ಗುರುವಾರ , ಸೆಪ್ಟೆಂಬರ್ 16, 2021
29 °C

ಆಂಧ್ರದ ಕಾಂಗ್ರೆಸ್ ಕಾರ್ಯಕರ್ತರಿಂದ ‘ಟ್ವಿಟರ್ ಬರ್ಡ್’ ಫ್ರೈ ಮಾಡಿ ಪ್ರತಿಭಟನೆ

ಡೆಕ್ಕನ್ ಹೆರಾಲ್ಡ್ Updated:

ಅಕ್ಷರ ಗಾತ್ರ : | |

ಹೈದರಾಬಾದ್: ಪಕ್ಷದ ನಾಯಕ ರಾಹುಲ್ ಗಾಂಧಿ ಅವರ ಖಾತೆಯನ್ನು ಲಾಕ್ ಮಾಡಿದ್ದ ಟ್ವಿಟರ್‌ ಕ್ರಮವನ್ನು ವಿರೋಧಿಸಿ ಆಂಧ್ರ ಪ್ರದೇಶದ ಕಾಂಗ್ರೆಸ್ ಕಾರ್ಯಕರ್ತರು ವಿಭಿನ್ನವಾಗಿ ಪ್ರತಿಭಟನೆ ಮಾಡಿದ್ದಾರೆ.

‘ಟ್ವಿಟರ್ ಬರ್ಡ್’ ಫ್ರೈ ಮಾಡಿ ‘ಟ್ವಿಟರ್‌ ಇಂಡಿಯಾ’ ಪ್ರಧಾನ ಕಚೇರಿಗೆ ಕಳುಹಿಸಿಕೊಟ್ಟಿರುವುದಾಗಿ ಕಾಂಗ್ರೆಸ್ ಕಾರ್ಯಕರ್ತರು ತಿಳಿಸಿದ್ದಾರೆ. ಫ್ರೈ ಮಾಡುತ್ತಿರುವ ಮತ್ತು ಪಕ್ಷದ ನಾಯಕರ ಟ್ವೀಟ್‌ಗಳಿಗೆ ಪ್ರಚಾರ ನೀಡದ ಟ್ವಿಟರ್‌ ನಡೆಯನ್ನು ಖಂಡಿಸಿ ಘೋಷಣೆ ಕೂಗುತ್ತಿರುವ ವಿಡಿಯೊವನ್ನು ಕಾಂಗ್ರೆಸ್‌ ನಾಯಕ ಜಿ.ವಿ.ಶ್ರೀರಾಜ್‌ ಎಂಬವರ ಫೇಸ್‌ಬುಕ್ ಖಾತೆಯಲ್ಲಿ ಪೋಸ್ಟ್ ಮಾಡಲಾಗಿದೆ.

ಓದಿ: 

ಮಾಜಿ ಸಂಸದ ಹರ್ಷ ಕುಮಾರ್ ಅವರ ಪುತ್ರ ಸಾಂಕೇತಿಕವಾಗಿ ‘ಟ್ವಿಟರ್ ಬರ್ಡ್’ ಫ್ರೈ ಮಾಡುತ್ತಿರುವ ದೃಶ್ಯ ವಿಡಿಯೊದಲ್ಲಿದೆ.

‘ಟ್ವಿಟರ್‌ ಡಿಷ್ ಸಿದ್ಧವಾಗುತ್ತಿದೆ’ ಎಂಬುದು ಮತ್ತು ‘ಡೌನ್ ಡೌನ್ ಬಿಜೆಪಿ’ ಎಂಬ ಘೋಷಣೆಗಳನ್ನೂ ವಿಡಿಯೊದಲ್ಲಿ ಕಾಣಬಹುದಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು