ನವದೆಹಲಿ (ಪಿಟಿಐ): ದೇಶದಲ್ಲಿ ಕಳೆದ 61 ದಿನಗಳಲ್ಲಿ ಇದೇ ಮೊದಲ ಬಾರಿಗೆ ಕಳೆದ 24 ಗಂಟೆಗಳ ಅವಧಿಯಲ್ಲಿ ಸಕ್ರಿಯ ಕೋವಿಡ್ ಪ್ರಕರಣಗಳು 30,016ರಷ್ಟು ಕಡಿಮೆಯಾಗಿವೆ. ಸದ್ಯ, ಸಕ್ರಿಯ ಪ್ರಕರಣಗಳ ಸಂಖ್ಯೆ 37,15,221ರಷ್ಟಿದೆ ಎಂದು ಆರೋಗ್ಯ ಸಚಿವಾಲಯ ಪ್ರಕಟಿಸಿದೆ.

ಇದೇ ಅವಧಿಯಲ್ಲಿ ಗುಣಮುಖರಾದವರ ಸಂಖ್ಯೆ ಹೊಸ ಪ್ರಕರಣಗಳಿಗಿಂತಲೂ ಅಧಿಕವಾಗಿದೆ. ವರದಿಯಾದ ಒಟ್ಟು ಪ್ರಕರಣಗಳಲ್ಲಿ ಸದ್ಯ ಸಕ್ರಿಯವಾಗಿರುವ ಪ್ರಕರಣಗಳ ಪ್ರಮಾಣ ಶೇ 16.16 ಎಂದು ತಿಳಿಸಿದೆ.

ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ ಸೇರಿದಂತೆ 13 ರಾಜ್ಯಗಳಲ್ಲಿ ಶೇ 82.68 ಪ್ರಕರಣಗಳಿವೆ. ಅಂತೆಯೇ ಬೆಂಗಳೂರು ನಗರ, ಪುಣೆ, ದೆಹಲಿ, ನಾಗಪುರ, ಮುಂಬೈ ಒಳಗೊಂಡು ವಿವಿಧ 10 ಜಿಲ್ಲೆಗಳಲ್ಲಿ ಶೇ 24.44ರಷ್ಟು ಪ್ರಕರಣಗಳು ವರದಿಯಾಗಿವೆ ಎಂದು ಆರೋಗ್ಯ ಸಚಿವಾಲಯವು ವಿವರಿಸಿದೆ.

ಪ್ರಕರಣಗಳು ಹೆಚ್ಚು ವರದಿ ಆಗುತ್ತಿರುವ ರಾಜ್ಯಗಳೆಂದರೆ ಕರ್ನಾಟಕ , ಮಹಾರಾಷ್ಟ್ರ, ತಮಿಳುನಾಡು, ಕೇರಳ, ಉತ್ತರ ಪ್ರದೇಶ, ರಾಜಸ್ಥಾನ, ಪಶ್ಚಿಮಬಂಗಾಳ, ಆಂಧ್ರಪ್ರದೇಶ, ಬಿಹಾರ, ಮಧ್ಯಪ್ರದೇಶ, ಹರಿಯಾಣ, ಛತ್ತೀಸಗಡ.

ಕರ್ನಾಟಕದಲ್ಲಿ ಅತ್ಯಧಿಕ ಅಂದರೆ 39,035 ಹೊಸ ಪ್ರಕರಣಗಳು ವರದಿಯಾಗಿದ್ದರೆ, ನಂತರದ ಸ್ಥಾನದಲ್ಲಿ ಮಹಾರಾಷ್ಟ್ರ (37,236) ಮತ್ತು ತಮಿಳುನಾಡು (28,978) ರಾಜ್ಯಗಳಿವೆ. ದೇಶವ್ಯಾಪಿ ಸಾವಿನ ಪ್ರಮಾಣ ಒಟ್ಟು ಪ್ರಕರಣಗಳ ಶೇ 1.09ರಷ್ಟಿದೆ ಎಂದು ಸಚಿವಾಲಯವು ವಿವರಿಸಿದೆ.

ಕಳೆದ 24 ಗಂಟೆಗಳಲ್ಲಿ 3,876 ಸಾವುಗಳು ವರದಿಯಾಗಿವೆ. ಪೈಕಿ ಶೇ 73.09ರಷ್ಟು ಪ್ರಕರಣಗಳು 10 ಜಿಲ್ಲೆಗಳಲ್ಲಿವೆ. ಕರ್ನಾಟಕದಲ್ಲಿ ಅಧಿಕ ಅಂದರೆ 596 ಸಾವುಗಳು ಸಂಭವಿಸಿದ್ದರೆ, ನಂತರದ ಸ್ಥಾನದಲ್ಲಿ ಮಹಾರಾಷ್ಟ್ರ ಇದ್ದು, ಅಲ್ಲಿ 549 ಸಾವುಗಳು ಸಂಭವಿಸಿವೆ.

ಜನರ ದಾರಿ ತಪ್ಪಿಸುವುದನ್ನು ನಿಲ್ಲಿಸಿ: ಸೋನಿಯಾ ಗಾಂಧಿಗೆ ನಡ್ಡಾ ಪತ್ರ

ಲಸಿಕೆ: ಕೋವಿಡ್ ವಿರುದ್ಧ ಲಸಿಕೆ ಪಡೆದವರ ಸಂಖ್ಯೆ ಒಟ್ಟಾರೆ 17,27,10,666ಕ್ಕೆ ಏರಿದೆ. ಇವರಲ್ಲಿ 95.64 ಲಕ್ಷ ಆರೋಗ್ಯ ಕಾರ್ಯಕರ್ತರಿಗೆ ಮೊದಲ ಡೋಸ್, 65.05 ಲಕ್ಷ ಕಾರ್ಯಕರ್ತರಿಗೆ 2ನೇ ಡೋಸ್ ಲಸಿಕೆ ನೀಡಲಾಗಿದೆ. ಮುಂಚೂಣಿ ಕಾರ್ಯಕರ್ತರಲ್ಲಿ 1.40 ಕೋಟಿ ಕಾರ್ಯಕರ್ತರಿಗೆ ಮೊದಲ ಮತ್ತು 78.53 ಲಕ್ಷ ಕಾರ್ಯಕರ್ತರಿಗೆ 2ನೇ ಡೋಸ್ ಲಸಿಕೆ ನೀಡಲಾಗಿದೆ. 18–44 ವರ್ಷದೊಳಗಿನ ಒಟ್ಟು 25.59 ಲಕ್ಷ ಜನರಿಗೆ ಲಸಿಕೆಯನ್ನು ಇದುವರೆಗೂ ನೀಡಲಾಗಿದೆ ಎಂದು ಸಚಿವಾಲಯ ಮಾಹಿತಿ ನೀಡಿದೆ.

ಕೋವಿಡ್: 20-30 ದಿನದಿಂದ ಆಸ್ಪತ್ರೆಯಲ್ಲಿ, 800 ಮಂದಿ ಡಿಸ್ಚಾರ್ಜ್ಗೆ ಸಿಎಂ ಸೂಚನೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.