ಶನಿವಾರ, 13 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Bagheera Teaser: ‘ಬಘೀರ’ನಿಗೆ ಟೀಸರ್‌ ಉಡುಗೊರೆ

Published 17 ಡಿಸೆಂಬರ್ 2023, 23:30 IST
Last Updated 17 ಡಿಸೆಂಬರ್ 2023, 23:30 IST
ಅಕ್ಷರ ಗಾತ್ರ

ನಟ ಶ್ರೀಮುರಳಿ ಜನ್ಮದಿನದ ಪ್ರಯುಕ್ತ ‘ಬಘೀರ’ ಚಿತ್ರತಂಡ ಟೀಸರ್‌ ಬಿಡುಗಡೆ ಮಾಡಿದೆ. ಮಾತಿಲ್ಲದೆ, ಬರೀ ಆ್ಯಕ್ಷನ್‌ ದೃಶ್ಯಗಳಿಂದಲೇ ಕೂಡಿರುವ ಈ ಟೀಸರ್‌ ಮುರಳಿ ಬತ್ತಳಿಕೆಯಿಂದ ಮತ್ತೊಂದು ಮಾಸ್‌ ಚಿತ್ರದ ಮುನ್ಸೂಚನೆ ನೀಡಿದೆ. ಸಮಾಜದಲ್ಲಿನ ದುಷ್ಟಶಕ್ತಿಯನ್ನು ಮಟ್ಟಹಾಕಲು ಮುಖವಾಡ ಧರಿಸಿರುವ ಶ್ರೀಮುರಳಿ ವಿಭಿನ್ನ ಗೆಟಪ್‌ನಲ್ಲಿ ಕಾಣಿಸಿಕೊಂಡಿದ್ದಾರೆ.

‘ಬಘೀರ’ನಿಗೆ ಪ್ರಶಾಂತ್‌ ನೀಲ್‌ ಕಥೆ ಬರೆದಿದ್ದು, ಸೂರಿ ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸುತ್ತಿದ್ದಾರೆ. ಹೊಂಬಾಳೆ ಫಿಲ್ಮ್ಸ್ ಈ ಚಿತ್ರವನ್ನು ನಿರ್ಮಿಸುತ್ತಿದೆ. ‘ಉಗ್ರಂ’ ಬಳಿಕ ಪ್ರಶಾಂತ್‌ ನೀಲ್‌– ಶ್ರೀಮುರಳಿ ಜೋಡಿಯ ಬಹುನಿರೀಕ್ಷಿತ ಚಿತ್ರ ಇದಾಗಿದೆ. 

‘ಕೆಜಿಎಫ್​: ಚಾಪ್ಟರ್​ 2’, ‘ಸಲಾರ್​’ ರೀತಿಯೇ ಈ ಸಿನಿಮಾ ಕೂಡ ಕಗತ್ತಲಿನಿಂದ ಕೂಡಿದೆ ಎಂಬುದಕ್ಕೆ ಸಾಕ್ಷಿಯಂತಿದೆ ಚಿತ್ರದ ಟೀಸರ್​. ಮೂರು ವರ್ಷಗಳ ಹಿಂದೆ ಘೋಷಣೆಯಾದ ಈ ಚಿತ್ರದ ಚಿತ್ರೀಕರಣ ಅಂತಿಮ ಹಂತದಲ್ಲಿದ್ದು, ಚಿತ್ರದ ತಂತ್ರಜ್ಞರ ಕುರಿತು ಯಾವುದೇ ಮಾಹಿತಿಯನ್ನು ಚಿತ್ರತಂಡ ಟೀಸರ್‌ನಲ್ಲಿ ಬಿಟ್ಟುಕೊಟ್ಟಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT