ಭಾನುವಾರ, ಮೇ 29, 2022
23 °C

2021ರಲ್ಲಿ ಭಾರತ–ಪಾಕಿಸ್ತಾನ ಗಡಿಯಲ್ಲಿ 2 ರಹಸ್ಯ ಸುರಂಗ ಪತ್ತೆ: ಬಿಎಸ್‌ಎಫ್

ಪಿಟಿಐ Updated:

ಅಕ್ಷರ ಗಾತ್ರ : | |

ಜಮ್ಮು: ಭಾರತ–ಪಾಕಿಸ್ತಾನ ಗಡಿಯಲ್ಲಿ 2021ರಲ್ಲಿ 2 ರಹಸ್ಯ ಸುರಂಗಗಳನ್ನು ಪತ್ತೆಹಚ್ಚಲಾಗಿತ್ತು. ಆರು ಮಂದಿ ನುಸುಳುಕೋರರನ್ನು ಹತ್ಯೆ ಮಾಡಲಾಗಿತ್ತು ಎಂದು ಗಡಿ ಭದ್ರತಾ ಪಡೆ (ಬಿಎಸ್‌ಎಫ್‌) ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

17 ಆಯುಧಗಳು, 900 ಮದ್ದುಗುಂಡುಗಳು, 30 ಸ್ಫೋಟಕಗಳು ಹಾಗೂ 38 ಕೆ.ಜಿ.ಯಷ್ಟು ಮಾದಕ ದ್ರವ್ಯಗಳನ್ನೂ ವಶಕ್ಕೆ ಪಡೆಯಲಾಗಿತ್ತು ಎಂದು ಅವರು ತಿಳಿಸಿದ್ದಾರೆ.

ಅಂತರರಾಷ್ಟ್ರೀಯ ಗಡಿಯುದ್ದಕ್ಕೂ ಬಿಎಸ್‌ಎಫ್ ಸುರಂಗ ಪತ್ತೆ ಕಾರ್ಯಾಚರಣೆ ನಡೆಸಿತ್ತು. ಆ ಸಂದರ್ಭದಲ್ಲಿ ಎರಡು ಸುರಂಗಗಳನ್ನು ಪತ್ತೆ ಮಾಡಲಾಗಿತ್ತು. ಆ ಮೂಲಕ ಪಾಕಿಸ್ತಾನದಿಂದ ಉಗ್ರರ ಒಳನುಸುಳುವಿಕೆ ಯತ್ನಗಳಿಗೆ ಕಡಿವಾಣ ಹಾಕಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಇಷ್ಟೇ ಅಲ್ಲದೆ ಅಂತರರಾಷ್ಟ್ರೀಯ ಗಡಿ ಪ್ರದೇಶಗಳಿಂದ 38.160 ಕೆ.ಜಿ. ಮಾದಕ ದ್ರವ್ಯ, 4 ಎಕೆ–47 ಬಂದೂಕುಗಳು, 339 ಸುತ್ತು ಎಕೆ ಮದ್ದುಗುಂಡು, 13 ಪಿಸ್ತೂಲ್‌ಗಳು, 371 ಪಿಸ್ತೂಲ್‌ ಗುಂಡುಗಳು, 13 ಗ್ರೆನೇಡ್‌ಗಳು, 233 ಇತರ ಮದ್ದುಗುಂಡುಗಳು, 16 ಮೀಟರ್‌ ಡಿಟೊನೇಟಿಂಗ್ ವೈರ್, ಒಂದು ವೈಯರ್‌ಲೆಸ್ ಸೆಟ್, 13 ಡಿಟೊನೇಟರ್‌ಗಳು, ಫ್ಯೂಸ್‌ಗಳನ್ನೂ ವಶಪಡಿಸಿಕೊಳ್ಳಲಾಗಿತ್ತು ಎಂದು ಬಿಎಸ್‌ಎಫ್ ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು