ನವದೆಹಲಿ: ಮೇಲ್ಛಾವಣಿ ಮೇಲಿಂದ ಹಾದುಹೋಗುವ ಆಪ‍್ಟಿಕಲ್ ಫೈಬರ್ ಕೇಬಲ್‌ಗಳನ್ನು ತೆರವುಗೊಳಿಸುವ ಅಭಿಯಾನವನ್ನು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಹಮ್ಮಿಕೊಂಡಿದೆ. ಈ ನಡೆಯನ್ನು ಖಂಡಿಸಿರುವಸೆಲ್ಯುಲಾರ್ ಆಪರೇಟರ್ಸ್ ಅಸೋಸಿಯೇಷನ್ ಆಫ್ ಇಂಡಿಯಾ (ಸಿಒಎಐ), ಈ ಅಭಿಯಾನದಿಂದ ಬೆಂಗಳೂರಿನ ದೂರಸಂಪರ್ಕ ಸೇವೆಗೆ ಅಡ್ಡಿ ಉಂಟಾಗಲಿದೆ’ ಎಂದು ಹೇಳಿದೆ.

‘ಇದು ಕೇವಲ ಟೆಲಿಕಾಂ ಸೇವೆ ಪೂರೈಕೆದಾರರು ಮಾತ್ರವಲ್ಲದೇ, ಸಾರ್ವಜನಿಕರಲ್ಲೂ ಭೀತಿಯನ್ನು ಸೃಷ್ಟಿ ಮಾಡಬಹುದು. ಈ ಕ್ರಮವು ಇಂಟರ್‌ನೆಟ್ ಸೇವೆಯ ಮೇಲೆ ಪರಿಣಾಮ ಬೀರಲಿದೆ. ಪ್ರಮುಖವಾಗಿ ಐಟಿ ಸಂಸ್ಥೆಗಳು ತೊಂದರೆಗೊಳಗಾಗಲಿವೆ. ಕೋವಿಡ್ ಪರಿಸ್ಥಿತಿಯಲ್ಲಿ ಬಹುತೇಕ ಸಂಸ್ಥೆಗಳ ಉದ್ಯೋಗಿಗಳು ಮನೆಯಿಂದಲೇ ಕೆಲಸ ಮಾಡುತ್ತಿದ್ದಾರೆ. ನೆಲದಡಿಯಿಂದ ಫೈಬರ್ ಸೇವೆಯನ್ನು ಕಲ್ಪಿಸಲು ಸಂಸ್ಥೆಗಳು ಶ್ರಮಿಸುತ್ತಿವೆ. ಹಾಗಾಗಿ ಕೇಬಲ್ ತೆರವಿಗೆ ಸಂಬಂಧಿಸಿದಂತೆ ಯಾವುದೇ ಏಕಪಕ್ಷೀಯ ಕ್ರಮ ಕೈಗೊಳ್ಳಬಾರದು’ ಎಂದು ಸಿಒಎಐನ ವ್ಯವಸ್ಥಾಪಕ ನಿರ್ದೇಶಕ ಲೆಫ್ಟಿನೆಂಟ್ ಜನರಲ್ ಎಸ್.ಪಿ ಕೊಚ್ಚಾರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

‘ಈ ಬಗ್ಗೆ ಟೆಲಿಕಾಂ ಕಂಪೆನಿಗಳಿಗೆ ಮುಂಚಿತವಾಗಿ ತಿಳಿಸದೆಯೇ ಅಭಿಯಾನವನ್ನು ಪ್ರಾರಂಭಿಸಲಾಗಿದೆ.ಕಗ್ಗದಾಸಪುರ, ಯಲಹಂಕ ವಲಯ ಮತ್ತು ಮಹದೇವಪುರ ವಲಯ ಸೇರಿದಂತೆ ನಗರದ ಹಲವೆಡೆ ಈ ಅಭಿಯಾನವನ್ನು ನಡೆಸಲಾಗುತ್ತಿದೆ. ಫೈಬರ್ ಸಂಪರ್ಕವನ್ನು ಕಡಿತಗೊಳಿಸುವುದರಿಂದ ಡಿಜಿಟಲ್ ಬೆಂಗಳೂರು ಯೋಜನೆಗೆ ಬಹಳ ತೊಂದರೆಯಾಗಲಿದೆ’ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

‘ನೆಲದಡಿಯಿಂದ ಫೈಬರ್ ಸೇವೆಯನ್ನು ಕಲ್ಪಿಸಲು 6 ತಿಂಗಳ ಸಮಯ ಅವಕಾಶ ನೀಡಬೇಕು. ಅಲ್ಲಿಯವರೆಗೂ ಯಾವುದೇ ಕ್ರಮ ಕೈಗೊಳ್ಳಬಾರದು ಎಂದು ಈ ಹಿಂದೆ ಬಿಬಿಎಂಪಿಗೆ ಮನವಿ ಮಾಡಲಾಗಿತ್ತು. ಆದರೆ, ಬಿಬಿಎಂಪಿ ಅಧಿಕಾರಿಗಳು ಈ ಅಭಿಯಾನವನ್ನು ಮತ್ತೆ ಪ್ರಾರಂಭಿಸಿದ್ದಾರೆ ಎಂದು ಸಿಒಎಐ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.