ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ವಾತಂತ್ರ್ಯ ದಿನಾಚರಣೆ: ಪೊಲೀಸ್‌ ಪದಕಕ್ಕೆ 1,082 ಸಿಬ್ಬಂದಿ ಆಯ್ಕೆ

ರಾಜ್ಯದ ನಾಲ್ವರು ಜೈಲು ಅಧಿಕಾರಿಗಳು, ಇಬ್ಬರು ಗೃಹರಕ್ಷಕರಿಗೆ ಅತ್ಯುನ್ನತ ಸೇವಾ ಪದಕ
Last Updated 14 ಆಗಸ್ಟ್ 2022, 17:06 IST
ಅಕ್ಷರ ಗಾತ್ರ

ನವದೆಹಲಿ: ಗೃಹರಕ್ಷಕರು ಹಾಗೂ ನಾಗರಿಕ ರಕ್ಷಣೆ ವಿಭಾಗದಲ್ಲಿ ಅತ್ಯುನ್ನತ ಸೇವೆ ಸಲ್ಲಿಸಿದವರಿಗೆಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ನೀಡುವ ಪದಕಕ್ಕೆ ಕರ್ನಾಟಕದ ಇಬ್ಬರು ಸೇರಿದಂತೆ 37 ಜನರು ಆಯ್ಕೆಯಾಗಿದ್ದಾರೆ.

ಜೈಲುಗಳ ಸುಧಾರಣೆಗಾಗಿ ಕ್ರಮ ಕೈಗೊಂಡವರಿಗೆ ನೀಡುವ ಅತ್ಯುನ್ನತ ಸೇವಾ ಪದಕಕ್ಕೆ ಕರ್ನಾಟಕದ ನಾಲ್ವರು ಜೈಲು ಅಧಿಕಾರಿಗಳು ಸೇರಿದಂತೆ 38 ಮಂದಿ ಆಯ್ಕೆಯಾಗಿದ್ದಾರೆ.

ಜಮ್ಮು–ಕಾಶ್ಮೀರ ಹಾಗೂ ನಕ್ಸಲರ ವಿರುದ್ಧ ನಡೆದ ಕಾರ್ಯಾಚರಣೆಗಳಲ್ಲಿ ಭಾಗಿಯಾಗಿದ್ದವರು ಸೇರಿದಂತೆ ಒಟ್ಟು 1,082 ಪೊಲೀಸರು ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ನೀಡಲಾಗುವ ಪ್ರತಿಷ್ಠಿತ ಶೌರ್ಯ ಪದಕ ಗೌರವಕ್ಕೆ ಪಾತ್ರರಾಗಿದ್ದಾರೆ.

ಪೊಲೀಸರಿಗೆ ನೀಡುವ ಶೌರ್ಯ ಪದಕಕ್ಕೆ ಒಟ್ಟು 347 ಪೊಲೀಸರು, ವಿಶಿಷ್ಟ ಸೇವೆಗಾಗಿ ನೀಡುವ ರಾಷ್ಟ್ರಪತಿಗಳ ಪದಕಕ್ಕೆ 87 ಹಾಗೂ ಅತ್ಯುನ್ನತ ಸೇವೆಗಾಗಿ ನೀಡುವ ಪದಕಕ್ಕಾಗಿ 648 ಪೊಲೀಸರು ಆಯ್ಕೆಯಾಗಿದ್ದಾರೆ ಎಂದು ಮೂಲಗಳು ಹೇಳಿವೆ.

ಶೌರ್ಯ ಅಥವಾ ವಿಶಿಷ್ಟ ಸೇವೆಗಾಗಿ ನೀಡುವ ರಾಷ್ಟ್ರಪತಿಗಳ ಪದಕಕ್ಕೆ ಕರ್ನಾಟಕದಿಂದ ಯಾರೂ ಆಯ್ಕೆಯಾಗಿಲ್ಲ. ಅತ್ಯುನ್ನತ ಸೇವಾ ಪದಕಕ್ಕೆ ಕರ್ನಾಟಕದ 18 ಮಂದಿ ಪೊಲೀಸರು ಆಯ್ಕೆಯಾಗಿದ್ದಾರೆ.

ಶೌರ್ಯ ಪದಕಕ್ಕೆ ಗರಿಷ್ಠ 109 ಸಿಆರ್‌ಪಿಎಫ್‌ ಸಿಬ್ಬಂದಿ ಆಯ್ಕೆಯಾಗಿದ್ದಾರೆ. ಸಿಬಿಐನ ಅರು ಜನ ಅಧಿಕಾರಿಗಳು ರಾಷ್ಟ್ರಪತಿಗಳ ವಿಶಿಷ್ಟ ಸೇವಾ ಪದಕ ಹಾಗೂ 24 ಜನ ಸಿಬ್ಬಂದಿ ಅತ್ಯುನ್ನತ ಪೊಲೀಸ್‌ ಸೇವಾ ಪದಕಕ್ಕೆ ಆಯ್ಕೆಯಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT