ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

37 ರೈಲುಗಳು ಇನ್ನು 'ಎಕ್ಸ್‌ಪ್ರೆಸ್’

Last Updated 21 ಅಕ್ಟೋಬರ್ 2020, 18:35 IST
ಅಕ್ಷರ ಗಾತ್ರ

ನವದೆಹಲಿ: ಕರ್ನಾಟಕದ ಮೂಲಕ ಸಂಚರಿಸುವ 37 ರೈಲುಗಳನ್ನು ಎಕ್ಸ್‌ಪ್ರೆಸ್‌ ರೈಲುಗಳಾಗಿ ಪರಿವರ್ತಿಸಲು ರೈಲ್ವೆ ಮಂಡಳಿ ಬುಧವಾರ ಒಪ್ಪಿಗೆ ನೀಡಿದೆ. ದೇಶದಾದ್ಯಂತ ಒಟ್ಟು 362 ರೈಲುಗಳು ಎಕ್ಸ್‌ಪ್ರೆಸ್ ಆಗಿ
ಪರಿವರ್ತನೆ ಆಗಲಿವೆ.

ಪರಿವರ್ತಿಸಲಾದ ರೈಲುಗಳ ವೇಗವನ್ನು ಹೆಚ್ಚಿಸಲಾಗುತ್ತದೆ ಹಾಗೂ ನಿಲುಗಡೆ ಸಂಖ್ಯೆಯನ್ನು ಕಡಿತಗೊಳಿಸಲಾಗುತ್ತದೆ.200ಕ್ಕಿಂತ ಅಧಿಕ ಕಿಲೋಮೀಟರ್ ಓಡುವ ರೈಲುಗಳ ಪಟ್ಟಿಯನ್ನುವಿವಿಧ ರೈಲ್ವೆ ವಲಯಗಳು ಮಂಡಳಿಗೆ ಕಳುಹಿಸಿದ್ದವು.

ಕೋವಿಡ್‌ನಿಂದ ಸ್ಥಗಿತಗೊಂಡಿರುವ ರೈಲುಗಳ ಕಾರ್ಯಾಚರಣೆ ಸಹಜ ಸ್ಥಿತಿಗೆ ಬಂದ ಬಳಿಕ ಹೊಸ ಎಕ್ಸ್‌ಪ್ರೆಸ್ ರೈಲುಗಳು ಕಾರ್ಯಾಚರಿಸಲಿವೆ. ಸದ್ಯ ರೈಲ್ವೆಯು ವಿಶೇಷ ರೈಲುಗಳನ್ನು ಮಾತ್ರ ಓಡಿಸುತ್ತಿದೆ.

ರೈಲ್ವೆ ಇಲಾಖೆಯು ಮುಂದಿನ ದಿನಗಳಲ್ಲಿ ಪರಿಚಯಿಸಲು ಉದ್ದೇಶಿಸಿರುವ ಶೂನ್ಯ ವೇಳಾಪಟ್ಟಿಯ (ಝೀರೊ ಟೈಮ್‌ಟೇಬಲ್) ಭಾಗವಾಗಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಲಾಭದಾಯಕ ಅಲ್ಲದ ಹಾಗೂ ಕಡಿಮೆ ಜನರು ಹತ್ತಿಳಿಯುವ ನಿಲ್ದಾಣಗಳಲ್ಲಿ ನಿಲುಗಡೆಯನ್ನು ಸ್ಥಗಿತಗೊಳಿಸಲಾಗುತ್ತದೆ.

ನಿಲುಗಡೆ ತಾಣಗಳನ್ನು ರದ್ದುಗೊಳಿಸುವುದರಿಂದ ಬಡವರು ಮತ್ತು ಸಣ್ಣ ಊರುಗಳ ಪ್ರಯಾಣಿಕರಿಗೆ ತೊಂದರೆಯಾಗುತ್ತದೆ ಎಂಬ ವಾದವಿದೆ. ಆದರೆ ಹೆಚ್ಚು ಪ್ರಯಾಣಿಕರು ಇಲ್ಲದ ಹಾಗೂ ಕಾರ್ಯಸಾಧುವಲ್ಲದ ನಿಲ್ದಾಣಗಳಲ್ಲಿ ಮಾತ್ರ ನಿಲುಗಡೆ ಸ್ಥಗಿತಗೊಳಿಸುವುದಾಗಿ ಇಲಾಖೆ ತಿಳಿಸಿದೆ.

‘ಈ ನಿಲ್ದಾಣಗಳಲ್ಲಿ ಎಕ್ಸ್‌ಪ್ರೆಸ್ ರೈಲುಗಳ ನಿಲುಗಡೆ ಸ್ಥಗಿತಗೊಳಿಸಿದ್ದಕ್ಕೆ ಪರ್ಯಾಯವಾಗಿ ಬೇರೆ ರೈಲುಗಳು ಇಲ್ಲಿ ನಿಲುಗಡೆ ಆಗುವಂತೆ ವ್ಯವಸ್ಥೆ ಮಾಡಲಾಗುವುದು. ಇದರಿಂದ ಸ್ಥಳೀಯ ಪ್ರಯಾಣಿಕರಿಗೆ ಅನುಕೂಲ
ವಾಗುತ್ತದೆ’ ಎಂದು ಇಲಾಖೆ ತಿಳಿಸಿದೆ.

ಇತರೆ ಸಾರಿಗೆಗಳಿಗೆ ಹೋಲಿಸಿದರೆ ಎಕ್ಸ್‌ಪ್ರೆಸ್‌ ಆಗಿ ಪರಿವರ್ತನೆ ಆದ ರೈಲುಗಳಲ್ಲಿ ಪ್ರಯಾಣ ದರ ದುಬಾರಿ ಆಗಿರುವುದಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.

ಇಲಾಖೆಗೆ ಪ್ರಯಾಣಿಕ ರೈಲುಗಳಿಗಿಂತ ಹೆಚ್ಚಾಗಿ ಸರಕು ಸಾಗಣೆ ರೈಲುಗಳು ಆದಾಯ ತಂದುಕೊಡುತ್ತವೆ.

ಎಕ್ಸ್‌ಪ್ರೆಸ್ ಆಗಿ ಪರಿವರ್ತಿಸಲಾದ ರೈಲುಗಳು

*ಬಳ್ಳಾರಿ–ಹುಬ್ಬಳ್ಳಿ ( 51411/12)

* ಯಶವಂತಪುರ–ಮೈಸೂರು( 56215/16)

*ಕೆಎಸ್‌ಆರ್ ಬೆಂಗಳೂರು–ಶಿವಮೊಗ್ಗ ಟೌನ್ ( 56227/28)

*ಸೇಲಂ–ಯಶವಂತಪುರ ( 56241/42)

*ಅರಸೀಕೆರೆ–ಹುಬ್ಬಳ್ಳಿ( 562737/4)

*ತಾಳಗುಪ್ಪ–ಮೈಸೂರು( 56275/76)

* ಚಿಕ್ಕಮಗಳೂರು–ಯಶವಂತಪುರ ( 56277/78)

*ಬೆಂಗಳೂರು ದಂಡು–ವಿಜಯವಾಡ ( 56503/04)

*ಕಾರೈಕಲ್–ಕೆಎಸ್‌ಆರ್ ಬೆಂಗಳೂರು(56512/13)

*ಕೆಎಸ್‌ಆರ್ ಬೆಂಗಳೂರು–ಹುಬ್ಬಳ್ಳಿ(56515/16)

*ಸೊಲ್ಲಾಪುರ–ಧಾರವಾಡ( 56903/04)

*ಸೊಲ್ಲಾಪುರ–ಹುಬ್ಬಳ್ಳಿ (56905/06)

*ಕೆಎಸ್‌ಆರ್ ಬೆಂಗಳೂರು–ಹುಬ್ಬಳ್ಳಿ (56911/12)

*ಕೆಎಸ್‌ಆರ್ ಬೆಂಗಳೂರು–ಹುಬ್ಬಳ್ಳಿ( 56913/14)

*ಕೆಎಸ್‌ಆರ್ ಬೆಂಗಳೂರು–ಶಿವಮೊಗ್ಗ ಟೌನ್ (56917/18)

*ಚನ್ನಪಟ್ಟಣ–ಕೋಲಾರ (76525/26)

*ಮಂಗಳೂರು–ಮಡಗಾಂವ್ (56640/41)

* ಮಡಗಾಂವ್–ಮಂಗಳೂರು (70105/06)

* ಮಂಗಳೂರು–ಕೋಯಿಕ್ಕೋಡ್ (56654)

* ಮಂಗಳೂರು–ಕೊಯಮತ್ತೂರು (56323/24)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT