ಶುಕ್ರವಾರ, ಸೆಪ್ಟೆಂಬರ್ 17, 2021
23 °C
ಮೋದಿ ಭೇಟಿ ಮಾಡಿದ ಈಶಾನ್ಯ ಭಾಗದ ಬಿಜೆಪಿ ಸಂಸದರ ನಿಯೋಗ

ಅಸ್ಸಾಂ-ಮಿಜೋರಾಂ: ಗಡುವಿನೊಳಗೆ ಗಡಿ ವಿವಾದ ಪರಿಹಾರ- ಪ್ರಧಾನಿ ಮೋದಿ ಭರವಸೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಅಸ್ಸಾಂ-ಮಿಜೋರಾಂ ಗಡಿ ಸಮಸ್ಯೆಯನ್ನು ನಿಗದಿತ ಕಾಲಮಿತಿಯೊಳಗೆ ಬಗೆಹರಿಸಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಈಶಾನ್ಯ ರಾಜ್ಯಗಳ ಸಂಸದರ ನಿಯೋಗಕ್ಕೆ ಸೋಮವಾರ ಭರವಸೆ ನೀಡಿದರು. ಅಸ್ಸಾಂ ಮತ್ತು ಮಿಜೋರಾಂ ನಡುವೆ ಇತ್ತೀಚೆಗೆ ಉಂಟಾಗಿದ್ದ ಗಡಿ ಉದ್ವಿಗ್ನತೆಯ ಹಿನ್ನೆಲೆಯಲ್ಲಿ, ಈಶಾನ್ಯ ರಾಜ್ಯಗಳ ಬಿಜೆಪಿ ಸಂಸದರು ಪ್ರಧಾನಿ ಮೋದಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು. 

ಕೇಂದ್ರ ಸಚಿವರಾದ ಸರ್ವಾನಂದ ಸೋನೊವಾಲ್, ಕಿರಣ್ ರಿಜಿಜು, ಪ್ರತಿಮಾ ಭೌಮಿಕ್, ರಾಮೇಶ್ವರ ತೇಲಿ ಸೇರಿದಂತೆ ಸಂಸದರ ನಿಯೋಗವು ಪ್ರಧಾನಿಯನ್ನು ಭೇಟಿಯಾಗಿ ತಮ್ಮ ರಾಜ್ಯಗಳಿಗೆ ಸಂಬಂಧಿಸಿದ ಸಮಸ್ಯೆಗಳು, ಇತರ ನೆರೆಯ ರಾಜ್ಯಗಳು ಹಾಗೂ ಅಸ್ಸಾಂ ನಡುವೆ ನಡೆಯುತ್ತಿರುವ ಗಡಿ ವಿವಾದವನ್ನೂ ಚರ್ಚಿಸಿತು.

ಅಸ್ಸಾಂನಿಂದ 12, ಅರುಣಾಚಲ ಪ್ರದೇಶದಿಂದ ಇಬ್ಬರು ಮತ್ತು ಮಣಿಪುರ ಮತ್ತು ತ್ರಿಪುರಾದ ತಲಾ ಒಬ್ಬರು ಸೇರಿ ಒಟ್ಟು 16 ಸಂಸದರು  ಸಭೆಯಲ್ಲಿ ಇದ್ದರು.

‘ಈ ಸಮಸ್ಯೆಯನ್ನು ಸಕಾರಾತ್ಮಕ ರೀತಿಯಲ್ಲಿ ಮತ್ತು ನಿಗದಿತ ಕಾಲಮಿತಿಯೊಳಗೆ ಪರಿಹರಿಸುವುದಾಗಿ ಪ್ರಧಾನಿ ನಮಗೆ ಭರವಸೆ ನೀಡಿದ್ದಾರೆ’ ಎಂದು ಅಸ್ಸಾಂನ ಬಿಜೆಪಿ ಲೋಕಸಭಾ ಸದಸ್ಯ ದಿಲೀಪ್ ಸೈಕಿಯಾ ಸಭೆಯ ನಂತರ ಸುದ್ದಿಗಾರರಿಗೆ ತಿಳಿಸಿದರು. 

ಕಾಂಗ್ರೆಸ್ ‍ಪಕ್ಷವು ಇಂತಹ ಸೂಕ್ಷ್ಮ ವಿಚಾರದಲ್ಲಿ ರಾಜಕೀಯ ಮಾಡುತ್ತಿದೆ ಎಂದು ಆರೋಪಿಸಿದ ಕೇಂದ್ರ ಸಚಿವ ಕಿರಣ್ ರಿಜಿಜು, ವಿದೇಶಿ ಶಕ್ತಿಗಳು ಪ್ರಚೋದನಾತ್ಮಕ ಹೇಳಿಕೆಗಳನ್ನು ನೀಡುವ ಮೂಲಕ ಈಶಾನ್ಯ ರಾಜ್ಯಗಳಲ್ಲಿ ಉದ್ವಿಗ್ನತೆ ಹೆಚ್ಚಿಸುತ್ತಿದೆ ಎಂದರು. 

ಕಳೆದ ಕೆಲವು ದಿನಗಳಿಂದ
ಎರಡೂ ರಾಜ್ಯಗಳ ಜನರಲ್ಲಿ ಆತ್ಮವಿಶ್ವಾಸವನ್ನು ಹೆಚ್ಚಿಸುವ ಯತ್ನಗಳು ಸಹ ನಡೆದಿವೆ ಎಂದು ಸಂಸದರು ಗಮನ ಸೆಳೆದರು.

‘ಅಸ್ಸಾಂ-ಮಿಜೋರಾಂ ಸಮಸ್ಯೆ
ಯನ್ನು ಭಾರತದಲ್ಲಿ ಗೊಂದಲ ಹರಡುವ ಸಾಧನವಾಗಿ ಬಳಸಿಕೊಳ್ಳುವ ಹುನ್ನಾ
ರವು ಯಶಸ್ವಿಯಾಗುವುದಿಲ್ಲ’ ಎಂಬು
ದಾಗಿ ‍ಪ್ರಧಾನಿಗೆ ಸಲ್ಲಿಸಿದ ಮನವಿ ಪತ್ರದಲ್ಲಿ ಸಂಸದರು ಉಲ್ಲೇಖಿಸಿದ್ದಾರೆ. ಮೋದಿ ನೇತೃತ್ವದ ಎನ್‌ಡಿಎ ಸರ್ಕಾರದ ಅವಧಿಯಲ್ಲಿ ಈಶಾನ್ಯದಲ್ಲಿ ನಡೆದ ಅಭಿವೃದ್ಧಿ ಕಾರ್ಯಗಳು ಐತಿಹಾ
ಸಿಕ ಮತ್ತು ಸಾಟಿಯಿಲ್ಲದವು
ಎಂದು ನಿಸ್ಸಂಶಯವಾಗಿ ಹೇಳಲು ಬಯಸುತ್ತೇವೆ ಎಂದು ಸಂಸದರು ಉಲ್ಲೇಖಿಸಿದ್ದಾರೆ.

‘ಈಶಾನ್ಯ ಭಾಗದ ಬಗ್ಗೆ ಮೋದಿ ಅವರಷ್ಟು ಮಹತ್ವಾಕಾಂಕ್ಷೆಯನ್ನು ಈ ಹಿಂದಿನ ಯಾವ ಪ್ರಧಾನಿಯೂ ಹೊಂದಿ
ರಲಿಲ್ಲ. ಈಶಾನ್ಯವನ್ನು ಭಾರತದ ಪ್ರಗತಿಯ ‘ಅಷ್ಟಲಕ್ಷ್ಮಿ’ ಎಂದು ವಿವರಿ
ಸುವ ಮೂಲಕ ನಮ್ಮ ಪ್ರದೇಶದ ಜನ
ರನ್ನು ಆಳವಾಗಿ ಸ್ಪರ್ಶಿಸಿದ್ದಾರೆ’ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು