ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೇತುವೆ ಕೆಳಗೆ ಸಿಕ್ಕಿಬಿದ್ದ ಏರ್‌ ಇಂಡಿಯಾ ವಿಮಾನ: ವಿಡಿಯೋ ವೈರಲ್‌

Last Updated 5 ಅಕ್ಟೋಬರ್ 2021, 12:32 IST
ಅಕ್ಷರ ಗಾತ್ರ

ನವದೆಹಲಿ: ಏರ್‌ ಇಂಡಿಯಾ ವಿಮಾನವೊಂದು ದೆಹಲಿ ವಿಮಾನ ನಿಲ್ದಾಣದ ಸಮೀಪದ ರಸ್ತೆಯೊಂದರ ಸೇತುವೆ ಕೆಳಗೆ ಸಿಕ್ಕಿಹಾಕಿಕೊಂಡಿದ್ದ ವಿಡಿಯೊ ಸಾಮಾಜಿಕ ತಾಣಗಳಲ್ಲಿ ಭಾರಿ ಚರ್ಚೆಗೆ ಕಾರಣವಾಗಿತ್ತು.

ರನ್‌ವೇ‌ನಲ್ಲಿ ಚಲಿಸುತ್ತ ನಿಯಂತ್ರಣ ತಪ್ಪಿ ಸೇತುವೆಯ ಕೆಳಗೆ ನುಗ್ಗಿರುವ ಸಾಧ್ಯತೆ ಇದೆ ಎಂದು ಕೆಲವರು ಕಳವಳ ವ್ಯಕ್ತಪಡಿಸಿದ್ದರು. ಇನ್ನೂ ಕೆಲವರು ವಿಮಾನದ ರೆಕ್ಕೆಗಳು ಕಾಣಿಸದಿರುವುದರ ಬಗ್ಗೆ ಅನುಮಾನಗೊಂಡಿದ್ದರು.

ಭಾರಿ ವೈರಲ್‌ ಆಗಿದ್ದ ಈ ವಿಡಿಯೊದ ನೈಜತೆ ಬಗ್ಗೆ ಸಾಕಷ್ಟು ಚರ್ಚೆ ನಡೆದಿದ್ದು, ಕೊನೆಗೆ ಏರ್‌ ಇಂಡಿಯಾ ವಿಮಾನಯಾನ ಸಂಸ್ಥೆಯ ಅಧಿಕಾರಿಗಳೇ ಸ್ಪಷ್ಟನೆ ನೀಡಿದ್ದಾರೆ.

'ಪ್ರಸ್ತುತ ಈ ವಿಮಾನ ನಮ್ಮ ಸಂಸ್ಥೆಯಲ್ಲಿ ಕಾರ್ಯಾಚರಿಸುತ್ತಿಲ್ಲ. ಇದು ಗುಜರಿ ವಿಮಾನ. ಹಿಂದೆಯೇ ಇದನ್ನು ಮಾರಲಾಗಿದೆ ಮತ್ತು ನೋಂದಣಿರದ್ದು ಪಡಿಸಲಾಗಿದೆ. ಶನಿವಾರ ರಾತ್ರಿ ಖರೀದಿದಾರರು ಗುಜರಿ ವಿಮಾನವನ್ನು ಸಾಗಿಸುವ ಸಂದರ್ಭ ಸೇತುವೆ ಕೆಳಗೆ ಸಿಕ್ಕಿಹಾಕಿಕೊಂಡಿದೆ. ಈ ಘಟನೆಗೂ ಏರ್‌ ಇಂಡಿಯಾಗೂ ಸಂಬಂಧವಿಲ್ಲ' ಎಂದು ಏರ್‌ ಇಂಡಿಯಾ ತಿಳಿಸಿರುವುದಾಗಿ ಎಎನ್‌ಐ ವರದಿ ಮಾಡಿದೆ.

2019ರಲ್ಲಿ ಪಶ್ಚಿಮ ಬಂಗಾಳದ ದುರ್ಗಾಪುರದಲ್ಲಿ ಇಂತಹದ್ದೇ ಘಟನೆ ಸಂಭವಿಸಿತ್ತು. ಟ್ರಕ್‌ ಒಂದರಲ್ಲಿ ಗುಜರಿ ವಿಮಾನ ಸಾಗಿಸುವ ವೇಳೆ ಸೇತುವೆಯ ಕೆಳಗೆ ಸಿಕ್ಕಿಹಾಕಿಕೊಂಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT