ಭಾನುವಾರ, 16 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಛತ್ತೀಸಗಢ ಗಡಿಯಲ್ಲಿ ನಕ್ಸಲ್‌ ಶಿಬಿರದ ಮೇಲೆ ದಾಳಿ: ಜಿಲೆಟಿನ್, ಸ್ಫೋಟಕ ವಶ

Published 31 ಮಾರ್ಚ್ 2024, 13:58 IST
Last Updated 31 ಮಾರ್ಚ್ 2024, 13:58 IST
ಅಕ್ಷರ ಗಾತ್ರ

ಗಢಚಿರೌಲಿ: ಮಹಾರಾಷ್ಟ್ರ–ಛತ್ತೀಸಗಢದ ಗಡಿಯಲ್ಲಿನ ನಕ್ಸಲರ ಶಿಬಿರವನ್ನು ಭೇದಿಸಿರುವ ಗಢಚಿರೌಲಿ ಪೊಲೀಸರು ಜಿಲೆಟಿನ್ ಕಡ್ಡಿಗಳು, ಸ್ಫೋಟಕಗಳು ಮತ್ತಿತರ ಸಾಮಗ್ರಿಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ಭಾನುವಾರ ಪ್ರಕಟಣೆ ತಿಳಿಸಿದೆ. 

ಚ್ಯುಟಿನ್‌ಟೋಲಾ ಗ್ರಾಮದಲ್ಲಿ ಕೆಲವು ನಕ್ಸಲರು ಬಿಡಾರ ಹೂಡಿದ್ದಾರೆ ಎಂದು ಪೊಲೀಸರಿಗೆ ಶುಕ್ರವಾರ ರಾತ್ರಿಯೇ ಬೇಹುಗಾರಿಕಾ ಸಂಸ್ಥೆಯಿಂದ ಮಾಹಿತಿ ಸಿಕ್ಕಿತ್ತು. ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ವಿಧ್ವಂಸಕ ಕೃತ್ಯಗಳನ್ನು ನಡೆಸಲು ಅವರು ಹುನ್ನಾರ ಮಾಡುತ್ತಿದ್ದಾರೆ ಎಂಬ ಎಚ್ಚರಿಕೆಯೂ ದೊರೆತಿತ್ತು ಎಂದು ಗಢಚಿರೌಲಿಯ ಎಸ್‌.ಪಿ. ನೀಲೋತ್ಪಲ್‌ ಪ್ರಕಟಣೆಯಲ್ಲಿ ಹೇಳಿದ್ದಾರೆ. 

ನಕ್ಸಲ್‌ ವಿರೋಧಿ ಕಾರ್ಯಾಚರಣೆ ಪಡೆ ಹಾಗೂ ಸಿ–60 ತಂಡಗಳು ಶನಿವಾರ ಮುಂಜಾನೆ 450 ಮೀಟರ್‌ ಎತ್ತರದ ಬೆಟ್ಟದ ಮೇಲಿನ ಶಿಬಿರದ ಮೇಲೆ ದಾಳಿ ನಡೆಸಿದವು. ನಕ್ಸಲರು ಅಷ್ಟರಲ್ಲಿ ಪರಾರಿಯಾಗಿದ್ದರು. ಸ್ಫೋಟಕಗಳಲ್ಲದೆ ವೈರ್‌ಗಳು, ಬ್ಯಾಟರಿಗಳು, ವಾಕಿ–ಟಾಕಿ ಚಾರ್ಜರ್‌ಗಳು, ಬ್ಯಾಕ್‌ಪ್ಯಾಕ್‌ಗಳು ಹಾಗೂ ನಕ್ಸಲ್‌ ಬರಹಗಳಿದ್ದ ಪುಸ್ತಕಗಳನ್ನು ವಶಪಡಿಸಿಕೊಂಡಿರುವುದಾಗಿ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ. 

ಛತ್ತೀಸಗಢ ಗಡಿಯಲ್ಲಿ ನಕ್ಸಲ್‌ ವಿರೋಧಿ ಕಾರ್ಯಾಚರಣೆಯನ್ನು ತೀವ್ರಗೊಳಿಸಿರುವುದಾಗಿಯೂ ತಿಳಿಸಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT