ಗುರುವಾರ , ಜೂನ್ 30, 2022
21 °C

ಆಶ್ರಯ ಮನೆಗೆ ಸ್ಥಳಾಂತರಿಸುವಾಗ ₹ 2.58 ಲಕ್ಷದ ಒಡತಿಯಾದ ಭಿಕ್ಷುಕಿ!

ಪಿಟಿಐ Updated:

ಅಕ್ಷರ ಗಾತ್ರ : | |

ಜಮ್ಮು: ಉತ್ತಮ ಸೌಲಭ್ಯಗಳನ್ನು ಒದಗಿಸಲು 65 ವರ್ಷದ ಭಿಕ್ಷುಕಿಯನ್ನು ಜಮ್ಮು ಮತ್ತು ಕಾಶ್ಮೀರದ ರಾಜೌರಿ ಜಿಲ್ಲೆಯಲ್ಲಿನ ಆಶ್ರಯ ಮನೆಗೆ ಸ್ಥಳಾಂತರಿಸಿದ ಕೆಲವೇ ದಿನಗಳಲ್ಲಿ ₹ 2.58 ಲಕ್ಷದ ಮಾಲೀಕರಾಗಿದ್ದಾರೆ ಎಂದು ಸರ್ಕಾರಿ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಕಳೆದ ಮೂರು ದಶಕಗಳಲ್ಲಿ ಬಸ್ ನಿಲ್ದಾಣ ಮತ್ತು ಪಕ್ಕದ ಪ್ರದೇಶಗಳ ಬೀದಿಗಳಲ್ಲಿ ಓಡಾಡುತ್ತಿದ್ದ ಅಪರಿಚಿತ ಭಿಕ್ಷುಕಿಯನ್ನು ಮನೆಯಿಲ್ಲದವರಿಗೆ ಉತ್ತಮ ಜೀವನೋಪಾಯಕ್ಕಾಗಿ ನೀಡಲಾಗುವ ಆಶ್ರಯ ಮನೆಗೆ ಸ್ಥಳಾಂತರಿಸಲಾಗಿದೆ ಎಂದು ನೌಶೇರಾದ ಹೆಚ್ಚುವರಿ ಉಪ ಆಯುಕ್ತ ಸುಖದೇವ್ ಸಿಂಗ್ ಸಮ್ಯಾಲ್ ಪಿಟಿಐ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.

ಪಶುವೈದ್ಯಕೀಯ ಆಸ್ಪತ್ರೆಯ ಹೊರಗೆ ಕುಳಿತಿದ್ದ ಆಕೆಯನ್ನು ಅಲ್ಲಿಂದ ತೆರವುಗೊಳಿಸಲು ಮಂಗಳವಾರ ಬೆಳಿಗ್ಗೆ ಪುರಸಭೆಯ ಸಮಿತಿಯೊಂದನ್ನು ನಿಯೋಜಿಸಲಾಗಿತ್ತು. ಆದರೆ ಪಾಲಿಥಿನ್‌ ಹಾಳೆಯಲ್ಲಿ ಬಿಗಿಯಾಗಿ ಕಟ್ಟಿದ್ದ ವಿವಿಧ ನೋಟುಗಳನ್ನು ತುಂಬಿದ್ದ ಮೂರು ಪ್ಲಾಸ್ಟಿಕ್ ಪೆಟ್ಟಿಗೆಗಳು ಮತ್ತು ನಾಣ್ಯಗಳಿಂದ ತುಂಬಿದ ಸೆಣಬಿನ ಚೀಲವನ್ನು ಕಂಡು ಅವರು ಆಶ್ಚರ್ಯಚಕಿತರಾಗಿದ್ದಾರೆ.

'ಈ ಕುರಿತಾದ ಮಾಹಿತಿಯನ್ನು ಹಂಚಿಕೊಂಡ ತಕ್ಷಣ, ನಾನು ಕೂಡಲೇ ಮ್ಯಾಜಿಸ್ಟ್ರೇಟ್ ಜೊತೆಗೆ ಪೊಲೀಸರನ್ನು ನಿಯೋಜಿಸಿದೆ. ಹಲವಾರು ಗಂಟೆಗಳ ಎಣಿಕೆಯ ನಂತರ ಒಟ್ಟು ₹ 2,58,507 ಹೊಂದಿರುವುದಾಗಿ ತಿಳಿದುಬಂದಿದೆ ಎಂದು ಸಮ್ಯಾಲ್ ತಿಳಿಸಿದ್ದಾರೆ.

ಮಹಿಳೆಯು ಭಿಕ್ಷೆ ಬೇಡಿ ವಾಸಿಸುತ್ತಿದ್ದು, ಹಣವನ್ನು ಪ್ಲಾಸ್ಟಿಕ್ ಪೆಟ್ಟಿಗೆಗಳಲ್ಲಿ ಉಳಿಸಿದ್ದಾಳೆ. 'ಆಕೆ ಯಾರೆಂದು ತಿಳಿದಿಲ್ಲ. ಆಕೆ ಎಲ್ಲಿಂದ ಬಂದಿದ್ದಾಳೆಂದು ಕೂಡ ಯಾರಿಗೂ ತಿಳಿದಿಲ್ಲ. ಆದರೆ, ಅವಳು ಪಶುವೈದ್ಯಕೀಯ ಆಸ್ಪತ್ರೆ ಮತ್ತು ಬಸ್ ನಿಲ್ದಾಣದ ಸುತ್ತಮುತ್ತ 30 ವರ್ಷಗಳಿಂದ ಸಂಚರಿಸುತ್ತಿದ್ದಳು' ಎಂದು ತಿಳಿಸಿದ್ದಾರೆ.

ಮುನ್ಸಿಪಲ್ ಸಮಿತಿ ನೌಕರರ ಪ್ರಾಮಾಣಿಕತೆಗೆ ಅಧಿಕಾರಿ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು