ಸೋಮವಾರ, 14 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ವಿಯೆಟ್ನಾಂನಲ್ಲಿ ರವೀಂದ್ರನಾಥ ಟ್ಯಾಗೋರ್‌ ಪ್ರತಿಮೆ ಅನಾವರಣ

Published : 15 ಅಕ್ಟೋಬರ್ 2023, 13:23 IST
Last Updated : 15 ಅಕ್ಟೋಬರ್ 2023, 13:23 IST
ಫಾಲೋ ಮಾಡಿ
Comments

ಹನೋಯ್‌: ವಿಯೆಟ್ನಾಂನ ಬಾಕ್ ನಿನ್ಹ್ ನಗರದಲ್ಲಿ ನಿರ್ಮಿಸಲಾಗಿರುವ, ನೊಬೆಲ್‌ ಪುರಸ್ಕೃತ ಲೇಖಕ ರವೀಂದ್ರನಾಥ  ಟ್ಯಾಗೋರ್‌ ಅವರ ಪ್ರತಿಮೆಯನ್ನು ಭಾರತದ ವಿದೇಶಾಂಗ ಸಚಿವ ಎಸ್‌.ಜೈಶಂಕರ್‌ ಅವರು ಭಾನುವಾರ ಅನಾವರಣಗೊಳಿಸಿದರು.

ನಂತರ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು, ‘ಭಾರತ ಮತ್ತು ವಿಯೆಟ್ನಾಂ ಸಂಬಂಧವು ಸುಮಾರು 2,000 ವರ್ಷಗಳಷ್ಟು ಹಳೆಯದು. ಇಲ್ಲಿ ಬೌದ್ಧ ಧರ್ಮವನ್ನು ಪರಿಚಯಿಸುವಲ್ಲಿ ಗೌತಮ ಬುದ್ಧನ ಪಾತ್ರ ಪ್ರಮುಖವಾಗಿದೆ ಎಂದು ಐತಿಹಾಸಿಕ ದಾಖಲೆಗಳು ಹೇಳುತ್ತವೆ’ ಎಂದರು.

ಟ್ಯಾಗೋರ್ ಅವರ ಕಾರ್ಯವನ್ನು ಜಗತ್ತಿನಾದ್ಯಂತ ಗುರುತಿಸುತ್ತಿರುವುದು ಕಂಡು ಸಂತಸವಾಗುತ್ತಿದೆ ಎಂದು ತಿಳಿಸಿದರು.

ಜೈಶಂಕರ್ ಅವರು ಭಾನುವಾರ ವಿಯೆಟ್ನಾಂಗೆ ಭೇಟಿ ನೀಡಿದ್ದು, ನಂತರ ಅ.19 ಮತ್ತು 20ರಂದು ಸಿಂಗಪುರಕ್ಕೆ ಭೇಟಿ ನೀಡಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT