ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ವಂತ ಕಾರನ್ನು ತುರ್ತು ಸ್ಪಂದನಾ ವಾಹನವಾಗಿಸಿದ ಟೆಕಿ

Last Updated 31 ಮೇ 2021, 7:31 IST
ಅಕ್ಷರ ಗಾತ್ರ

ದೆಹಲಿ: ಐಟಿ ಕಂಪನಿ ಉದ್ಯೋಗಿಯೊಬ್ಬರು ತಮ್ಮ ಕಾರನ್ನು ತುರ್ತು ಸ್ಪಂದನಾ ವಾಹನವಾಗಿ ಪರಿವರ್ತಿಸಿದ್ದಾರೆ. ಈ ಮೂಲಕ ಕೋವಿಡ್‌ ರೋಗಿಗಳಿಗೆ ನೆರವಾಗುತ್ತಿದ್ದಾರೆ.

"ನಾನು ಒಂದು ತಿಂಗಳ ಹಿಂದೆ ಈ ಸೇವೆಯನ್ನು ಪ್ರಾರಂಭಿಸಿದೆ. ದೆಹಲಿಯ ಗೀತಾ ಕಾಲೋನಿಯ ಕೋವಿಡ್‌ ಕೇರ್‌ ಸೆಂಟರ್‌ರನ ರೋಗಿಗಳಿಗೆ ಅಗತ್ಯವಿರುವ ಔಷಧಿಗಳನ್ನು ಮತ್ತು ಇತರ ವಸ್ತುಗಳನ್ನು ಮೊದಲ ಬಾರಿಗೆ ನನ್ನ ಕಾರಿನಲ್ಲಿ ಸಾಗಿಸಿದ್ದೆ,' ಎಂದು ಎಂದು ಹಿಮಾಂಶು ನಾಗಿಯ ಹೇಳಿದರು.

'ಅದಾದ ನಂತರ ನನಗೆ ಕರೆಗಳು ಬರಲಾರಂಭಿಸಿದವು. ಈ ವರೆಗೆ ನಾನು 23ಕ್ಕೂ ಅಧಿಕ ರೋಗಿಗಳಿಗೆ, ಅವರಿರುವ ಆಸ್ಪತ್ರೆಗಳಿಗೆ ಔಷಧ ಪೂರೈಸಿದ್ದೆ. ಅದೂ, ಉಚಿತವಾಗಿ. ಈಗ ಕೋವಿಡ್‌ ಪ್ರಕರಣಗಳ ಸಂಖ್ಯೆ ಕಡಿಮೆಯಾಗಿದೆ. ಈಗ ಪೊಲೀಸರು ಮತ್ತು ಕೊರೊನಾ ವಾರಿಯರ್‌ಗಳಿಗೆ ದಿನಸಿ, ನೀರು ಮತ್ತು ತಿಂಡಿ ಪೂರೈಸುವ ಸೇವೆ ಮಾಡುತ್ತಿದ್ದೇನೆ, ' ಎಂದು ಹಿಮಾಂಶು ನಾಗಿಯ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT