ನವದೆಹಲಿ: ಬಿಬಿಸಿಯಲ್ಲಿ ಮೊದಲ ಬಾರಿಗೆ ಹಿಂದಿಯಲ್ಲಿ ಸುದ್ದಿ ವಾಚಿಸಿದ ಮೊದಲ ಮಹಿಳೆ ಎನ್ನುವ ಖ್ಯಾತಿಗೆ ಪಾತ್ರರಾಗಿದ್ದ ಖ್ಯಾತ ಸುದ್ದಿವಾಚಕಿ ರಜನಿ ಕೌಲ್ (93) ಫರಿದಾಬಾದ್‌ನಲ್ಲಿ ಮಂಗಳವಾರ ನಿಧನ ಹೊಂದಿದರು.
‘ರಜನಿ ಅವರ ಅಂತ್ಯಕ್ರಿಯೆ ಬುಧವಾರ ನಡೆಯಿತು’ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಈಗಿನ ಪಾಕಿಸ್ತಾನದ ಪೇಶಾವರದಲ್ಲಿ ಜನಿಸಿದ ರಜನಿ ಅವರು ಆರಂಭದಲ್ಲಿ ನವದೆಹಲಿಯ ಆಲ್ ಇಂಡಿಯಾ ರೇಡಿಯೊದಲ್ಲಿ (ಎಐಆರ್) ವೃತ್ತಿ ನಿರ್ವಹಿಸಿದ್ದರು. ನಂತರ ವಾಷಿಂಗ್ಟನ್‌ನ ‘ವಾಯ್ಸ್ ಆಫ್ ಅಮೆರಿಕ’ (ವಿಒಎ) ಹಾಗೂ ಲಂಡನ್‌ನ ಬಿಬಿಸಿಯಲ್ಲಿ ಕಾರ್ಯ ನಿರ್ವಹಿಸಿದ್ದರು.
ಬಿಬಿಸಿ ಹಿಂದಿ ವಾಹಿನಿಯ ಮೊದಲ ಮಹಿಳಾ ಸಿಬ್ಬಂದಿಯಾಗಿದ್ದ ಅವರು, 1961ರಲ್ಲಿ ಅದೇ ವಾಹಿನಿಯಲ್ಲಿ ಹಿಂದಿಯಲ್ಲಿ ಸುದ್ದಿ ವಾಚಿಸಿದ ಮೊದಲ ಮಹಿಳೆ ಎಂಬ ಹಿರಿಮೆಗೂ ಪಾತ್ರರಾಗಿದ್ದರು. ವಿಒಎ ಮತ್ತು ಬಿಬಿಸಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಪತ್ರಕರ್ತ ಮಹೇಂದ್ರ ಕೌಲ್ ಅವರನ್ನು ವಿವಾಹವಾಗಿದ್ದ ರಜನಿ ಅವರು ಲಂಡನ್‌ನಲ್ಲಿ ನೆಲೆಸಿದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.