ಗುರುವಾರ , ಮಾರ್ಚ್ 30, 2023
32 °C

ಕಾಶ್ಮೀರದ 50 ಸರೋವರಗಳಿಗೆ ಚಾರಣ: ಬೆಂಗಳೂರು ಮಹಿಳೆಯ ಸಾಧನೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಶ್ರೀನಗರ: ಸಂಧಿವಾತದ ಭೀತಿಯ ನಡುವೆಯೂ ಬೆಂಗಳೂರಿನ ಮಹಿಳೆಯೊಬ್ಬರು ಇಲ್ಲಿ, ಸಮುದ್ರ ಮಟ್ಟದಿಂದ 10,000 ಅಡಿ ಎತ್ತರದಲ್ಲಿರುವ 50 ಎತ್ತರದ ಸರೋವರಗಳಿಗೆ ಚಾರಣ ಕೈಗೊಳ್ಳುವ ಮೂಲಕ ದಾಖಲೆ ಮಾಡಿದ್ದಾರೆ.

ಬೆಂಗಳೂರಿನ ಬೆಳ್ಳಂದೂರಿನ ನಿವಾಸಿಯಾದ ನಮ್ರತಾ ನಂದೀಶ್‌ ಈ ಸಾಧನೆ ಮಡಿದವರು. ನಾಲ್ಕು ತಿಂಗಳಲ್ಲಿ ಚಾರಣ ಪೂರ್ಣಗೊಳಿಸಿದ್ದು, ಈ ಮೂಲಕ ‘ಅಲ್‌ಪೈನ್ ಗರ್ಲ್‌’ ಹಿರಿಮೆಗೆ ಪಾತ್ರರಾಗಿದ್ದಾರೆ. ಎತ್ತರದ ಪ್ರದೇಶದಲ್ಲಿರುವ ಸರೋವರಗಳಿಗೆ ಚಾರಣ ಕೈಗೊಂಡ ಬಹುಶಃ ಪ್ರಥಮ ಮಹಿಳೆ ಇವರು.

ದಕ್ಷಿಣ ಕಾಶ್ಮೀರದಲ್ಲಿ ಪಿರ್ ಪಂಜಲ್‌ ಮತ್ತು ಝಂಸ್ಕರ್‌ ಗಿರಿಶ್ರೇಣಿಯ ನಡುವಿನ ಟುಲಿಯಾನ್‌ ಸರೋವರದಿಂದ ಚಾರಣ ಆರಂಭಿಸಿದ್ದು, ಶಿಲ್‌ಸರ್ ಸರೋವರದ ಬಳಿ ಅಂತ್ಯಗೊಳಿಸಿದ್ದೇನೆ ಎಂದು ಪ್ರತಿಕ್ರಿಯಿಸಿದ್ದಾರೆ. 33 ವರ್ಷದ ಅವರು ಮಾಹಿತಿ ತಂತ್ರಜ್ಞಾನ ಸಂಸ್ಥೆಯೊಂದರ ಉದ್ಯೋಗಿಯಾಗಿದ್ದಾರೆ.

33 ವರ್ಷದ ಅವರು ನನ್ನ ಜನ್ಮದಿನ ನಿಮಿತ್ತ 33 ಸರೋವರಗಳಿಗೆ ಚಾರಣ ತೆರಳಲು ನಿರ್ಧರಿಸಿದೆ’ ಎಂದು ಪತಿಯೊಂದಿಗೆ ಇಲ್ಲಿಗೆ ಆಗಮಿಸಿರುವ ಅವರು ಸುದ್ದಿಸಂಸ್ಥೆಗೆ ಪ್ರತಿಕ್ರಿಯಿಸಿದರು. ಅವರು ಮಾಹಿತಿ ತಂತ್ರಜ್ಞಾನ ಸಂಸ್ಥೆಯ ಉದ್ಯೋಗಿಯಾಗಿದ್ದಾರೆ.

ಜೂನ್‌ ಮಧ್ಯಭಾಗದಲ್ಲಿ ಚಾರಣ ಕಾರ್ಯಕ್ರಮ ಆರಂಭವಾಗಿತ್ತು. ಸ್ಥಳೀಯ ಚಾರಣ ತಂಡದ ನಾಯಕ ಸೈಯದ್‌ ತಾಹಿರ್, ಬಹುತೇಕ ಸರೋವರಗಳಿಗೆ ಚಾರಣ ತೆರಳು ಮಾರ್ಗದರ್ಶನ ಮಾಡಿದ್ದರು. ‘ಅನುಭವಿ ಚಾರಣಿಗರಂತೆ ಇವರು ಗುರಿ ಮುಟ್ಟಿದರು’ ಎಂದು ತಾಹಿರ್‌ ಪ್ರತಿಕ್ರಿಯಿಸಿದರು.

ಸಾಮಾನ್ಯವಾಗಿ ಪ್ರವಾಸಿಗರು ಮೂರು ನಾಲ್ಕು ದಿನ ಚಾರಣ ಮಾಡಲು ಬಯಸುತ್ತಾರೆ. ಆದರೆ,ಇವರು ನಿರ್ದಿಷ್ಟ ಗುರಿಯೊಂದಿಗೆ ಬಂದಿದ್ದು, ಚಾರಣದ ಋತು ಆರಂಭವಾಗುವ ಮೊದಲೇ ಇಲ್ಲಿಗೆ ಬಂದಿದ್ದರು ಎಂದು ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು