ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌: ಬೀಜಿಂಗ್‌ನಲ್ಲಿ 316 ಹೊಸ ಪ್ರಕರಣ ಪತ್ತೆ

Last Updated 21 ನವೆಂಬರ್ 2022, 14:29 IST
ಅಕ್ಷರ ಗಾತ್ರ

ಬೀಜಿಂಗ್‌: ಚೀನಾ ರಾಜಧಾನಿ ಬೀಜಿಂಗ್‌ನಲ್ಲಿ 15 ಗಂಟೆಗಳ ಅವಧಿಯಲ್ಲಿ ಹೊಸದಾಗಿ 316 ಕೋವಿಡ್‌ ಪ್ರಕರಣಗಳು ವರದಿಯಾಗಿವೆ ಎಂದು ಅಲ್ಲಿಯ ಅಧಿಕಾರಿಗಳು ತಿಳಿಸಿದ್ದಾರೆ. ಈ ಮಧ್ಯೆ ಬೀಜಿಂಗ್‌ಗೆ ಬರುವವರಿಗಾಗಿ ಹೊಸ ನಿಯಮಗಳನ್ನು ಜಾರಿ ಮಾಡಲಾಗಿದೆ.

ಬೀಜಿಂಗ್‌ಗೆ ಬರುವವರು ಮೂರು ದಿನಗಳ ಕಾಲ, ನಿತ್ಯ ಕೋವಿಡ್‌ ಪರೀಕ್ಷೆಗೆ ಒಳಗಾಗಬೇಕು. ಮನೆ ಅಥವಾ ಅವರು ಉಳಿದುಕೊಂಡಿರುವ ಇನ್ನಾವುದಾದರೂ ಸ್ಥಳದಿಂದ ಹೊರ ಬರಲು ಅನುಮತಿ ಸಿಗುವವರೆಗೂ ಅಲ್ಲಿಯೇ ಇದ್ದು ಪರೀಕ್ಷೆಯ ವರದಿಗಾಗಿ ಕಾಯಬೇಕು. ಈ ನಿಯಮವು ಮಂಗಳವಾರದಿಂದಲೇ ಜಾರಿಗೆ ಬರಲಿದೆ.

ಕೋವಿಡ್‌ ಸಾಂಕ್ರಾಮಿಕ ಆರಂಭವಾದಗಿನಿಂದಚೀನಾ ನಗರವು ಎದುರಿಸುತ್ತಿರುವ ಅತ್ಯಂತ ಸಂಕೀರ್ಣ ಮತ್ತು ಗಂಭೀರವಾದ ಪರಿಸ್ಥಿತಿ ಇದಾಗಿದೆ ಎಂದು ಬೀಜಿಂಗ್‌ನ ರೋಗ ನಿಯಂತ್ರಣ ಮತ್ತು ತಡೆ ಕೇಂದ್ರದ ನಿರ್ದೇಶಕ ಲಿಯು ಷಿಯೋಫೆಂಗ್‌ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT