ಮಧ್ಯಪ್ರದೇಶ: ನದಿಯಲ್ಲಿ ನೀರಿನ ಮಟ್ಟ ಏಕಾಏಕಿ ಏರಿಕೆ; ಮಕ್ಕಳು, ಕಾರ್ಮಿಕರ ರಕ್ಷಣೆ

ಸಾಗರ (ಮಧ್ಯಪ್ರದೇಶ): ಮಧ್ಯಪ್ರದೇಶದಲ್ಲಿ ಸುರಿದ ಭಾರಿ ಮಳೆಯಿಂದಾಗಿ ಸುನಾರ್ ನದಿಯಲ್ಲಿ ನೀರಿನ ಮಟ್ಟ ಏಕಾಏಕಿ ಏರಿಕೆಯಾದ ಪರಿಣಾಮ ತೊಂದರೆಗೆ ಸಿಲುಕಿದ ನಾಲ್ವರು ಮಕ್ಕಳು ಸೇರಿದಂತೆ ಹಲವು ಕಾರ್ಮಿಕರನ್ನು ರಾಜ್ಯ ವಿಪತ್ತು ನಿರ್ವಹಣಾ ಪಡೆ (ಎಸ್ಡಿಆರ್ಎಫ್) ರಕ್ಷಿಸಿದೆ.
ನೀರಿನ ಮಟ್ಟ ಏರಿಕೆಯಾಗಿದ್ದರಿಂದ ನಿರ್ಮಾಣ ಹಂತದಲ್ಲಿದ್ದ ಸೇತುವೆ ದಾಟಲಾಗದೇ ಕಾರ್ಮಿಕರು ಸಂಕಷ್ಟಕ್ಕೆ ಒಳಗಾಗಿದ್ದರು. ಬಳಿಕ ಎಸ್ಡಿಆರ್ಎಫ್ ತಂಡವು ರಕ್ಷಣಾ ಕಾರ್ಯಚರಣೆ ನಡೆಸಿತ್ತು. ಸೇತುವೆಗೆ ಅಡ್ಡಲಾಗಿ ಕಟ್ಟಿದ ಹಗ್ಗಗಳ ಸಹಾಯದಿಂದ ಕಾರ್ಮಿಕರನ್ನು ರಕ್ಷಿಸಲು ನೆರವಾದರು.
ಇದನ್ನೂ ಓದಿ: ಮಹಾರಾಷ್ಟ್ರದಲ್ಲಿ ಭಾರಿ ಮಳೆ ಸಾಧ್ಯತೆ: ಹಲವೆಡೆ ಎನ್ಡಿಆರ್ಎಫ್ ತಂಡ ನಿಯೋಜನೆ
ಏತನ್ಮಧ್ಯೆ ನದಿಯ ಮತ್ತೊಂದು ದಡದಲ್ಲಿದ್ದ ನಾಲ್ವರು ಮಕ್ಕಳನ್ನು ಎಸ್ಡಿಆರ್ಎಫ್ ತಂಡ ಸುರಕ್ಷಿತವಾಗಿ ಕರೆತಂದಿದೆ.
#WATCH | Madhya Pradesh: People who were stuck on an under constructed bridge in Sagar walked on rope to rescue themselves after water level rose in the river (10.06) pic.twitter.com/d5IWoNQNVO
— ANI (@ANI) June 11, 2021
ನದಿಯಲ್ಲಿ ನೀರಿನ ಮಟ್ಟ ಏರಿದ್ದರಿಂದ ಇನ್ನೊಂದು ಬದಿಯಲ್ಲಿ ಮಕ್ಕಳು ಸಿಲುಕಿದ್ದರು. ಗುರುವಾರ ಬೆಳಗ್ಗೆ 9 ಗಂಟೆ ವೇಳೆಗೆ ಅವರು ನದಿ ದಾಟಿದ್ದರು. ಆದರೆ 10 ಗಂಟೆಯ ವೇಳೆಗೆ ನದಿಯ ನೀರಿನ ಮಟ್ಟ ಏರಿತ್ತು. ಬಳಿಕ ರಕ್ಷಣಾ ಕಾರ್ಯಾಚರಣೆ ನಡೆಸಿದ ಎಸ್ಡಿಆರ್ಎಫ್ ತಂಡ ಮಕ್ಕಳನ್ನು ರಕ್ಷಿಸಿದೆ ಎಂದು ಸಾಗರದ ಉಪ ಪೊಲೀಸ್ ವರಿಷ್ಠಾಧಿಕಾರಿ (ಎಎಸ್ಪಿ) ವಿಕ್ರಮ್ ಸಿಂಗ್ ಕುಶ್ವಾಹ ತಿಳಿಸಿದ್ದಾರೆ.
ನಿರ್ಮಾಣ ಪೂರ್ಣಗೊಳ್ಳದ ಸೇತುವೆಯಲ್ಲಿ ಕೆಲವು ಕಾರ್ಮಿಕರು ಸಿಲುಕಿದ್ದರು. ಅವರನ್ನು ಎಸ್ಡಿಆರ್ಎಫ್ ತಂಡ ರಕ್ಷಿಸಿದೆ ಎಂದವರು ಮಾಹಿತಿ ಒದಗಿಸಿದ್ದಾರೆ.
Four children were stranded on the other side of the river after the water level rose in the river. Few labourers were also stuck on an under-constructed bridge. SDRF team rescued all of them safely: Vikram Singh Kushwaha, ASP Sagar (10.06) pic.twitter.com/2ErS71geuM
— ANI (@ANI) June 11, 2021
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.