ನವದೆಹಲಿ: 4 ವಿಮಾನಗಳಲ್ಲಿ ಬ್ರಿಟನ್ನಿನಿಂದ ದೆಹಲಿಗೆ ಆಗಮಿಸಿದ್ದ 11 ಮಂದಿಯಲ್ಲಿ ಕೋವಿಡ್ ಧೃಡಪಟ್ಟಿದೆ. ದೆಹಲಿ ವಿಮಾನನಿಲ್ದಾಣದಲ್ಲಿಯೇ ಪರೀಕ್ಷೆ ನಡೆಸಲಾಗಿದ್ದು, ಸೋಂಕು ತಗುಲಿರುವುದು ಧೃಡಪಟ್ಟಿದೆ ಎಂದು ಜೀನ್‌ಸ್ಟ್ರಿಂಗ್ ಡಯಾಗ್ನೋಸ್ಟಿಕ್ ಸೆಂಟರ್ ಸ್ಥಾಪಕಿ ಗೌರಿ ಅಗರ್‌ವಾಲ್ ತಿಳಿಸಿದ್ದಾರೆ.

ಜೀನ್‌ಸ್ಟ್ರಿಂಗ್, ದೆಹಲಿ ವಿಮಾನನಿಲ್ದಾಣದಲ್ಲಿ ಎಲ್ಲ ಪ್ರಯಾಣಿಕರಿಗೆ ಕೋವಿಡ್ ಟೆಸ್ಟ್ ಮಾಡುವ ಹೊಣೆ ಹೊತ್ತಿದೆ. ಇನ್ನೂ 4 ವಿಮಾನಗಳಲ್ಲಿ ಬಂದಿದ್ದ 50 ಪ್ರಯಾಣಿಕರನ್ನು ಸಾಂಸ್ಥಿಕ ಕ್ವಾರಂಟೈನ್‌ನಲ್ಲಿ ಇರಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಬ್ರಿಟನ್ನಿನಲ್ಲಿ ಹೊಸ ಸ್ವರೂಪದ ಕೊರೋನಾ ವೈರಸ್ ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಬ್ರಿಟನ್ನಿನಿಂದ ಭಾರತದ ವಿಮಾನ ನಿಲ್ದಾಣಗಳಲ್ಲಿ ಬಂದಿಳಿಯುವವರು ಕಡ್ಡಾಯವಾಗಿ ಕೋವಿಡ್ ಟೆಸ್ಟ್ ಮಾಡಿಸಿಕೊಳ್ಳಬೇಕೆಂದು ಕೇಂದ್ರ ಸರ್ಕಾರ ಆದೇಶಿಸಿತ್ತು.

ಇದರ ಜೊತೆಗೆ, ಬ್ರಿಟನ್ನಿಂದ ಬಂದ ಯಾವುದೇ ಒಬ್ಬ ವ್ಯಕ್ತಿಯಲ್ಲಿ ಕೋವಿಡ್ ಧೃಡಪಟ್ಟರೆ ಅವರು ಕುಳಿತಿದ್ದ ಸೀಟಿನ ಅಕ್ಕ ಪಕ್ಕ ಕುಳಿತಿದ್ದವರು. ಹಿಂದಿನ ಮೂರು ಸಾಲು ಮತ್ತು ಮುಂದಿನ ಮೂರು ಸಾಲಿನಲ್ಲಿ ಕುಳಿತಿದ್ದವರನ್ನು ಸಾಂಸ್ಥಿಕ ಕ್ವಾರಂಟೈನ್‌ಗೆ ಕಳುಹಿಸಲು ಸರ್ಕಾರ ತಿಳಿಸಿದೆ.

"ಪ್ರಯಾಣಿಕರು ಯಾವುದೇ ಪ್ರಮಾಣಪತ್ರದ ಜೊತೆ ಬಂದಿದ್ದರೂ ಎಲ್ಲವನ್ನೂ ಮೀರಿ ಸರ್ಕಾರದ ನಿರ್ದೇಶನದಂತೆ ಪ್ರಯಾಣಿಕರಿಗೆ ಕೋವಿಡ್ ಟೆಸ್ಟ್ ಮಾಡಲಾಗಿದೆ. ಟಿ3 ಟರ್ಮಿನಲ್‌ನಲ್ಲಿ ಲಂಡನ್ನಿನಿಂದ ಆಗಮಿಸಿದ 950ಕ್ಕೂ ಅಧಿಕ ಪ್ರಯಾಣಿಕರನ್ನು ಪರೀಕ್ಷೆಗೆ ಒಳಪಡಿಸಲಾಗಿದ್ದು, 11 ಮಂದಿಯಲ್ಲಿ ಕೋವಿಡ್ ಧೃಡಪಟ್ಟಿದೆ" ಎಂದು ಅಗರ್‌ವಾಲ್ ತಿಳಿಸಿದ್ದಾರೆ.

"ಕೋವಿಡ್ ಧೃಡಪಟ್ಟ 11 ಪ್ರಯಾಣಿಕರಿಗೆ ಹೊಸ ಸ್ವರೂಪದ ಕೊರೋನಾ ಸೋಂಕು ತಗುಲಿದೆಯೆ ಎಂಬುದನ್ನು ತಿಳಿಯಲು ಪ್ರಯೋಗಾಲಯದ ಮಾದರಿಯನ್ನು ದೆಹಲಿಯ ಎನ್‌ಸಿಡಿಸಿಗೆ ಕಳುಹಿಸಲಾಗಿದೆ" ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.