ಮಂಗಳವಾರ, ಜನವರಿ 18, 2022
16 °C

ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ನಿವಾಸದ 21 ಸಿಬ್ಬಂದಿಗೆ ಕೋವಿಡ್

ಐಎಎನ್‌ಎಸ್‌ Updated:

ಅಕ್ಷರ ಗಾತ್ರ : | |

ಪಟ್ನಾ: ಕೋವಿಡ್ ಮೂರನೇ ಅಲೆ ಮಧ್ಯೆ, ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಪಟ್ನಾದ ನಿವಾಸದಲ್ಲಿನ ಭದ್ರತಾ ಸಿಬ್ಬಂದಿ ಸೇರಿದಂತೆ 21 ಮಂದಿಗೆ ಬುಧವಾರ ಕೋವಿಡ್ ದೃಢಪಟ್ಟಿದೆ.

ಸೋಂಕು ಪತ್ತೆಯಾದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಜನತಾ ದರ್ಬಾರ್ ಮತ್ತು ಸಮಾಜ ಸುಧಾರ್ ಅಭಿಯಾನ (ಸಮಾಜ ಸುಧಾರಣಾ ಅಭಿಯಾನ) ಸೇರಿದಂತೆ ತನ್ನೆಲ್ಲ ಭೇಟಿ ಮತ್ತು ಕಾರ್ಯಕ್ರಮಗಳನ್ನು ಮುಂದೂಡಿದ್ದಾರೆ.

ಮೂಲಗಳ ಪ್ರಕಾರ, ಕೋವಿಡ್ 3ನೇ ಅಲೆಗೆ ಸಂಬಂಧಿಸಿದಂತೆ ಮಾತ್ರ ಮುಖ್ಯಮಂತ್ರಿ ನಿತೀಶ್ ಕುಮಾರ್ ಸಭೆಗಳನ್ನು ನಡೆಸಲಿದ್ದಾರೆ.

ಇದಕ್ಕೂ ಮುನ್ನ ತಾರ್ ಕಿಶೋರ್ ಪ್ರಸಾದ್ ಮತ್ತು ರೇಣು ದೇವಿ ಸೇರಿದಂತೆ ನಾಲ್ವರು ಸಚಿವರಿಗೆ ಕೋವಿಡ್ ದೃಢಪಟ್ಟಿತ್ತು. ವಸತಿ ಸಚಿವ ಅಶೋಕ್ ಚೌಧರಿ ಮತ್ತು ಅಬಕಾರಿ ಸಚಿವ ಸುನೀಲ್ ಕುಮಾರ್ ಅವರಿಗೂ ಸೋಂಕು ತಗುಲಿತ್ತು.

ಪಟ್ನಾದಲ್ಲಿ ನಿತೀಶ್ ಕುಮಾರ್ ಬುಧವಾರ ನಡೆಸಿದ ಉನ್ನತ ಮಟ್ಟದ ಸಭೆಯಲ್ಲಿ, ಕೋವಿಡ್ ನೆಗೆಟಿವ್ ವರದಿ ಇರುವ ಸಚಿವರು ಮತ್ತು ಅಧಿಕಾರಿಗಳು ಮಾತ್ರ ಇತರೆ ಕೆಲಸಗಳಲ್ಲಿ ಪಾಲ್ಗೊಳ್ಳಬೇಕು ಎಂದು ತೀರ್ಮಾನಿಸಲಾಗಿದೆ.

'ನನ್ನ ವರದಿ ನೆಗೆಟಿವ್ ಇರುವ ಕಾರಣ ನಾನು ಸಭೆಯಲ್ಲಿ ಪಾಲ್ಗೊಂಡಿದ್ದೆ. ಯಾವ ಸಚಿವರಿಗೆಲ್ಲ ವರದಿ ಪಾಸಿಟಿವ್ ಆಗಿದೆಯೋ ಅವರು ವರ್ಚುವಲ್ ಮೂಲಕ ಹಾಜರಾಗಿದ್ದಾರೆ. ಕೋವಿಡ್ ಪರಿಸ್ಥಿತಿ ಮತ್ತು ತಡೆಗಟ್ಟುವ ಕ್ರಮಗಳ ಕುರಿತು ಚರ್ಚಿಸಿದ್ದೇವೆ' ಎಂದು ಕೈಗಾರಿಕಾ ಸಚಿವ ಸೈಯದ್ ಶಹನವಾಜ್ ಹುಸೇನ್ ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು