ಭಾನುವಾರ, ಆಗಸ್ಟ್ 14, 2022
28 °C

ಅಸಾದುದ್ದೀನ್ ಓವೈಸಿ ನೇತೃತ್ವದ ಎಐಎಂಐಎಂನ ಅಧಿಕೃತ ಟ್ವಿಟರ್ ಖಾತೆ ಹ್ಯಾಕ್

ಪಿಟಿಐ Updated:

ಅಕ್ಷರ ಗಾತ್ರ : | |

ಹೈದರಾಬಾದ್: ಅಸಾದುದ್ದೀನ್ ಓವೈಸಿ ನೇತೃತ್ವದ ಆಲ್ ಇಂಡಿಯಾ ಮಜಿಲಿಸ್-ಇ-ಇತ್ಹೇದುಲ್‌ ಮುಸ್ಲೀಮೀನ್ (ಎಐಎಂಐಎಂ) ನ ಅಧಿಕೃತ ಟ್ವಿಟರ್ ಖಾತೆಯನ್ನು ಭಾನುವಾರ 'ಹ್ಯಾಕ್' ಮಾಡಲಾಗಿದ್ದು, ಹ್ಯಾಕರ್‌ಗಳು ಪ್ರೊಫೈಲ್ ಹೆಸರನ್ನು 'ಎಲಾನ್ ಮಸ್ಕ್' ಎಂದು ಬದಲಾಯಿಸಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಇದೇ ಖಾತೆಯನ್ನು ಒಂಬತ್ತು ದಿನಗಳ ಹಿಂದೆ ಹ್ಯಾಕ್ ಮಾಡಲಾಗಿತ್ತು. ಬಳಿಕ ಮತ್ತೆ ಮರುಸ್ಥಾಪಿಸಲಾಗಿತ್ತು. ಆದರೆ ಇಂದು ಮಧ್ಯಾಹ್ನ 1 ಗಂಟೆ ಸುಮಾರಿಗೆ ಮತ್ತೆ ಖಾತೆಯನ್ನು ಹ್ಯಾಕ್ ಮಾಡಲಾಗಿದೆ ಎಂದು ತಿಳಿಸಿವೆ. ಇದೇ ವೇಳೆ ಹ್ಯಾಕರ್‌ಗಳು ಟ್ವಿಟರ್ ಪ್ರೊಫೈಲ್ ಹೆಸರನ್ನು ಎಐಎಂಐಎಂನಿಂದ 'ಎಲಾನ್ ಮಸ್ಕ್' ಎಂದು ಬದಲಾಯಿಸಿದ್ದಾರೆ ಮತ್ತು ಫ್ರೊಫೈಲ್ ಚಿತ್ರವನ್ನು ಕೂಡ ಬದಲಿಸಿದ್ದು, ಟೆಸ್ಲಾ ಸಿಇಒನ ಚಿತ್ರವನ್ನು ಹಾಕಿದ್ದಾರೆ.

'9 ದಿನಗಳ ಹಿಂದೆಯಷ್ಟೇ ಎಐಎಂಐಎಂನ ಟ್ವಿಟ್ಟರ್ ಖಾತೆಯನ್ನು ಹ್ಯಾಕ್ ಮಾಡಲಾಗಿತ್ತು. ಆದರೆ ನಾವು ಟ್ವಿಟರ್‌ಗೆ ವಿಚಾರ ತಿಳಿಸಿದಾಗ ಖಾತೆಯನ್ನು ಮರುಸ್ಥಾಪಿಸಲಾಗಿತ್ತು. ಈಗ ಮತ್ತೆ ಖಾತೆಯನ್ನು ಹ್ಯಾಕ್ ಮಾಡಲಾಗಿದೆ' ಎಂದು ಹೈದರಾಬಾದ್ ಪ್ರಧಾನ ಕಚೇರಿಯ ವಕ್ತಾರರು ತಿಳಿಸಿದ್ದಾರೆ.

ಈ ಬಗ್ಗೆ ಹೈದರಾಬಾದ್ ಪೊಲೀಸರಿಗೆ ಸೋಮವಾರ ದೂರು ನೀಡಲಾಗುವುದು, ಸದ್ಯಕ್ಕೆ ಖಾತೆಯಲ್ಲಿ ಯಾವುದೇ ಟ್ವೀಟ್‌ಗಳನ್ನು ಮಾಡಲಾಗಿಲ್ಲ ಎಂದು ತಿಳಿಸಿದ್ದಾರೆ. ಎಐಎಂಐಎಂ ಟ್ವಿಟರ್ ಖಾತೆಯು ಸುಮಾರು 6.78 ಲಕ್ಷ ಫಾಲೋವರ್‌ಗಳನ್ನು ಹೊಂದಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು