ಶುಕ್ರವಾರ, ಮೇ 14, 2021
25 °C

ಉತ್ತರ ಭಾರತದಲ್ಲಿ 15 ದಿನ ಪ್ರವಾಸ: ಗುಜರಾತ್‌ನ 22 ಪ್ರವಾಸಿಗರಿಗೆ ಕೋವಿಡ್‌ ದೃಢ

ಪಿಟಿಐ‌ Updated:

ಅಕ್ಷರ ಗಾತ್ರ : | |

ಪ್ರವಾಸಿಗರು–ಸಾಂದರ್ಭಿಕ ಚಿತ್ರ

ರಿಷಿಕೇಶ: ಉತ್ತರಾಖಂಡ ಸೇರಿದಂತೆ ಉತ್ತರ ಭಾರತದಲ್ಲಿ ಹದಿನೈದು ದಿನಗಳ ಪ್ರವಾಸ ಮಾಡಿರುವ ಗುಜರಾತ್‌ನ 22 ಜನ ಪ್ರವಾಸಿಗರಿಗೆ ಕೋವಿಡ್‌–19 ದೃಢಪಟ್ಟಿರುವುದಾಗಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಮಾರ್ಚ್‌ 7ರಂದು ಗುಜರಾತ್‌ನಿಂದ ಬಸ್‌ನಲ್ಲಿ ಪ್ರಯಾಣ ಆರಂಭಿಸಿದ ಪ್ರವಾಸಿಗರು ಪುಷ್ಕರ್‌, ಜೈಪುರ, ಉದಯ್‌ಪುರ, ಮಥುರ ಹಾಗೂ ಹರಿದ್ವಾರದ ನಂತರ ಮಾರ್ಚ್‌ 18ರಂದು ರಿಷಿಕೇಶ ತಲುಪಿದ್ದಾರೆ.

'ರಿಷಿಕೇಶದಲ್ಲಿ ಥರ್ಮಲ್‌ ಸ್ಕ್ರೀನಿಂಗ್‌ ನಡೆಸಿದಾಗ ಕೆಲವರಿಗೆ ಜ್ವರದ ಲಕ್ಷಣಗಳಿರುವುದು ಪತ್ತೆಯಾಗಿತ್ತು, ಅವರ ಗಂಟಲು ದ್ರವ ಮಾದರಿಗಳನ್ನು ಸಂಗ್ರಹಿಸಿ ಮಾರ್ಚ್‌ 18ರಂದೇ ಆರ್‌ಟಿ–ಪಿಸಿಆರ್‌ ಪರೀಕ್ಷೆಗೆ ಕಳುಹಿಸಲಾಗಿತ್ತು. ಮಾರ್ಚ್‌ 22ರಂದು ಫಲಿತಾಂಶ ಬಂದಿದ್ದು, ಅವರಿಗೆ ಕೋವಿಡ್‌ ಇರುವುದು ದೃಢಪಟ್ಟಿದೆ' ಎಂದು ನರೇಂದ್ರ ನಗರದ ಉಪವಿಭಾಗದ ಕೋವಿಡ್‌ ಪ್ರಕರಣಗಳ ನಿರ್ವಹಣೆ ವಹಿಸಿರುವ ಜಗದೀಶ್‌ ಚಂದ್ರ ಜೋಶಿ ಹೇಳಿದ್ದಾರೆ.

ಗುಜರಾತ್‌ನಿಂದ ಬಸ್‌ನಲ್ಲಿ 50 ಜನರು ಪ್ರವಾಸ ಕೈಗೊಂಡಿದ್ದರು. ಅವರಲ್ಲಿ 22 ಜನರಿಗೆ ಕೊರೊನಾ ವೈರಸ್‌ ಸೋಂಕು ತಗುಲಿದೆ. ಕೋವಿಡ್‌ ದೃಢಪಟ್ಟಿರುವವರ ಸಂಪರ್ಕ ಪತ್ತೆ ಮಾಡುವ ಕಾರ್ಯ ನಡೆಸಲಾಗುತ್ತಿದೆ. ಅವರಲ್ಲಿ ಬಹುತೇಕರು ಮಹಿಳೆಯರಾಗಿದ್ದು, ಕೆಲವು ಜನ ತಪ್ಪಾದ ಸಂಪರ್ಕ ಸಂಖ್ಯೆಗಳನ್ನು ನೀಡಿರುವುದಾಗಿ ತಿಳಿಸಿದ್ದಾರೆ.

ರಿಷಿಕೇಶದಲ್ಲಿ ಪ್ರಸಿದ್ಧ ನೀಲಕಂಠ ದೇವಾಲಯದ ವರೆಗೂ ಅವರು ಪ್ರವಾಸ ಕೈಗೊಂಡಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು