ಚೆನ್ನೈ: ಎಂಟು ಜನರ ಗುಂಪು ಸತತ ಹಲವು ತಿಂಗಳ ಕಾಲ ದಲಿತ ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಘಟನೆ ತಮಿಳುನಾಡಿನ ವಿರುಧು ನಗರದಲ್ಲಿ ನಡೆದಿದೆ. ಆರೋಪಿಗಳ ಪೈಕಿ ಡಿಎಂಕೆ ಕಾರ್ಯಕರ್ತನೊಬ್ಬ ಸೇರಿದ್ದಾನೆ.
‘ಜುನೈದ್ ಅಹ್ಮದ್‌ನನ್ನು ಡಿಎಂಕೆ ಅಮಾನತು ಮಾಡಿದೆ. ಎಲ್ಲ ಆರೋಪಿ ಗಳನ್ನು ಬಂಧಿಸಲಾಗಿದೆ. ಇವರಲ್ಲಿ ನಾಲ್ವರು ಶಾಲಾ ವಿದ್ಯಾರ್ಥಿಗಳು’ ಎಂದು ಪೊಲೀಸರು ತಿಳಿಸಿದ್ದಾರೆ.
‘ಪ್ರಮುಖ ಆರೋಪಿ ಹರಿಹರನ್ ಸಾಮಾಜಿಕ ಜಾಲತಾಣದಿಂದ ಸಂತ್ರಸ್ತೆಗೆ ಪರಿಚಿತನಾಗಿದ್ದು, ಗೆಳೆ ಯ ನಾಗಿದ್ದ. ಮದುವೆ ಆಗುವುದಾಗಿ ನಂಬಿಸಿದ್ದ ಹರಿಹರನ್ ಆಕೆಯ ಜತೆಗೆ ಕಳೆದಿದ್ದ ಖಾಸಗಿ ಕ್ಷಣದ ವಿಡಿಯೊ ಮಾಡಿ ಕೊಂಡಿದ್ದ. ಹರಿಹರನ್ ಮದುವೆಗೆ ನಿರಾಕರಿಸಿದ ಬಳಿಕ ಮಹಿಳೆ ಮತ್ತೊಬ್ಬರನ್ನು ಮದುವೆಯಾಗಲು ನಿರ್ಧರಿಸಿದ್ದರು. ಆಗ ವಿಡಿಯೊ ತೋರಿಸಿ ಲೈಂಗಿಕ ದೌರ್ಜನ್ಯ ನಡೆಸಿದ್ದರು. ಇತರರೂ ಕೈಜೋಡಿಸಿದ್ದರು’ ಎಂದು ತಿಳಿಸಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.