ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಂದರು ವಿವಾದ: ಕೇರಳದ ಪೊಲೀಸ್‌ ಠಾಣೆ ಮೇಲೆ ಸ್ಥಳೀಯರ ದಾಳಿ‌

Last Updated 28 ನವೆಂಬರ್ 2022, 5:52 IST
ಅಕ್ಷರ ಗಾತ್ರ

ವಿಝಿಞಾಂ(ಕೇರಳ): ಅದಾನಿ ಸಮೂಹದ ವಿಝಿಞಾಂ ಅಂತರರಾಷ್ಟ್ರೀಯ ಬಂದರು ಸಂಸ್ಥೆ ವಿರುದ್ಧ ಸಿಡಿದೆದ್ದಿರುವ ಮೀನುಗಾರರು ಭಾನುವಾರ ರಾತ್ರಿ ಸ್ಥಳೀಯ ಪೊಲೀಸ್‌ ಠಾಣೆ ಮೇಲೆ ದಾಳಿ ನಡೆಸಿದ್ದು, ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ಶನಿವಾರ ರಾತ್ರಿಯ ಗಲಭೆಗೆ ಸಂಬಂಧಿಸಿದಂತೆ ವಶಕ್ಕೆ ಪಡೆದಿರುವ ಐವರು ಮೀನುಗಾರರ ಬಿಡುಗಡೆಗೆ ಪ್ರತಿಭಟನಾಕಾರರು ಒತ್ತಾಯಿಸಿದ್ದಾರೆ.


2015 ರಿಂದ ನಿರ್ಮಾಣ ಹಂತದಲ್ಲಿರುವ ₹7,500 ಕೋಟಿ ಬಂದರು ಪೂರ್ಣಗೊಳಿಸುವಂತೆ ಒತ್ತಾಯಿಸುತ್ತಿದ್ದ ಸ್ಥಳೀಯ ಹಿಂದೂ ಗುಂಪುಗಳೊಂದಿಗೆ ಮೀನುಗಾರರು ವಾಗ್ವಾದಕ್ಕಿಳಿದು, ಪ್ರತಿಭಟನೆ ಹಿಂಸಾಚಾರದ ರೂಪ ತಳೆದಿತ್ತು.


ವಿಝಿಞಾಂ ಪ್ರಾಂತ್ಯದಲ್ಲಿ ನಡೆದ ಈ ಗಲಭೆಯಲ್ಲಿ 30ಕ್ಕೂ ಹೆಚ್ಚು ಪೊಲೀಸರು ಗಾಯಗೊಂಡಿದ್ದು, ಹಲವು ವಾಹನಗಳು ಹಾನಿಗೊಂಡಿದ್ದವು. ಪೊಲೀಸ್‌ ಠಾಣೆಗೆ ಮುತ್ತಿಗೆ ಹಾಕಿದ್ದ ಗುಂಪು ಚದುರಿಸಲು ಪೊಲೀಸರು ಲಾಠಿ ಪ್ರಹಾರ ನಡೆಸಿ, ಅಶ್ರವಾಯು ಪ್ರಯೋಗಿಸಿದ್ದರು. ಸದ್ಯ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿದ್ದು, ಪ್ರತಿಭಟನಾ ಸ್ಥಳದ ಸುತ್ತಲೂ ಪೊಲೀಸ್‌ ಬಿಗಿಬಂದೋಬಸ್ತ್‌ ಏರ್ಪಡಿಸಲಾಗಿದೆ.
ಶನಿವಾರದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಪೊಲೀಸರು ತಿರುವನಂತಪುರಂ ಆರ್ಚ್‌ಬಿಷಪ್ ಥಾಮಸ್ ನೆಟ್ಟೊ, ಸಹಾಯಕ ಬಿಷಪ್ ಆರ್ ಕ್ರಿಸ್ಟುದಾಸ್ ಮತ್ತು ಆರ್ಚ್‌ಡಯಾಸಿಸ್‌ನ ಹಲವಾರು ಪಾದ್ರಿಗಳ ವಿರುದ್ಧ ಪ್ರಕರಣ ದಾಖಲಿಸಿ, ಐವರು ಮೀನುಗಾರರನ್ನು ವಶಕ್ಕೆ ಪಡೆದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT