ಶನಿವಾರ, ಮೇ 21, 2022
28 °C

ಯುಎಪಿಎ ಅಡಿಯಲ್ಲಿ 4,690 ಜನರ ಬಂಧನ, 149 ಜನರು ಅಪರಾಧಿಗಳು: ಕೇಂದ್ರ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ಕಳೆದ ಮೂರು ವರ್ಷಗಳಲ್ಲಿ ಕಾನೂನುಬಾಹಿರ ಚಟುವಟಿಕೆಗಳ (ತಡೆ) ಕಾಯ್ದೆ (ಯುಎಪಿಎ)ಅಡಿಯಲ್ಲಿ ದೇಶದ ವಿವಿಧ ಭಾಗಗಳಲ್ಲಿ 4,690 ಜನರನ್ನು ಬಂಧಿಸಲಾಗಿದೆ. ಈ ಪೈಕಿ 149 ಜನರು ಅಪರಾಧಿಗಳು ಎಂದು ಸರ್ಕಾರದ ಅಂಕಿಅಂಶಗಳು ತಿಳಿಸಿವೆ.

ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ನಿತ್ಯಾನಂದ ರೈ ರಾಜ್ಯಸಭೆಯಲ್ಲಿ ಮಾತನಾಡಿ, '1,421 ಜನರನ್ನು 2018ರಲ್ಲಿ ಯುಎಪಿಎ ಅಡಿಯಲ್ಲಿ ಬಂಧಿಸಲಾಗಿದೆ. 2019ರಲ್ಲಿ 1,948 ಮತ್ತು 2020 ರಲ್ಲಿ 1,321 ಜನರನ್ನು ಬಂಧಿಸಲಾಗಿದೆ. ಇದರಲ್ಲಿ 2018ರಲ್ಲಿ 35 ಜನರು ಅಪರಾಧಿಗಳಾಗಿದ್ದು, 2019ರಲ್ಲಿ 34 ಮತ್ತು 2020ರಲ್ಲಿ 80 ಜನರು ಅಪರಾಧಿಗಳಾಗಿದ್ದಾರೆ' ಎಂದು ಮಾಹಿತಿ ನೀಡಿದ್ದಾರೆ.

ವಿಸ್ತಾರವಾದ ನ್ಯಾಯಾಂಗ ಪ್ರಕ್ರಿಯೆಯ ಫಲಿತಾಂಶವಾಗಿ ಮತ್ತು ವಿಚಾರಣೆಯ ಅವಧಿ, ಪುರವೆಗಳ ಮೌಲ್ಯಮಾಪನ, ಸಾಕ್ಷಿಗಳ ವಿಚಾರಣೆಯಂತಹ ವಿವಿಧ ಅಂಶಗಳ ಮೇಲೆ ಶಿಕ್ಷೆಯು ಅವಲಂಬಿತವಾಗಿದೆ ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ.

'ಕಾನೂನಿನ ದುರುಪಯೋಗವನ್ನು ತಡೆಗಟ್ಟಲು ಕೂಡ ಯುಎಪಿಎ ಅಡಿಯಲ್ಲಿಯೇ ಅಂತರ್ಗತ ಸುರಕ್ಷತೆಗಳು ಸೇರಿದಂತೆ ಸಾಕಷ್ಟು ಸಾಂವಿಧಾನಿಕ, ಸಾಂಸ್ಥಿಕ ಮತ್ತು ಶಾಸನಬದ್ಧ ಕ್ರಮಗಳು ಸೇರಿವೆ' ಎಂದು ಅವರು ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು