ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

7 ವರ್ಷಗಳಲ್ಲಿ ಬಿಜೆಪಿಯಿಂದ ₹2,319 ಕೋಟಿ ಕಾರ್ಪೊರೇಟ್‌ ದೇಣಿಗೆ ಸಂಗ್ರಹ: ಎಡಿಆರ್‌

Last Updated 16 ಅಕ್ಟೋಬರ್ 2020, 10:46 IST
ಅಕ್ಷರ ಗಾತ್ರ

ನವದೆಹಲಿ: 2012-13 ಮತ್ತು 2018-19ರ ನಡುವಿನ ಈ 7 ವರ್ಷಗಳಲ್ಲಿ ರಾಷ್ಟ್ರೀಯ ಪಕ್ಷಗಳಿಗೆ ಒಟ್ಟಾರೆ ₹2,818.05 ಕೋಟಿ ಕಾರ್ಪೊರೇಟ್‌ ದೇಣಿಗೆ ಹರಿದು ಬಂದಿದ್ದು, ಇದರಲ್ಲಿ ಶೇ. 82.3% ಅಥವಾ ₹2,319.48 ಕೋಟಿ ಬಿಜೆಪಿಗೇ ಲಭ್ಯವಾಗಿದೆ ಎಂದು ‘ಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ಎಡಿಆರ್)’ ಅಧ್ಯಯನ ಬಹಿರಂಗಪಡಿಸಿದೆ.

ಎಡಿಆರ್‌, ಭಾರತೀಯ ರಾಜಕೀಯ, ಚುನಾವಣೆ ವ್ಯವಸ್ಥೆ ಮೇಲೆ ಕಣ್ಣಿಟ್ಟಿರುವ, ಅಧ್ಯಯನ ಕೈಗೊಂಡಿರುವ ಖಾಸಗಿ ಸಂಸ್ಥೆ.

ಇದಕ್ಕೆ ಪ್ರತಿಯಾಗಿ, ಈ ಏಳು ವರ್ಷಗಳಲ್ಲಿ ಕಾಂಗ್ರೆಸ್ ಕೇವಲ ₹376.02 ಕೋಟಿ ದೇಣಿಗೆ ಪಡೆದುಕೊಂಡಿದ್ದರೆ, ಎನ್‌ಸಿಪಿ ₹69.81 ಕೋಟಿ, ತೃಣಮೂಲ ಕಾಂಗ್ರೆಸ್ ₹45.01 ಕೋಟಿ, ಸಿಪಿಐ-ಎಂ ₹7.5 ಕೋಟಿ, ಸಿಪಿಐ ₹22 ಲಕ್ಷ ದೇಣಿಗೆ ಸಂಗ್ರಹಿಸಿದೆ.

ಮತ್ತೊಂದು ರಾಷ್ಟ್ರೀಯ ಪಕ್ಷವಾದ ಬಿಎಸ್ಪಿ ಈ ಅವಧಿಯಲ್ಲಿ 20,000 ರೂ.ಗಿಂತ ಹೆಚ್ಚಿನ ದೇಣಿಗೆಯನ್ನು ಸ್ವೀಕರಿಸಿಲ್ಲ ಎಂದು ಘೋಷಿಸಿದೆ. ಆದರೆ ಈ ಬಗ್ಗೆ ವರದಿ ನೀಡಬೇಕಿದೆ. ತೃಣಮೂಲ ಕಾಂಗ್ರೆಸ್‌ಗೆ 2016ರ ಸೆ. 2ರಿಂದ ರಾಷ್ಟ್ರೀಯ ಪಕ್ಷದ ಸ್ಥಾನಮಾನ ಪ್ರಾಪ್ತವಾಗಿದೆ.

ಗಮನಿಸಬೇಕಾದ ಅಂಶವೆಂದರೆ, ಬಿಜೆಪಿಯು ಕೇಂದ್ರದಲ್ಲಿ ಅಧಿಕಾರದಲ್ಲಿ ಇಲ್ಲದ ವೇಳೆಯೂ ಕಾರ್ಪೊರೇಟ್‌ ದೇಣಿಗೆ ಸಂಗ್ರಹಣೆಯಲ್ಲಿ ಹಿಂದೆ ಬಿದ್ದಿಲ್ಲ. ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ಇದ್ದಾಗ 2012-13ರಲ್ಲಿ ಬಿಜೆಪಿಗೆ ₹72.99 ಕೋಟಿ ದೇಣಿಗೆ ಲಭ್ಯವಾಗಿತ್ತು. ನಂತರದ ವರ್ಷದಲ್ಲಿ ದೇಣಿಗೆ ಪ್ರಮಾಣ ₹156.98 ಕೋಟಿಗೆ ಏರಿತ್ತು. 2012–13ರಲ್ಲಿ ಕಾಂಗ್ರೆಸ್ ಕೇವಲ 7.54 ಕೋಟಿ ರೂ. ದೇಣಿಗೆ ಪಡೆದಿತ್ತು. ಇದು ಬಿಜೆಪಿ ಪಡೆದ ಒಟ್ಟಾರೆ ಮೊತ್ತದ ಹತ್ತನೇ ಒಂದು ಭಾಗವಾಗಿತ್ತು. 2013–14ರಲ್ಲಿ ಕಾಂಗ್ರೆಸ್‌ 53.51 ಕೋಟಿ ರೂ. ದೇಣಿ ಪಡೆದಿತ್ತು. ಈ ಅವಧಿಯಲ್ಲಿ ಬಿಜೆಪಿ ಪಡೆದ ಒಟ್ಟು ಮೊತ್ತದಲ್ಲಿ ಇದು ಮೂರನೇ ಒಂದು ಭಾಗ ಎಂದು ಎಡಿಆರ್‌ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT