ಶುಕ್ರವಾರ, ಫೆಬ್ರವರಿ 3, 2023
18 °C
ಏರ್‌ ಇಂಡಿಯಾ ವಿಮಾನದ ಬ್ಯುಸಿನೆಸ್‌ ಕ್ಲಾಸ್‌ನಲ್ಲಿ ಘಟನೆ

ಮದ್ಯದ ಅಮಲಿನಲ್ಲಿ ವಿಮಾನದ ಮಹಿಳಾ ಯಾತ್ರಿ ಮೇಲೆ ಮೂತ್ರ ಮಾಡಿದ ವ್ಯಕ್ತಿ‌

ಪ್ರಜಾವಾಣಿ ವೆಬ್‌ ಡೆಸ್ಕ್‌ Updated:

ಅಕ್ಷರ ಗಾತ್ರ : | |

ನವದೆಹಲಿ: ಸಹ ಮಹಿಳಾ ಪ್ರಯಾಣಿಕರೊಬ್ಬರ ಮೇಲೆ ಮದ್ಯದ ಅಮಲಿನಲ್ಲಿ ಮೂತ್ರ ಮಾಡಿದ ವ್ಯಕ್ತಿಗೆ ವಿಮಾನ ಪ್ರಯಾಣ ನಿಷೇಧ ಹೇರಿದ್ದಾಗಿ ಏರ್‌ ಇಂಡಿಯಾ ತಿಳಿಸಿದೆ.

2022ರ ನವೆಂಬರ್‌ 26 ರಂದು ಈ ಘಟನೆ ನಡೆದಿದ್ದು, ವಿಮಾನದ ಬ್ಯುಸಿನೆಸ್ ಕ್ಲಾಸ್‌ನಲ್ಲಿ ಪ್ರಯಾಣ ಮಾಡುತ್ತಿದ್ದ ವ್ಯಕ್ತಿ ಪ್ಯಾಂಟ್‌ನ ಜಿಪ್‌ ತೆಗೆದು 70 ವರ್ಷದ ವಯಸ್ಸಿನ ಮಹಿಳೆ ಮೇಲೆ ಮೂತ್ರ ಮಾಡಿದ್ದಾನೆ. ಮದ್ಯದ ಅಮಲಿನಲ್ಲಿ ವ್ಯಕ್ತಿ ಈ ಕೃತ್ಯ ಎಸಗಿದ್ದಾನೆ. 

ವಿಮಾನವು ನ್ಯೂಯಾರ್ಕ್‌ನಿಂದ ದೆಹಲಿಗೆ ಸಂಚಾರ ಮಾಡುತ್ತಿತ್ತು.

ಮಧ್ಯಾಹ್ನದ ಭೋಜನದ ಬಳಿಕ ವಿಮಾನದ ಲೈಟ್‌ಗಳನ್ನು ಡಿಮ್‌ ಮಾಡಲಾಗಿತ್ತು. ಈ ವೇಳೆ ವ್ಯಕ್ತಿ ಮಹಿಳೆಯ ಮೇಲೆ ಮೂತ್ರ ಮಾಡಿದ್ದಾನೆ. ಇನ್ನೊಬ್ಬರು ಪ್ರಯಾಣಿಕ ಹೇಳಿದ ಬಳಿಕ ಅಲ್ಲಿಂದ ಈ ವ್ಯಕ್ತಿ ತೆರಳಿದ್ದಾನೆ.

ಘಟನೆಯ ಬಗ್ಗೆ ಮಹಿಳೆ ವಿಮಾನ ಸಿಬ್ಬಂದಿಗೆ ದೂರು ನೀಡಿದ್ದು, ತನ್ನ ಬಟ್ಟೆ, ಬ್ಯಾಗು, ಶೂ ಮೂತ್ರದಿಂದ ಒದ್ದೆಯಾಗಿದೆ ಎಂದು ತಿಳಿಸಿದ್ದಾರೆ. ಬಳಿಕ ವಿಮಾನ ಸಿಬ್ಬಂದಿ ಬೇರೆ ಬಟ್ಟೆ ಹಾಗೂ ಚಪ್ಪಲಿ ನೀಡಿದ್ದಾರೆ.

ಘಟನೆಯ ಬಗ್ಗೆ ಮಹಿಳೆ ಟಾಟಾ ಗ್ರೂಪ್‌ನ ಮುಖ್ಯಸ್ಥ ಎನ್. ಚಂದ್ರಶೇಖರ್ ಅವರಿಗೆ ಇ–ಮೇಲ್‌ ಮೂಲಕ ದೂರು ನೀಡಿದ ಬಳಿಕ ಈ ಕ್ರಮ ತೆಗೆದುಕೊಳ್ಳಲಾಗಿದೆ.

ಪ್ರಕರಣ ಸಂಬಂಧ ಪೊಲೀಸ್‌ ದೂರು ಕೂಡ ದಾಖಲಾಗಿದೆ.

ಘಟನೆ ನಡೆದ ಬಳಿಕ ಆ ಆಸನದಲ್ಲಿ ಕುಳಿತುಕೊಳ್ಳಲು ಬಯಸದ ನನಗೆ ತಮ್ಮ ಆಸನವನ್ನೇ ವಿಮಾನ ಸಿಬ್ಬಂದಿ ಕೆಲ ಹೊತ್ತು ಕೊಟ್ಟರು.  ಬಳಿಕ ನನ್ನ ಆಸನಕ್ಕೆ ಬಟ್ಟೆ ಹೊದಿಸಿ ಅಲ್ಲಿಯೇ ಕುಳಿತುಕೊಳ್ಳಲು ಹೇಳಿದರು.‌ ಆದರೆ ಆಸನ ದುರ್ನಾತ ಬೀರುತ್ತಿದ್ದರಿಂದ ಮತ್ತೊಂದು ಸಿಬ್ಬಂದಿಯ ಆಸನದಲ್ಲಿ ಕುಳಿತು ಉಳಿದ ಪ್ರಯಾಣದ ಸಮಯವನ್ನು  ಕಳೆದೆ ಎಂದು ಟಾಟಾ ಸಮೂಹದ ಮುಖ್ಯಸ್ಥರಿಗೆ ನೀಡಿದ ದೂರಿನಲ್ಲಿ ಮಹಿಳೆ ಹೇಳಿದ್ದಾರೆ.

ಪ್ರಯಾಣದ ವೇಳೆ ಬ್ಯುಸಿನೆಸ್‌ ಕ್ಲಾಸಿನ ಬೇರೆ ಸೀಟುಗಳು ಖಾಲಿ ಇದ್ದರೂ ಅದರಲ್ಲಿ ಕುಳಿತುಕೊಳ್ಳಲು ಅವಕಾಶ ನೀಡಲಿಲ್ಲ. ದೆಹಲಿಯಲ್ಲಿ ವಿಮಾನ ಲ್ಯಾಂಡ್‌ ಆದ ಬಳಿಕವೂ ಆ ವ್ಯಕ್ತಿಯ ಮೇಲೆ ಯಾವುದೇ ಕ್ರಮ ತೆಗೆದುಕೊಳ್ಳಲಿಲ್ಲ ಎಂದು ಮಹಿಳೆ ದೂರಿನಲ್ಲಿ ಹೇಳಿದ್ದಾರೆ.

ಆರೋಪಿಗೆ ವಿಮಾನ ಪ್ರಯಾಣ ನಿಷೇಧ

ಪ್ರಕರಣ ಸಂಬಂಧ ಏರ್‌ ಇಂಡಿಯಾವು ಆಂತರಿಕ ಸಮಿತಿಯೊಂದನ್ನು ರಚಿಸಿ ಆರೋಪಿಯನ್ನು ‘ನೋ ಫ್ಲೈ ಲಿಸ್ಟ್‌‘ಗೆ ಸೇರಿಸಿದೆ. ಸದ್ಯ ಪ್ರಕರಣವು ಸರ್ಕಾರದ ಸಮಿತಿಯ ಬಳಿ ಇದ್ದು, ಅದರ ನಿರ್ಧಾರ ಇನ್ನಷ್ಟೇ ಹೊರಬರಬೇಕಿದೆ. 

ನಾಗರಿಕ ವಿಮಾನಯಾನದ ಸಚಿವಾಲಯದ ನಿರ್ದೇಶಕರು, ಏರ್‌ ಇಂಡಿಯಾದಿಂದ ಹೆಚ್ಚಿನ ವಿವರ ಕೋರಿದ್ದಾರೆ. ಬೇಜವಾಬ್ದಾರಿಯುತವಾಗಿ ನಡೆದುಕೊಂಡವರ ವಿರುದ್ಧ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಅವರು ಹೇಳಿದ್ದಾರೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು