ಮಂಗಳವಾರ, ಸೆಪ್ಟೆಂಬರ್ 28, 2021
21 °C

ರಾಮ ಮಂದಿರ ಟ್ರಸ್ಟ್: ಆರ್‌ಎಸ್ಎಸ್ ಮುಖ್ಯಸ್ಥರಿಗೆ ದಾಖಲೆ ಹಸ್ತಾಂತರ; ಸಂಜಯ್ ಸಿಂಗ್

ಪಿಟಿಐ Updated:

ಅಕ್ಷರ ಗಾತ್ರ : | |

AAP MP Sanjay Singh. Credit: PTI Photo

ನವದೆಹಲಿ: ರಾಮ ಮಂದಿರ ನಿರ್ಮಾಣ ಕುರಿತ ಟ್ರಸ್ಟ್ ಹೆಸರಿನಲ್ಲಿ ವಂಚನೆ ಎಸಗಲಾಗಿದೆ ಎಂದು ಆರೋಪಿಸಿರುವ ಆಮ್ ಆದ್ಮಿ ಪಕ್ಷದ ಮುಖಂಡ ಮತ್ತು ರಾಜ್ಯಸಭಾ ಸದಸ್ಯ ಸಂಜಯ್ ಸಿಂಗ್, ರಾಷ್ಟ್ರೀಯ ಸ್ವಯಂಸೇವಕ ಸಂಘದ ಮುಖ್ಯಸ್ಥ ಮೋಹನ್ ಭಾಗವತ್ ಅವರಿಗೆ ಪತ್ರ ಬರೆದಿದ್ದು, ಶೀಘ್ರವೇ ದಾಖಲೆ ಸಲ್ಲಿಸುವುದಾಗಿ ಹೇಳಿದ್ದಾರೆ.

ಭಾಗವತ್ ಅವರನ್ನು ಭೇಟಿಯಾಗಲು ಸಂಜಯ್ ಸಿಂಗ್ ಸಮಯಾವಕಾಶ ಕೋರಿದ್ದು, ಮಂದಿರ ಹೆಸರಿನಲ್ಲಿ ಭ್ರಷ್ಟಾಚಾರ ನಡೆದಿದ್ದು, ಅದಕ್ಕೆ ಸಂಬಂಧಪಟ್ಟ ಎಲ್ಲ ಸಾಕ್ಷ್ಯಗಳನ್ನು ನೀಡುವುದಾಗಿ ತಿಳಿಸಿದ್ದಾರೆ.

ಅಯೋಧ್ಯೆಯಲ್ಲಿ ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಹೆಸರಿನಲ್ಲಿ ₹2 ಕೋಟಿ ಬೆಲೆಬಾಳುವ ಭೂಮಿಯನ್ನು ₹18.5 ಕೋಟಿ ತೆತ್ತು ಖರೀದಿಸಲಾಗಿದೆ ಎಂದು ಸಂಜಯ್ ಸಿಂಗ್ ಮತ್ತು ಅಯೋಧ್ಯೆಯ ಎಸ್‌ಪಿಯ ಮಾಜಿ ಶಾಸಕ ಪವನ್ ಪಾಂಡೆ ಆರೋಪಿಸಿದ್ದರು.

ಈ ಆರೋಪಗಳ ಕುರಿತು ದಾಖಲೆ ನೀಡುವುದಾಗಿ ಸಂಜಯ್ ಸಿಂಗ್ ಹೇಳಿದ್ದು, ವಂಚನೆ ಎಸಗಿರುವ ಕುರಿತು ಮತ್ತು ಬಿಜೆಪಿ ಭ್ರಷ್ಟಾಚಾರ ಬಗ್ಗೆ ಎಲ್ಲ ಸೂಕ್ತ ದಾಖಲೆಗಳಿವೆ. ಅವುಗಳನ್ನು ಆರ್‌ಎಸ್ಎಸ್ ಮುಖ್ಯಸ್ಥರು ಗಮನಿಸಿ, ಉತ್ತರಿಸಬೇಕು ಎಂದಿದ್ದಾರೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು