ಭಾನುವಾರ, ಮೇ 22, 2022
21 °C

ಅಸ್ಸಾಂನಲ್ಲಿ ಪಕ್ಷ ಅಧಿಕಾರಕ್ಕೆ ಬಂದರೆ ಸಿಎಎ ಜಾರಿ ಇಲ್ಲ: ರಾಹುಲ್

ಏಜೆನ್ಸಿಸ್ Updated:

ಅಕ್ಷರ ಗಾತ್ರ : | |

ಶಿವಸಾಗರ (ಅಸ್ಸಾಂ): ‘ಅಸ್ಸಾಂ ರಾಜ್ಯದಲ್ಲಿ ಪಕ್ಷ ಅಧಿಕಾರಕ್ಕೆ ಬಂದರೆ ಸಿಎಎ ಜಾರಿಗೊಳಿಸುವುದಿಲ್ಲ. ಅಸ್ಸಾಂ ಒಪ್ಪಂದದ ಅನುಸಾರ ಜನರ ಹಕ್ಕುಗಳನ್ನು ರಕ್ಷಿಸಲಾಗುವುದು’ ಎಂದು ಕಾಂಗ್ರೆಸ್‌ ಮುಖಂಡ ರಾಹುಲ್ ಗಾಂಧಿ ಭರವಸೆ ನೀಡಿದ್ದಾರೆ.

ಬಿಜೆಪಿ ಮತ್ತು ಆರ್‌ಎಸ್‌ಎಸ್ ಅಸ್ಸಾಂ ರಾಜ್ಯವನ್ನು ವಿಭಜನಗೊಳಿಸುತ್ತಿವೆ ಎಂದೂ ಭಾನುವಾರ ಆರೋಪಿಸಿದರು. ಮಾರ್ಚ್‌–ಏಪ್ರಿಲ್ ತಿಂಗಳಲ್ಲಿ ಅಸ್ಸಾಂ ವಿಧಾನಸಭೆಗೆ ಚುನಾವಣೆ ನಡೆಯಲಿದೆ.

ಚುನಾವಣೆಗೆ ಪೂರ್ವಭಾವಿಯಾಗಿ ಇಲ್ಲಿ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಅವರು, ‘ರಾಜ್ಯಕ್ಕೆ ದೆಹಲಿ ಅಥವಾ ನಾಗಪುರದ ನಿರ್ದೇಶನ ಪಾಲಿಸದ, ತನ್ನದೇ ಜನರ ಧ್ವನಿಯನ್ನು ಆಲಿಸುವ ಮುಖ್ಯಮಂತ್ರಿಯ ಅಗತ್ಯವಿದೆ’ ಎಂದರು.

ಅಸ್ಸಾಂ ಒಪ್ಪಂದ ರಾಜ್ಯವನ್ನು ರಕ್ಷಿಸಲಿದ್ದು, ಶಾಂತಿ ನೆಲೆಸಲು ಕಾರಣವಾಗಿದೆ. ನಾನು ಮತ್ತು ನನ್ನ ಪಕ್ಷದ ಕಾರ್ಯಕರ್ತರು ಇದನ್ನು ಉಳಿಸಲು ಕಾರ್ಯನಿರ್ವಹಿಸುತ್ತೇವೆ. ಇದರಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂದು ಹೇಳಿದರು.

ಅಸ್ಸಾಂ ಒಪ್ಪಂದವನ್ನು ಆಧಾರವಾಗಿಸಿ ರಾಜ್ಯವನ್ನು ವಿಭಜಿಸಲು ಆರ್‌ಎಸ್‌ಎಸ್ ಯತ್ನಿಸುತ್ತಿವೆ. ಅತಿಕ್ರಮವಾಗಿ ನುಸುಳುವಿಕೆ ರಾಜ್ಯದ ಸಮಸ್ಯೆಯಾಗಿದೆ. ರಾಜ್ಯದ ಜನರೇ ಮಾತುಕತೆ ಮೂಲಕ ಬಗೆಹರಿಸಿಕೊಳ್ಳಲು ಬದ್ಧರಾಗಿದ್ದಾರೆ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು