ಹೊಸ ತೆರಿಗೆ ಪದ್ಧತಿಯಲ್ಲಿ ಹಿಂದಿನಂತೆಯೇ ಆದಾಯ ತೆರಿಗೆ ಮಿತಿ ₹3ಲಕ್ಷದಿಂದ ಆರಂಭವಾಗಲಿದೆ. ₹3ಲಕ್ಷದಿಂದ ₹7ಲಕ್ಷವರೆಗೆ ಶೇ 5ರಷ್ಟು ತೆರಿಗೆ, ₹7ಲಕ್ಷದಿಂದ ₹10ಲಕ್ಷವರೆಗೆ ಶೇ 10ರಷ್ಟು, ₹10ಲಕ್ಷದಿಂದ ₹12ಲಕ್ಷವರೆಗೆ ಶೇ 15ರಷ್ಟು, ₹12ಲಕ್ಷದಿಂದ ₹15ಲಕ್ಷವರೆಗೆ ಶೇ 20ರಷ್ಟು ಹಾಗೂ ₹15ಲಕ್ಷಕ್ಕೂ ಹೆಚ್ಚಿನ ಆದಾಯಕ್ಕೆ ಶೇ 30ರಷ್ಟು ತೆರಿಗೆ ವಿಧಿಸಲಾಗಿದೆ.
ಸದ್ಯ ಜಾರಿಯಲ್ಲಿರುವ ಹೊಸ ತೆರಿಗೆ ಪದ್ಧತಿಯಲ್ಲೂ ತೆರಿಗೆ ಮಿತಿ ₹3ಲಕ್ಷದಷ್ಟೇ ಇದೆ. ಆದರೆ ಶೇ 5ರಷ್ಟು ತೆರಿಗೆಯ ಮಿತಿಯು ₹3ಲಕ್ಷದಿಂದ ₹6ಲಕ್ಷವರೆಗೆ ಇದೆ. ಅದರಂತೆಯೇ ಶೇ 10ರಷ್ಟು ತೆರಿಗೆ ಮಿತಿಯು ₹6ಲಕ್ಷದಿಂದ ₹9ಲಕ್ಷವರೆಗೆ ಇದೆ. ₹9ಲಕ್ಷದಿಂದ ₹12ಲಕ್ಷವರೆಗೆ ಶೇ 15ರಷ್ಟು, ₹12ರಿಂದ ₹15ಲಕ್ಷವರೆಗಿನ ಆದಾಯಕ್ಕೆ ಶೇ 20ರಷ್ಟು ಹಾಗು ₹15ಲಕ್ಷ ಮೇಲಿನ ಆದಾಯಕ್ಕೆ ಶೇ 30ರಷ್ಟು ಆದಾಯ ತೆರಿಗೆ ನಿಗದಿಪಡಿಸಲಾಗಿದೆ.
ಹಳೆಯ ತೆರಿಗೆ ಪದ್ಧತಿಯಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ. ಅಲ್ಲಿ ಈಗಲೂ ಆದಾಯ ತೆರಿಗೆ ಮಿತಿ ₹2.5 ಲಕ್ಷದಷ್ಟೇ ಇದೆ. ಶೇ 5ರ ತೆರಿಗೆ ಮಿತಿಯು ₹2.5 ಲಕ್ಷದಿಂದ ₹5 ಲಕ್ಷವರೆಗೆ ಇದೆ. ₹5ಲಕ್ಷದಿಂದ ₹10ಲಕ್ಷವರೆಗಿನ ಆದಾಯಕ್ಕೆ ಶೇ 20ರಷ್ಟಿದೆ. ₹10 ಲಕ್ಷ ಮೇಲಿನ ಆದಾಯಕ್ಕೆ ಶೇ 30ರಷ್ಟು ತೆರಿಗೆ ವಿಧಿಸಲಾಗಿದೆ. ಹಳೇ ಆದಾಯ ತೆರಿಗೆ ಪದ್ಧತಿಯಲ್ಲಿ ಹಿರಿಯ ನಾಗರಿಕೆರಿಗೆ ಹೆಚ್ಚಿನ ಒತ್ತು ನೀಡಲಾಗಿತ್ತು.