ಭಾನುವಾರ, ನವೆಂಬರ್ 28, 2021
19 °C
ವಿಶ್ವ ಪ್ರವಾಸೋದ್ಯಮ ದಿನದ ಪ್ರಯುಕ್ತ

‘ದೇಖೋ ಮೇರಿ ದಿಲ್ಲಿ‘ ಮೊಬೈಲ್ ಆ್ಯಪ್ ಬಿಡುಗಡೆ ಮಾಡಿದ ದೆಹಲಿ ಸರ್ಕಾರ

ಪ್ರಜಾವಾಣಿ ವೆಬ್‌ಡೆಸ್ಕ್‌‌ Updated:

ಅಕ್ಷರ ಗಾತ್ರ : | |

ನವದೆಹಲಿ: ವಿಶ್ವ ಪ್ರವಾಸೋದ್ಯಮ ದಿನದ ಪ್ರಯುಕ್ತ ಇಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ‘ದೇಖೋ ಮೇರಿ ದಿಲ್ಲಿ‘ ಎಂಬ ಮೊಬೈಲ್ ಆ್ಯಪ್ ಬಿಡುಗಡೆ ಮಾಡಿದ್ದಾರೆ.‌

‘ಪ್ರವಾಸೋದ್ಯಮವನ್ನು ಉತ್ತೇಜಿಸುವ ನಿಟ್ಟಿನಲ್ಲಿ ಈ ಕ್ಷೇತ್ರವನ್ನು ಸಂಪೂರ್ಣ ಡಿಜಿಟಲೀಕರಣ ಮಾಡುತ್ತಿದ್ದೇವೆ. ‘ದೇಖೋ ಮೇರಿ ದಿಲ್ಲಿ‘ ಆ್ಯಪ್ ಮೂಲಕ ಪ್ರವಾಸಿಗರು ದೆಹಲಿ ಪ್ರವಾಸವನ್ನು ಅತ್ಯಂತ ಸುಲಭಗೊಳಿಸಿಕೊಳ್ಳಬಹುದು‘ ಎಂದು ಅರವಿಂದ ಕೇಜ್ರಿವಾಲ್ ಹೇಳಿದ್ದಾರೆ.

‘ಒಂದೇ ವೇದಿಕೆಯಲ್ಲಿ ದೆಹಲಿ ಪ್ರವಾಸಿ ತಾಣಗಳ ಬಗ್ಗೆ, ಮನೋರಂಜನಾ ತಾಣಗಳ ಬಗ್ಗೆ ಹಾಗೂ ವಸ್ತು ಸಂಗ್ರಹಾಲಯಗಳ ಬಗ್ಗೆ ಸ್ಪಷ್ಟ ಮಾಹಿತಿ, ಸಮಗ್ರ ವಿವರ ತಿಳಿದುಕೊಳ್ಳಬಹದು. ಅಲ್ಲದೇ ಅದೇ ಆ್ಯಪ್‌ನಲ್ಲಿ ಭೇಟಿಯ ಮುಂಗಡ ಟಿಕೆಟ್‌ಗಳನ್ನು ಕಾಯ್ದಿರಿಸಿಕೊಳ್ಳಬಹುದಾಗಿದೆ. ಪ್ರವಾಸಿ ತಾಣದ ಐದು ಕಿಮೀ ಸುತ್ತಮುತ್ತ ಇರುವ ಹೋಟೆಲ್‌, ಲಾಡ್ಜ್‌ಗಳ ಬಗ್ಗೆ ಮಾಹಿತಿ ಹಾಗೂ ಬುಕ್ಕಿಂಗ್ ಸೌಲಭ್ಯ ಪಡೆಯಬಹುದು. ನ್ಯಾವಿಗೇಷನ್ ಸೌಲಭ್ಯ ಇರಲಿದೆ‘ ಎಂದು ಕೇಜ್ರಿವಾಲ್ ತಿಳಿಸಿದ್ದಾರೆ.

 

‘ನಮ್ಮ ಸರ್ಕಾರ ಪ್ರವಾಸೋದ್ಯಮಕ್ಕೆ ಹೆಚ್ಚಿನ ಉತ್ತೇಜನ ನೀಡುತ್ತಿದ್ದು, ದೆಹಲಿಯನ್ನು ವಿಶ್ವಮಟ್ಟದಲ್ಲಿ ಶ್ರೇಷ್ಠ ಪ್ರವಾಸಿ ತಾಣವನ್ನಾಗಿ ಮಾಡಲು ಇನ್ನಷ್ಟು ವ್ಯಾಪಕ ಕ್ರಮಗಳನ್ನು ಕೈಗೊಳ್ಳುವುದಾಗಿ‘ ಅವರು ಟ್ವೀಟ್ ಮುಖಾಂತರ ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು