೆ ಹಾಗೂ ನೈಜ ವ್ಯಾವಹಾರಿಕ ಪರಿಸರಕ್ಕೆ ತಮ್ಮನ್ನು ಒಡ್ಡಿಕೊಳ್ಳಲಿದ್ದಾರೆ.
ಲಾಭದಾಯಕ ಕಾರ್ಪೊರೆಟ್ ಕಂಪನಿಗಳು ಮೂರು ವರ್ಷದ ನಿವ್ವಳ ಲಾಭದಲ್ಲಿ ಕನಿಷ್ಠ ಶೇ 2ರಷ್ಟು ಹಣವನ್ನು ಸಿಎಸ್‌ಆರ್ ಚುಟವಟಿಕೆಗೆ ನಿರ್ದಿಷ್ಟ ಹಣಕಾಸು ವರ್ಷದಲ್ಲಿ ವೆಚ್ಚಮಾಡಬೇಕಿದೆ.