ಗುರುವಾರ , ಡಿಸೆಂಬರ್ 1, 2022
20 °C

ರಾಘವ್‌ ಛಡ್ಡಾ ಶೀಘ್ರ ಬಂಧನ ಸಾಧ್ಯತೆ: ಕೇಜ್ರಿವಾಲ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಎಎಪಿ ನಾಯಕ ರಾಘವ್‌ ಛಡ್ಡಾ ಅವರು ಪಕ್ಷದ ಗುಜರಾತ್ ಘಟಕದ ಸಹ ಉಸ್ತುವಾರಿಯಾಗಿ ನೇಮಕವಾಗಿರುವ ಹಿನ್ನೆಲೆಯಲ್ಲಿ ಅವರನ್ನು ಬಂಧಿಸಲು ತಯಾರಿ ನಡೆಯುತ್ತಿವೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್ ಅವರು ಶುಕ್ರವಾರ ಹೇಳಿದ್ದಾರೆ.

ಈ ಕುರಿತು ಟ್ವೀಟ್‌ ಮಾಡಿರುವ ಅವರು, ‘ಗುಜರಾತ್‌ ಸಹ ಉಸ್ತುವಾರಿಯಾಗಿ ನೇಮಕರಾದ ಕಾರಣ ಮತ್ತು ಪಕ್ಷದ ಪ್ರಚಾರಗಳಲ್ಲಿ ಭಾಗವಹಿಸುತ್ತಿರುವ ಕಾರಣ ರಾಘವ್‌ ಛಡ್ಡಾ ಅವರನ್ನು ಬಂಧಿಸಲಾಗುತ್ತದೆ ಎಂಬ ಮಾತನ್ನು ನಾವು ಕೇಳುತ್ತಿದ್ದೇವೆ. ಯಾವ ಮೊಕದ್ದಮೆಯಲ್ಲಿ ಅವರನ್ನು ಬಂಧಿಸಬೇಕು ಮತ್ತು ಅವರ ವಿರುದ್ಧ ಯಾವ ಆರೋಪ ಮಾಡಬೇಕು ಎಂಬ ಕುರಿತು ಅವರು ಸದ್ಯ ಕೆಲಸ ಮಾಡುತ್ತಿದ್ದಾರೆ’ ಎಂದು ಹೇಳಿದ್ದಾರೆ. 

ದೆಹಲಿ ಅಬಕಾರಿ ನೀತಿಯಲ್ಲಿ ನಡೆಯಲಾಗಿದೆ ಎನ್ನಲಾದ ಹಗರಣದ ಮೊಕದ್ದಮೆ ಸಂಬಂಧಿಸಿ ಎಎಪಿ ಮಾಧ್ಯಮ ಸಂವಹನ ಉಸ್ತುವಾರಿ ವಿಜಯ್‌ ನಾಯರ್‌ ಅವರನ್ನು ಸಿಬಿಐ ಮಂಗಳವಾರ ಬಂಧಿಸಿತ್ತು. ಆ ಬಳಿಕ ಅವರು ಈ ಟ್ವೀಟ್‌ ಮಾಡಿದ್ದಾರೆ. 

ಕಳೆದ ವರ್ಷ ನಡೆದಿದ್ದ ಪಂಜಾಬ್‌ ವಿಧಾನಸಭೆ ಚುನಾವಣೆಯಲ್ಲಿ ಎಎಪಿ ಭಾರಿ ಗೆಲುವು ದಾಖಲಿಸಿದ್ದರಲ್ಲಿ ರಾಘವ್‌ ಅವರು ಪ್ರಮುಖ ಪಾತ್ರ ವಹಿಸಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು