ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಚಿವ ಸುಧಾಕರ್ ಆಪ್ತ, ಕೋಚಿಮುಲ್ ನಿರ್ದೇಶಕನ ಮನೆ ಮೇಲೆ ಇ.ಡಿ ದಾಳಿ

Published 8 ಜನವರಿ 2024, 4:56 IST
Last Updated 8 ಜನವರಿ 2024, 4:56 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಕೋಲಾರ ಚಿಕ್ಕಬಳ್ಳಾಪುರ ಹಾಲು ಒಕ್ಕೂಟ (ಕೋಚಿಮುಲ್) ನಿರ್ದೇಶಕ ಹಾಗೂ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ಅವರ ಆಪ್ತ ಅಶ್ವತ್ಥನಾರಾಯಣ ಬಾಬು ಅವರ ಚಿಂತಾಮಣಿಯ ನಿವಾಸದ ಮೇಲೆ ಜಾರಿ ನಿರ್ದೇಶನಾಲಯ (ಇ.ಡಿ) ಅಧಿಕಾರಿಗಳು ಬೆಳಿಗ್ಗೆಯೇ ದಾಳಿ ನಡೆಸಿದ್ದಾರೆ.

ಚಿಂತಾಮಣಿ ತಾಲ್ಲೂಕಿನಿಂದ ಅಶ್ವತ್ಥನಾರಾಯಣ ಬಾಬು ಕೋಚಿಮುಲ್ ನಿರ್ದೇಶಕರಾಗಿದ್ದಾರೆ. ಎರಡು ಬಾರಿ ಪಕ್ಷೇತರರಾಗಿ (ಡಾ.ಎಂ.ಸಿ.ಸುಧಾಕರ್ ಬಣ) ಕೋಚಿಮುಲ್ ನಿರ್ದೇಶಕರಾಗಿದ್ದಾರೆ. ಸುಧಾಕರ್ ಕಾಂಗ್ರೆಸ್ ಸೇರುತ್ತಿದ್ದಂತೆಯೇ ಬಾಬು ಸಹ ಅವರನ್ನು ಹಿಂಬಾಲಿಸಿದರು. ಈ ಹಿಂದೆ ಒಮ್ಮೆ ತಾಲ್ಲೂಕು ಪಂಚಾಯಿತಿ ಸದಸ್ಯರಾಗಿಯೂ ಕೆಲಸ ಮಾಡಿದ್ದಾರೆ.

ಕೋಚಿಮುಲ್‌ ಇತ್ತೀಚೆಗೆ ನಡೆಸಿದ ನೇಮಕಾತಿ ಪ್ರಕ್ರಿಯೆಯಲ್ಲಿ ಅವ್ಯವಹಾರ ನಡೆದಿದೆ ಎನ್ನುವ ಆರೋಪ ಕೇಳಿ ಬಂದಿತ್ತು. ನೇಮಕಾತಿಯ ಪಟ್ಟಿಯೊಂದು ಅಭ್ಯರ್ಥಿಗಳ ಹೆಸರು ಮತ್ತು ಅಂಕಗಳೊಂದಿಗೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು. ಬಾಬು ಕೋಚಿಮುಲ್‌ನಲ್ಲಿ ಪ್ರಭಾವಿ ನಿರ್ದೇಶಕ ಎನಿಸಿದ್ದರು. ಈ ಕಾರಣದಿಂದ ದಾಳಿ ನಡೆದಿರಬಹುದೇ ಎನ್ನುವ ಚರ್ಚೆ ಚಿಂತಾಮಣಿಯ ರಾಜಕೀಯ ವಲಯದಲ್ಲಿ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT