ಬುಧವಾರ, ಮೇ 25, 2022
29 °C

ಎಲ್ಲ ಮುಗಿದುಹೋಗಿದೆ: ಭಾರತಕ್ಕೆ ಬಂದ ಅಫ್ಗನ್‌ ಸಿಖ್‌ ಸಂಸದ ಕಣ್ಣೀರು

ಪ್ರಜಾವಾಣಿ ವೆಬ್‌ಡೆಸ್ಕ್‌ Updated:

ಅಕ್ಷರ ಗಾತ್ರ : | |

ನವದೆಹಲಿ: ಭಾರತೀಯ ವಾಯುಪಡೆ ವಿಮಾನದಲ್ಲಿ ಕಾಬೂಲ್‌ನಿಂದ ಭಾರತಕ್ಕೆ ಬಂದ ಅಫ್ಗಾನಿಸ್ತಾನದ ಸಿಖ್‌ ಸಂಸದ ನರೇಂದರ್‌ ಸಿಂಗ್‌ ಖಾಲ್ಸಾ ಭಾವುಕರಾದರು.

ಇದನ್ನೂ ಓದಿ:  ಅಫ್ಗಾನಿಸ್ತಾನ: ದೇವರೂ ಅಳುವ ನೆಲ!

ಅಫ್ಗಾನಿಸ್ತಾನದಿಂದ 167 ಮಂದಿಯನ್ನು ಹೊತ್ತು ತಂದ ಭಾರತೀಯ ವಾಯುಪಡೆಯ ವಿಮಾನವು ಹಿಂಡೆನ್‌ ವಾಯುನೆಲೆಯಲ್ಲಿ ಇಳಿಯಿತು. ಈ ತಂಡದಲ್ಲಿದ್ದ ನರೇಂದರ್‌ ಸಿಂಗ್‌ ಸುದ್ದಿ ಸಂಸ್ಥೆ ಎಎನ್‌ಐ ಜೊತೆಗೆ ಮಾತನಾಡಿದರು. ‘ ಕಳೆದ 20 ವರ್ಷಗಳಲ್ಲಿ ಅಫ್ಗಾನಿಸ್ತಾನದಲ್ಲಿ ಸಾಧಿಸಿದ್ದೆಲ್ಲವೂ ಹಾಳಾಗಿಹೋಗದೆ. ಈಗ ಶೂನ್ಯ ಆವರಿಸಿದೆ,‘ ಎಂದು ಅವರು ಕಣ್ಣೀರು ಹಾಕಿದರು.

ಇದೇ ವೇಳೆ ಅವರು ಭಾರತ ಸರ್ಕಾರ, ಪ್ರಧಾನಿ ನರೇಂದ್ರ ಮೋದಿ, ಭಾರತೀಯ ವಾಯುಪಡೆಗೆ ಕೃತಜ್ಞತೆ ಅರ್ಪಿಸಿದರು.

ಅಫ್ಗಾನಿಸ್ತಾನದಲ್ಲಿ ನಿಯೋಜನೆಗೊಂಡಿದ್ದ  ತನ್ನ ಭದ್ರತಾ ಪಡೆಗಳನ್ನು ಅಮೆರಿಕ ಹಿಂದಕ್ಕೆ ಪಡೆಯುತ್ತಿದೆ. ಹೀಗಾಗಿ ದೇಶದಲ್ಲಿ ಮೇಲುಗೈ ಸಾಧಿಸಿರುವ ತಾಲಿಬಾನ್‌ ಸರ್ಕಾರವನ್ನು ಉರುಳಿಸಿ, ತನ್ನ ಆಡಳಿತ ಘೋಷಿಸಿಕೊಂಡಿದೆ. 

ಇವುಗಳನ್ನೂ ಓದಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು