ಗುರುವಾರ , ಜುಲೈ 7, 2022
23 °C

ವೇತನ, ಬಡ್ತಿ ವ್ಯಾಜ್ಯ: ಹೈಕೋರ್ಟ್‌ಗೂ ಮೇಲ್ಮನವಿ ಸಲ್ಲಿಸಲು ಸಿಬ್ಬಂದಿಗೆ ಅವಕಾಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ವೇತನ, ಪಿಂಚಣಿ ಮತ್ತು ಬಡ್ತಿಗೆ ಸಂಬಂಧಿಸಿದಂತೆ ಸೇನಾ ಪಡೆಗಳ ನ್ಯಾಯಮಂಡಳಿಯ (ಎಎಫ್‌ಟಿ) ಅಂತಿಮ ತೀರ್ಮಾನವನ್ನು ಪ್ರಶ್ನಿಸಿ ಸೇನಾ ಪಡೆಗಳ ಸದಸ್ಯರು ಹೈಕೋರ್ಟ್‌ಗಳಿಗೆ ಮೇಲ್ಮನವಿ ಸಲ್ಲಿಸಬಹುದು ಎಂದು ದೆಹಲಿ ಹೈಕೋರ್ಟ್ ಹೇಳಿದೆ.

ನ್ಯಾಯಮೂರ್ತಿಗಳಾದ ಮನಮೋಹನ್ ಮತ್ತು ನವೀನ್‌ ಚಾವ್ಲಾ ಅವರಿದ್ದ ಪೀಠವು ಈ ಆದೇಶ ನೀಡಿದೆ. ಈಗ ಸೇನಾಪಡೆಗಳ ಸದಸ್ಯರು ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲಷ್ಟೇ ಅವಕಾಶವಿದೆ. ಈಗಿನ ಪರಿಹಾರ ಕ್ರಮವು ದೇಶದ ವಿವಿಧೆಡೆ ನಿಯೋಜಿತರಾಗಿರುವ ಸಿಬ್ಬಂದಿಗೆ ವೆಚ್ಚದಾಯಕವಾಗಲಿದೆ. ಅಲ್ಲದೆ, ಅರ್ಜಿ ಸಲ್ಲಿಸುವುದೂ ಕಷ್ಟವಾಗಲಿದೆ ಎಂದು ಅಭಿಪ್ರಾಯಪಟ್ಟಿದೆ.

ಹೈಕೋರ್ಟ್‌ನ ತೀರ್ಮಾನ ಸೇನೆಯ ಅಸಂಖ್ಯಾತ ಸಿಬ್ಬಂದಿಗೆ ನಿರಾಳ ಭಾವವನ್ನು ಮೂಡಿಸಿದೆ. ಇದುವರೆಗೂ ಎಎಫ್‌ಟಿಯ ಆದೇಶ ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಮಾತ್ರ ಮೇಲ್ಮನವಿ ಸಲ್ಲಿಸಲು ಅವಕಾಶವಿತ್ತು.

ಹೈಕೋರ್ಟ್‌ಗಳಲ್ಲಿ ಈಗಾಗಲೇ ಸಾಕಷ್ಟು ಪ್ರಕರಣಗಳು ಬಾಕಿ ಉಳಿದಿವೆ. ಹೀಗಾಗಿ, ಸೇನಾ ಪಡೆಗಳ ನ್ಯಾಯಮಂಡಳಿ ಸ್ಥಾಪನೆಯ ಉದ್ದೇಶವು 2007ರ ಸಂಬಂಧಿತ ಕಾಯ್ದೆಯಲ್ಲಿ ಸ್ಪಷ್ಟವಾಗಿದೆ ಎಂದು ಕೇಂದ್ರ ಸರ್ಕಾರವು ಪ್ರತಿಪಾದಿಸಿತ್ತು. 

ಸಂವಿಧಾನದ ವಿಧಿ 226 ಮತ್ತು 227ರ ಅನುಸಾರ ಹೈಕೋರ್ಟ್‌ನ ವ್ಯಾಪ್ತಿಯನ್ನು ಮೀರಲಾಗದು ಎಂದು ಹೈಕೋರ್ಟ್‌ನ ಪೀಠವು ಇದಕ್ಕೆ ಪ್ರತಿಯಾಗಿ ಅಭಿಪ್ರಾಯಪಟ್ಟಿತು.

 

 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು