ಕಡಿಮೆ ತೀವ್ರತೆ ಜ್ವರಕ್ಕೆ ಪ್ರತಿಜೀವಕಗಳ ಬಳಕೆ ಬೇಡ: ಐಸಿಎಂಆರ್

ನವದೆಹಲಿ: ಕಡಿಮೆ ತೀವ್ರತೆಯ ಜ್ವರ ಹಾಗೂ ಬ್ರಾಂಕೈಟಿಸ್ (ಶ್ವಾಸನಾಳಗಳ ಒಳಪೊರೆಯ ಉರಿಯೂತ) ಸೇರಿದಂತೆ ವಿವಿಧ ಕಾಯಿಲೆ/ಸೋಂಕುಗಳ ಚಿಕಿತ್ಸೆಗೆ ಪ್ರತಿಜೀವಕಗಳನ್ನು ಬಳಸುವ ಬಗ್ಗೆ ಭಾರತೀಯ ವೈದ್ಯಕೀಯ ಸಂಶೋಧನಾ ಪರಿಷತ್ತು (ಐಸಿಎಂಆರ್) ಎಚ್ಚರಿಕೆ ನೀಡಿದೆ.
ಈ ಕುರಿತು ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿರುವ ಐಸಿಎಂಆರ್, ವೈದ್ಯರು ಪ್ರತಿಜೀವಕಗಳನ್ನು ಶಿಫಾರಸು ಮಾಡುವ ಸಂದರ್ಭದಲ್ಲಿ, ಕಾಯಿಲೆ/ಸೋಂಕಿನ ತೀವ್ರತೆಯನ್ನು ಪರಿಗಣಿಸಬೇಕು. ನಿರ್ದಿಷ್ಟ ಅವಧಿ ವರೆಗೆ ಇವುಗಳನ್ನು ತೆಗೆದುಕೊಳ್ಳುವಂತೆ ರೋಗಿಗಳಿಗೆ ಸೂಚಿಸಬೇಕು ಎಂದು ಮಾರ್ಗಸೂಚಿಗಳಲ್ಲಿ ತಿಳಿಸಲಾಗಿದೆ.
‘ಸೋಂಕಿಗೆ ಕಾರಣಗಳನ್ನು ಪತ್ತೆ ಮಾಡುವುದು ಪ್ರತಿಜೀವಕಗಳನ್ನು ಶಿಫಾರಸು ಮಾಡುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ರೋಗಕಾರಕಗಳು ಯಾವುವು ಎಂಬುದು ಪತ್ತೆಯಾದರೆ, ಅವುಗಳಿಗೆ ತಕ್ಕುದಾದ ಪ್ರತಿಜೀವಕಗಳನ್ನು ಶಿಫಾರಸು ಮಾಡಲು ಅನುಕೂಲವಾಗುತ್ತದೆ’ ಎಂದು ತಿಳಿಸಲಾಗಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.