ಮಂಗಳವಾರ, ನವೆಂಬರ್ 29, 2022
29 °C

ಶ್ರೀನಗರದಲ್ಲಿ ಅನ್ಸರ್‌ ಘಜ್ವತ್–ಉಲ್‌–ಹಿಂದ್‌ ಉಗ್ರನ ಬಂಧನ: ಪೊಲೀಸ್ ಮಾಹಿತಿ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಶ್ರೀನಗರ: ಇಲ್ಲಿನ ಪಾಲ್ಪೋರಾ ಪ್ರದೇಶದಲ್ಲಿ ಅನ್ಸರ್‌ ಘಜ್ವತ್‌–ಉಲ್‌–ಹಿಂದ್‌ ಉಗ್ರ ಸಂಘಟನೆಯ ಭಯೋತ್ಪಾಕನೊಬ್ಬನನ್ನು ಶಸ್ತ್ರಾಸ್ತ್ರ ಹಾಗೂ ಮದ್ದುಗುಂಡುಗಳೊಂದಿಗೆ ಗುರುವಾರ ಬಂಧಿಸಲಾಗಿದೆ’ ಎಂದು ಪೊಲೀಸರು ಹೇಳಿದ್ದಾರೆ.

‘ಖಚಿತ ಮಾಹಿತಿಗಳ ಆಧಾರದ ಮೇಲೆ ಪೊಲೀಸರು ಹಾಗೂ ಸೇನಾ ಪಡೆಗಳು ಪಾಲ್ಪೋರಾದಲ್ಲಿ ವಿಶೇಷ ಚೆಕ್‌ಪೋಸ್ಟ್‌ಗಳನ್ನು ಹಾಕಿದ್ದರು. ಈ ವೇಳೆ ಪೊಲೀಸರು ಹಾಗೂ ಸೇನಾ ಪಡೆಯನ್ನು ನೋಡಿ ತಪ್ಪಿಸಿಕೊಳ್ಳಲು ಭಯೋತ್ಪಾದಕ ಪ್ರಯತ್ನಿಸಿದ. ಆಗ ಅವನನ್ನು ಬಂಧಿಸಲಾಗಿದೆ’ ಎಂದು ಪೊಲೀಸ್‌ ವಕ್ತಾರರೊಬ್ಬರು ತಿಳಿಸಿದರು.

‘ಬಂಧನದ ಬಳಿಕ ಉಗ್ರನ ಹೆಸರು ಜುನೈದ್‌ ಅಹ್ಮದ್‌ ಪಾರೆ ಎಂದು ತಿಳಿದುಬಂದಿದೆ. ಈತನಿಂದ ಒಂದು ಪಿಸ್ತೂಲು, ಒಂದು ಮ್ಯಾಗಜಿನ್‌ ಹಾಗೂ 5 ಸುತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ’ ಎಂದೂ ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು