ಗುರುವಾರ , ಆಗಸ್ಟ್ 11, 2022
25 °C

ರಾಷ್ಟ್ರದ ಈಗಿನ ಪರಿಸ್ಥಿತಿ ಭೀತಿಗೆ ಕಾರಣವಾಗಿದೆ: ಡಾ.ಅಮರ್ತ್ಯ ಸೇನ್ ಕಳವಳ

ಪಿಟಿಐ Updated:

ಅಕ್ಷರ ಗಾತ್ರ : | |

ಕೋಲ್ಕತ್ತ: ಯಾರಾದರೂ ಯಾವುದರ ಬಗ್ಗೆಯಾದರು ಭೀತಿಗೊಂಡಿದ್ದೀರಾ ಎಂದು ಪ್ರಶ್ನಿಸಿದರೆ ಹೌದು ಎನ್ನುತ್ತೇನೆ. ಹೆದರಿಕೆಯಾಗಲು ಈಗ ಕಾರಣವಿದೆ. ಪ್ರಸ್ತುತ ರಾಷ್ಟ್ರದಲ್ಲಿನ ಪರಿಸ್ಥಿತಿಯೇ ಈ ಭೀತಿಗೆ ಕಾರಣ ಎಂದು ನೊಬೆಲ್‌ ಪುರಸ್ಕೃತ ಡಾ. ಅಮರ್ತ್ಯ ಸೇನ್‌ ಕಳವಳ ವ್ಯಕ್ತಪಡಿಸಿದ್ದಾರೆ.

ಕೋಲ್ಕತ್ತದ ಸಾಲ್ಟ್‌ ಲೇಕ್‌ ಪ್ರದೇಶದಲ್ಲಿ ಅಮರ್ತ್ಯ ಸಂಶೋಧನಾ ಸಂಸ್ಥೆಯ ಉದ್ಘಾಟನೆಗೆ ಆಗಮಿಸಿದ್ದ ಡಾ. ಆಮರ್ತ್ಯ ಸೇನ್‌ ಅವರು ಮಾತನಾಡುತ್ತ, ರಾಷ್ಟ್ರವು ಧರ್ಮದ ಆಧಾರದಲ್ಲಿ ವಿಭಜನೆಯಾಗಬಾರದು. ಜನರು ಐಕ್ಯಮತದೆಡೆಗೆ ಸಾಗಬೇಕು ಎಂದರು.

ರಾಷ್ಟ್ರವು ಒಗ್ಗಟ್ಟಿನಿಂದ ಇರಬೇಕು ಎಂದು ಬಯಸುತ್ತೇನೆ. ಐತಿಹಾಸಿಕವಾಗಿ ಉದಾರವಾದಿಯಾಗಿರುವ ರಾಷ್ಟ್ರವು ವಿಭಜನೆಗೊಳ್ಳುವುದನ್ನು ನಾನು ನಿರೀಕ್ಷಿಸುವುದಿಲ್ಲ. ನಾವು ಜೊತೆಯಾಗಿ ಕೆಲಸ ಮಾಡಬೇಕು ಎಂದರು.

ಭಾರತವು ಕೇವಲ ಹಿಂದೂ ಅಥವಾ ಮುಸ್ಲಿಮರಿಗೆ ಸೀಮಿತವಾಗಬಾರದು. ಭಾರತ ಕೇವಲ ಹಿಂದೂಗಳ ರಾಷ್ಟ್ರವಾಗುವುದಿಲ್ಲ. ಅದರಂತೆ ಕೇವಲ ಮುಸ್ಲಿಮರಿಂದ ಭಾರತವಾಗುವುದಿಲ್ಲ. ಎಲ್ಲರೂ ಜೊತೆಗೂಡಿ ಮುಂದುವರಿಯಬೇಕು. ಭಾರತೀಯ ಸಂಪ್ರದಾಯವಾಗಿರುವ ಐಕ್ಯತೆ ಮೇಳೈಸಬೇಕು ಎಂದು ಒತ್ತಿ ಹೇಳಿದರು.

1998 ರಲ್ಲಿ ಡಾ.ಅಮರ್ತ್ಯ ಸೇನ್ ಅವರಿಗೆ ಕಲ್ಯಾಣ ಅರ್ಥಶಾಸ್ತ್ರ (Welfare economy)ಕ್ಕೆ ನೀಡಿದ ಕೊಡುಗೆಯನ್ನು ಪರಿಗಣಿಸಿ ನೊಬೆಲ್ ಪ್ರಶಸ್ತಿ ಲಭಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು