ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಶ್ಚಿಮ ಬಂಗಾಳ 'ಎರಡನೇ ಕಾಶ್ಮೀರ’ವಾಗಿ ಮಾರ್ಪಟ್ಟಿದೆ: ದಿಲೀಪ್‌ ಘೋಷ್‌

Last Updated 25 ನವೆಂಬರ್ 2020, 7:49 IST
ಅಕ್ಷರ ಗಾತ್ರ

ಕೋಲ್ಕತ್ತ:‍ ಪಶ್ಚಿಮ ಬಂಗಾಳ ‘ಎರಡನೇ ಕಾಶ್ಮೀರವಾಗಿ’ ಮಾರ್ಪಟ್ಟಿದೆ. ಇಲ್ಲಿ ನಿತ್ಯ ಉಗ್ರರನ್ನು ಬಂಧಿಸಲಾಗುತ್ತಿದೆ. ದಿನಬೆಳಗಾದರೆ ಅಕ್ರಮ ಬಾಂಬ್‌ ತಯಾರಿಕಾ ಕಾರ್ಖಾನೆಗಳು ಪತ್ತೆಯಾಗುತ್ತಿವೆ ಎಂದು ಪಶ್ಚಿಮ ಬಂಗಾಳದ ಬಿಜೆಪಿ ಮುಖ್ಯಸ್ಥ ದಿಲೀಪ್‌ ಘೋಷ್‌ ಅವರು ಹೇಳಿದರು.

ಬೀರ್‌ಭೂಮ್ ಜಿಲ್ಲೆಯಲ್ಲಿಬುಧವಾರ ‘ಚಹಾ–ಚಕ್ರ’ ಕಾರ್ಯಕ್ರಮದಲ್ಲಿ ಮಾತನಾಡಿದ ದಿಲೀಪ್‌ ಘೋಷ್‌, ಪಶ್ಚಿಮ ಬಂಗಾಳದಲ್ಲಿ ಬಾಂಬ್‌ ತಯಾರಿಕಾ ಕಾರ್ಖಾನೆಗಳು ಮಾತ್ರ ಸರಿಯಾಗಿ ಕಾರ್ಯ ನಿರ್ವಹಿಸುತ್ತಿರುವ ಕಾರ್ಖಾನೆಗಳಾಗಿವೆ ಎಂದು ವ್ಯಂಗ್ಯವಾಗಿಡಿದ್ದರು.

ಇದಕ್ಕೆ ತಿರುಗೇಟು ನೀಡಿರುವ ಆಡಳಿತರೂಢ ಟಿಎಂಸಿ ಪಕ್ಷವು, ‘ನಿಮ್ಮ ಗಮನವನ್ನು ಉತ್ತರ ಪ್ರದೇಶದತ್ತ ಕೇಂದ್ರಿಕರಿಸಿ, ಅಲ್ಲಿ ಕಾನೂನಿನ ಅಸ್ತಿತ್ವ ಅಂತ್ಯ ಕಾಣುತ್ತಿದೆ’ ಎಂದು ಹೇಳಿದೆ. ಘೋಷ್‌ ಅವರು ಪಶ್ಚಿಮ ಬಂಗಾಳದ ಹೆಸರನ್ನು ಹಾಳುಗೆಡಿಸುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಟಿಎಂಸಿ ದೂರಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT