ಭಾನುವಾರ, ಏಪ್ರಿಲ್ 2, 2023
33 °C

ಮಹಿಳೆ ಮೇಲೆ ಅತ್ಯಾಚಾರ, ಮತಾಂತರದ ಒತ್ತಾಯ: ಒಂದೇ ಕುಟುಂಬದ ಮೂವರ ಬಂಧನ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನೊಯಿಡಾ: ವಿವಾಹದ ನೆಪದಲ್ಲಿ ಮಹಿಳೆಯೊಬ್ಬರ ಮೇಲೆ ಅತ್ಯಾಚಾರವೆಸಗಿ, ಮತಾಂತರಕ್ಕೆ ಪ್ರಯತ್ನಸಿದ ಆರೋಪದ ಮೇಲೆ 30 ವರ್ಷದ ಇಂತೆಜಾರ್‌ ಖಾನ್‌ (30) ಎಂಬಾತನನ್ನು ನೊಯಿಡಾ ಬಳಿ ಬಂಧಿಸಲಾಗಿದೆ ಎಂದು ಪೊಲೀರು ಗುರುವಾರ ತಿಳಿಸಿದ್ದಾರೆ.

ಅಲ್ಲದೆ, ಈ ಸಂಚಿನಲ್ಲಿ ಭಾಗಿಯಾದ್ದಾರೆ ಎನ್ನಲಾದ ಆರೋಪಿಯ ತಮ್ಮ ಸುಹೈಲ್‌ (24) ಹಾಗೂ ತಂದೆ ಅಬ್ಬಾಸ್‌ ಅಲಿಯನ್ನೂ (52) ಬಂಧಿಸಲಾಗಿದೆ ಎಂದರು.

‘ಆರೋಪಿ ಇಂತೆಜಾರ್‌ ಸಂತ್ರೆಸ್ತೆಯನ್ನು ಶಾಹ್‌ಬೆರಿಯಲ್ಲಿನ ಜಿಮ್‌ವೊಂದರಲ್ಲಿ ಮೊದಲ ಬಾರಿಗೆ ಭೇಟಿಯಾಗಿದ್ದ. ಆ ಜಿಮ್‌ನಲ್ಲಿ ಸಂತ್ರೆಸ್ತೆಯು ವ್ಯವಸ್ಥಾಪಕಿಯಾಗಿ ಕೆಲಸ ಮಾಡುತ್ತಿದ್ದಳು. ತನ್ನನ್ನು ಸೋನು ಎಂದು ಸಂತ್ರೆಯೊಂದಿಗೆ ಪರಿಚಯಿಸಿಕೊಂಡಿದ್ದ ಇಂತೆಜಾರ್‌ ತನ್ನ ಧಾರ್ಮಿಕ ಗುರುತನ್ನು ಮುಚ್ಚಿಟ್ಟಿದ್ದ’ ಎಂದೂ ಅವರು ಹೇಳಿದರು.

‘ಆರೋಪಿಯು ತನಗೆ ವಿವಾಹದ ಆಮಿಷವೊಡ್ಡಿ ಅತ್ಯಾಚಾರ, ಹಲ್ಲೆ ನಡೆಸಿದ್ದಲ್ಲದೇ ಮತಾಂತರಕ್ಕೂ ಪ್ರಯತ್ನಿಸಿದ್ದಾಗಿ ಬಿಸ್ರಖ್‌ ಪೊಲೀಸ್‌ ಠಾಣೆಯಲ್ಲಿ ಸಂತ್ರೆಸ್ತೆಯು ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ’ ಎಂದು ಹೆಚ್ಚುವರಿ ಉಪ ಪೊಲೀಸ್‌ ಆಯುಕ್ತ (ನೊಯಿಡಾ ಕೇಂದ್ರ) ಸಾದ್‌ ಮಿಯಾ ಖಾನ್‌ ಹೇಳಿದರು.

‘ದೂರು ಸ್ವೀಕರಿಸಿದ ಕೂಡಲೇ ಭಾರತೀಯ ದಂಡ ಸಂಹಿತೆಯ ವಿವಿಧ ನಿಬಂಧನೆಗಳಡಿಯಲ್ಲಿ ಹಾಗೂ ಕಾನೂನುಬಾಹಿರ ಮತಾಂತರ ನಿಷೇಧ ಕಾಯ್ದೆಯಡಿ ಆರೋಪಿಗಳ ವಿರುದ್ಧ ಎಫ್‌ಐಆರ್‌ ದಾಖಲಿಸಿ ಮೂವರು ಆರೋಪಿಗಳನ್ನು ಬಂಧಿಸಲಾಯಿತು’ ಎಂದು ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು