ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

27 ನಗರಗಳಲ್ಲಿ ಸಾವಿರ ಕಿ.ಮೀ ಮೆಟ್ರೊ ಜಾಲ: ಪ್ರಧಾನಿ ಮೋದಿ

Last Updated 18 ಜನವರಿ 2021, 9:31 IST
ಅಕ್ಷರ ಗಾತ್ರ

ಅಹಮದಾಬಾದ್: ದೇಶದ 27 ನಗರಗಳಲ್ಲಿ 1,000 ಕಿ.ಮೀ ಉದ್ದದ ಮೆಟ್ರೊ ರೈಲು ಜಾಲ ರೂಪಿಸುವ ಕಾಮಗಾರಿ ಪ್ರಗತಿಯಲ್ಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಅಹಮದಾಬಾದ್ ಮೆಟ್ರೊ ರೈಲು ಯೋಜನೆಯ ಎರಡನೇ ಹಂತ ಹಾಗೂ ಸೂರತ್ ಮಟ್ರೊ ರೈಲು ಯೋಜನೆ ಕಾಮಗಾರಿಗೆ ವಿಡಿಯೊ ಕಾನ್ಫರೆನ್ಸ್ ಮೂಲಕ ಚಾಲನೆ ನೀಡಿ ಪ್ರಧಾನಿ ಮಾತನಾಡಿದ್ದಾರೆ.

‘ಮೆಟ್ರೊಗೆ ಸಂಬಂಧಿಸಿದಂತೆ ನಮ್ಮ ದೇಶದಲ್ಲಿ ಆಧುನಿಕ ಚಿಂತನೆ, ನೀತಿ ಇಲ್ಲದ ಕಾಲವೊಂದಿತ್ತು. ಅದರ ಪರಿಣಾಮವಾಗಿ ಪ್ರತಿ ನಗರಗಳಲ್ಲಿ ಭಿನ್ನವಾದ ಮೆಟ್ರೊ ವ್ಯವಸ್ಥೆ ಇದೆ’ ಎಂದು ಮೋದಿ ಹೇಳಿದ್ದಾರೆ.

ಅಹಮದಾಬಾದ್ ಮತ್ತು ಸೂರತ್ ಮೆಟ್ರೊ ಯೋಜನೆಗಳು ಎರಡು ಪ್ರಮುಖ ಉದ್ಯಮ ಕೇಂದ್ರಗಳ ನಡುವಣ ಸಂಪರ್ಕವನ್ನು ಮತ್ತಷ್ಟು ಗಟ್ಟಿಗೊಳಿಸಲಿದೆ. ಸರ್ಕಾರವು ಸಮಗ್ರ ನಗರ ಸಾರಿಗೆ ವ್ಯವಸ್ಥೆ ಅಭಿವೃದ್ಧಿಪಡಿಸುತ್ತಿದೆ ಎಂದು ಅವರು ಹೇಳಿದ್ದಾರೆ.

ದೇಶದಾದ್ಯಂತ ಮೆಟ್ರೊ ರೈಲು ಜಾಲ ವಿಸ್ತರಣೆಯ ವೇಗ ಹೆಚ್ಚಿಸಲಾಗಿದೆ. ಇದುವೇ ಹಿಂದಿನ ಸರ್ಕಾರಗಳಿಗೂ ತಮ್ಮ ಸರ್ಕಾರಕ್ಕೂ ಇರುವ ವ್ಯತ್ಯಾಸ ಎಂದು ಮೋದಿ ಹೇಳಿದ್ದಾರೆ.

2014ರ ಮೊದಲು ಕೇವಲ 225 ಕಿ.ಮೀ ಉದ್ದದ ಮೆಟ್ರೊ ಜಾಲ ಮಾತ್ರ ಕಾರ್ಯಾಚರಣೆಗೆ ಸಿದ್ಧವಾಗಿತ್ತು. ಕಳೆದ ಆರು ವರ್ಷಗಳಲ್ಲಿ 450 ಕಿ.ಮೀ ಮೆಟ್ರೊ ಜಾಲ ಕಾರ್ಯಾಚರಣೆಗೆ ಸಿದ್ಧವಾಗಿದೆ ಎಂದೂ ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT