ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೈಸಾಖಿ ಆಚರಣೆ: ಭಾರತೀಯ ಯಾತ್ರಾರ್ಥಿಗಳಿಗಾಗಿ 2,200 ವೀಸಾ ನೀಡಿದ ಪಾಕಿಸ್ತಾನ

Last Updated 7 ಏಪ್ರಿಲ್ 2022, 13:34 IST
ಅಕ್ಷರ ಗಾತ್ರ

ನವದೆಹಲಿ: ಬೈಸಾಖಿ ಆಚರಣೆಗಾಗಿ ಪಾಕಿಸ್ತಾನದಲ್ಲಿರುವ ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ ನೀಡಲು ಬಯಸುವ ಭಾರತೀಯ ಯಾತ್ರಾರ್ಥಿಗಳಿಗೆ ಸುಮಾರು 2,200 ವೀಸಾಗಳನ್ನು ನೀಡಿರುವುದಾಗಿ ಗುರುವಾರ ಪಾಕಿಸ್ತಾನದ ಹೈಕಮಿಷನ್‌ ಹೇಳಿದೆ.

'ಬೈಸಾಖಿ ಆಚರಣೆಗೆ ಭಾರತದ ಸಿಖ್‌ ಯಾತ್ರಾರ್ಥಿಗಳಿಗೆ ಪಾಕಿಸ್ತಾನಕ್ಕೆ ಆಗಮಿಸಲು ಸುಮಾರು 2,200 ವೀಸಾಗಳನ್ನು ಕೊಡಲಾಗಿದೆ. ಏಪ್ರಿಲ್‌ 12ರಿಂದ 21ರ ವರೆಗೆ ನಡೆಯಲಿರುವ ಹಲವಾರು ಧಾರ್ಮಿಕ ಕಾರ್ಯಕ್ರಮಗಳಿಗೆ ಭೇಟಿ ನೀಡಲು ಅವಕಾಶ ಕಲ್ಪಿಸುವ ಉದ್ದೇಶದಿಂದ ವೀಸಾಗಳನ್ನು ಕೊಡಲಾಗಿದೆ' ಎಂದು ಪಾಕಿಸ್ತಾನದ ಹೈಕಮಿಷನ್‌ ಪ್ರಕಟಣೆಯಲ್ಲಿ ತಿಳಿಸಿದೆ.

ಪಾಕಿಸ್ತಾನ ಭೇಟಿ ಸಂದರ್ಭ ಯಾತ್ರಾರ್ಥಿಗಳು ಪಂಜಾ ಸಾಹಿಬ್‌, ನನಕಾನಾ ಸಾಹಿಬ್‌, ಕರ್ತಾರ್‌ಪುರ್‌ ಸಾಹಿಬ್‌ ಗುರುದ್ವಾರಗಳಿಗೆ ಭೇಟಿ ನೀಡಬಹುದಾಗಿದೆ.

ಉಭಯ ರಾಷ್ಟ್ರಗಳ ಶಿಷ್ಟಾಚಾರದ ಅಡಿಯಲ್ಲಿ ಪ್ರತಿ ವರ್ಷ ಪಾಕಿಸ್ತಾನದಲ್ಲಿರುವ ಧಾರ್ಮಿಕ ಕ್ಷೇತ್ರಗಳಿಗೆ ಭಾರತದ ಸಿಖ್‌ ಮತ್ತು ಹಿಂದೂ ಯಾತ್ರಾರ್ಥಿಗಳು ಭೇಟಿ ನೀಡುತ್ತಾರೆ. ಪಾಕಿಸ್ತಾನದ ಯಾತ್ರಾರ್ಥಿಗಳೂ ಪ್ರತಿ ವರ್ಷ ಭಾರತದ ಧಾರ್ಮಿಕ ಕ್ಷೇತ್ರಗಳಿಗೆ ಬರುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT