ಮಂಗಳವಾರ, ಅಕ್ಟೋಬರ್ 4, 2022
28 °C

ಕ್ಯಾನ್ಸರ್ ಸೇರಿದಂತೆ 34 ಅಗತ್ಯ ಔಷಧಿಗಳ ಬೆಲೆ ಇಳಿಕೆ ಮಾಡಿದ ಕೇಂದ್ರ ಸರ್ಕಾರ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಕ್ಯಾನ್ಸರ್ ಚಿಕಿತ್ಸೆಗೆ ಬಳಸುವ ಔಷಧ, ಸೋಂಕು ನಿರೋಧಕ ಔಷಧಗಳು ಸೇರಿದಂತೆ ಒಟ್ಟು 34 ಔಷಧಗಳನ್ನು ರಾಷ್ಟ್ರೀಯ ಅಗತ್ಯ ಔಷಧಗಳ ಪಟ್ಟಿಗೆ ಸೇರ್ಪಡೆಗೊಳಿಸಲಾಗಿದೆ. ಇದರೊಂದಿಗೆ ಪಟ್ಟಿಯಲ್ಲಿರುವ ಔಷಧಗಳ ಒಟ್ಟು ಸಂಖ್ಯೆ 384ಕ್ಕೆ ಏರಿದೆ.

ರಾಷ್ಟ್ರೀಯ ಪಟ್ಟಿಗೆ ಸೇರಿಸುವುದರೊಂದಿಗೆ ಈ ಔಷಧಗಳ ದರವು ಸ್ವಲ್ಪಮಟ್ಟಿಗೆ ಇಳಿಯಲಿದ್ದು, ಕೈಗೆಟುಕುವಂತೆ ಇರಲಿದೆ. ಇನ್ನೊಂದೆಡೆ, ರ‍್ಯಾನಿಟೈಡೈನ್, ಸುಕ್ರಲ್‌ಫೇಟ್, ವೈಟ್‌ ಪೆಟ್ರೊಲಾಟಂ, ಅಟೆನೊಲೊಲ್‌ ಸೇರಿದಂತೆ 26 ಔಷಧಗಳನ್ನು ಪಟ್ಟಿಯಿಂದ ಕೈಬಿಡಲಾಗಿದೆ.

ಔಷಧಗಳ ದರ ಮತ್ತು ಪರ್ಯಾಯವಾಗಿ ಇನ್ನೂ ಉತ್ತಮ ಔಷಧಗಳು ಲಭ್ಯವಿದೆ ಎಂಬ ಮಾನದಂಡ ಆಧಾರದಲ್ಲಿ ಇವುಗಳನ್ನು ಕೈಬಿಡಲಾಗಿದೆ.

ಪರಿಷ್ಕೃತ ಪಟ್ಟಿ ಬಿಡುಗಡೆ ಕುರಿತು ಕೇಂದ್ರ ಆರೋಗ್ಯ ಸಚಿವ ಮನ್‌ಸುಖ್‌ ಮಾಂಡವೀಯ ಅವರು ಮಂಗಳವಾರ ಟ್ವೀಟ್‌ ಮಾಡಿದ್ದಾರೆ. 27 ವರ್ಗದಲ್ಲಿ ಒಟ್ಟು 384 ಔಷಧಗಳು ಪಟ್ಟಿಯಲ್ಲಿವೆ. ಹಲವು ರೋಗ ನಿರೋಧಕ ಔಷಧಗಳು, ಲಸಿಕೆಗಳು, ಕ್ಯಾನ್ಸರ್‌ ಚಿಕಿತ್ಸೆಗೆ ಬಳಸುವ ಔಷಧಗಳು ಇವೆ. ಇವು, ಇನ್ನಷ್ಟು ಕೈಗೆಟಕುವ ದರಕ್ಕೆ ಲಭ್ಯವಾಗಲಿದ್ದು, ರೋಗಿಗಳ ಮೇಲಿನ ಆರ್ಥಿಕ ಹೊರೆ ಇಳಿಯಲಿದೆ’ ಎಂದು ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು