ಗುರುವಾರ , ಅಕ್ಟೋಬರ್ 21, 2021
29 °C

ಸಿಪಿಎಂ ವಿರುದ್ಧ ಸಿಬಿಐ ತನಿಖೆ, ಇ.ಡಿ ಪ್ರಕರಣ ಏಕಿಲ್ಲ: ಮಮತಾ ಬ್ಯಾನರ್ಜಿ ಪ್ರಶ್ನೆ

ಪ್ರಜಾವಾಣಿ ವೆಬ್ ಡೆಸ್ಕ್‌ Updated:

ಅಕ್ಷರ ಗಾತ್ರ : | |

ಕೋಲ್ಕತ್ತ: ಸಿಪಿಎಂ ತುಂಬಾ ಅನ್ಯಾಯ ಮಾಡಿದೆ. ಆ ಪಕ್ಷದವರ ವಿರುದ್ಧ ಏಕೆ ಸಿಬಿಐ ತನಿಖೆ, ಜಾರಿ ನಿರ್ದೇಶನಾಲಯ (ಇ.ಡಿ) ಪ್ರಕರಣ ಇಲ್ಲ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಪ್ರಶ್ನಿಸಿದ್ದಾರೆ.

ಭವಾನಿಪುರದಲ್ಲಿ ಚುನಾವಣಾ ಪ್ರಚಾರದ ವೇಳೆ ಮಾತನಾಡಿದ ಅವರು, ನಮ್ಮ ಪಕ್ಷವು (ಟಿಎಂಸಿ) ಶೌರ್ಯದಿಂದ ಹೋರಾಡುತ್ತಿದೆ. ನಮ್ಮ ದೂರವಾಣಿ ಕರೆಗಳನ್ನು ಪೆಗಾಸಸ್‌ ಮೂಲಕ ಕದ್ದಾಲಿಸಲಾಗುತ್ತಿದೆ ಎಂದು ದೂರಿದ್ದಾರೆ.

ಓದಿ: 

ಚುನಾವಣೆ ಮುಗಿದ ತಿಂಗಳುಗಳ ಬಳಿಕ ಬಿಜೆಪಿ ಕಾರ್ಯಕರ್ತ ಮೃತಪಟ್ಟಿರುವ ಬಗ್ಗೆ ಮಾಹಿತಿ ದೊರೆಯಿತು. ಅಂಥ ಸಾವು ಯಾವತ್ತೂ ದುರದೃಷ್ಟಕರ. ಅವರು ಮೃತದೇಹದೊಂದಿಗೆ ನನ್ನ ಮನೆ ಬಳಿ ಬಂದರು. ಎನ್‌ಆರ್‌ಸಿ ಪ್ರತಿಭಟನೆ ವೇಳೆ ಅಸ್ಸಾಂನಲ್ಲಿ ಅನೇಕ ಜನ ಸಾವಿಗೀಡಾಗಿದ್ದರು. ಆ ಬಗ್ಗೆ ನಾಚಿಕೆಯಾಗುವುದಿಲ್ಲವೇ? ಬಿಜೆಪಿ ಆಡಳಿತದಲ್ಲಿರುವಲ್ಲಿ ಕಾನೂನೇ ಅಸ್ತಿತ್ವದಲ್ಲಿಲ್ಲ ಎಂದು ಮಮತಾ ಟೀಕಿಸಿರುವುದಾಗಿ ‘ಎಎನ್‌ಐ’ ವರದಿ ಮಾಡಿದೆ.

ಓದಿ: 

ಬಿಜೆಪಿ ಅತ್ಯಂತ ಹಿಂಸಾತ್ಮಕ, ಕ್ರೂರ ಮತ್ತು ಕೊಲೆಗಾರ ಪಕ್ಷ. ಬಿಜೆಪಿಯವರು ಪ್ರತಿದಿನ ಗೂಂಡಾಗಿರಿ ಮಾಡುತ್ತಿದ್ದಾರೆ. ತಮ್ಮದೇ ಪಕ್ಷದವರ ಮನೆಗಳ ಮೇಲೆ ಬಾಂಬ್ ದಾಳಿ ನಡೆಸುವ ಅವರು ಬಳಿಕ ನಮ್ಮ ಮೇಲೆ ದಾಳಿ ನಡೆದಿದೆ ಎಂದು ಬೊಬ್ಬೆ ಹೊಡೆಯುತ್ತಾರೆ. ನಿಮ್ಮನ್ನು ಮುಟ್ಟಲೂ ನಮಗೆ ನಾಚಿಕೆಯಾಗುತ್ತದೆ. ಟಿಎಂಸಿಯು ಗೂಂಡಾಗಳ ಪಕ್ಷವಲ್ಲ ಎಂದು ಮಮತಾ ಹೇಳಿದ್ದಾರೆ.

ಭವಾನಿಪುರ ಉಪ ಚುನಾವಣೆಯಲ್ಲಿ ಟಿಎಂಸಿಯಿಂದ ಮಮತಾ ಬ್ಯಾನರ್ಜಿ ಅವರು ಸ್ಪರ್ಧಿಸುತ್ತಿದ್ದು, ಚುನಾವಣಾ ಪ್ರಚಾರದಲ್ಲಿ ತೊಡಗಿದ್ದಾರೆ. ಸೆಪ್ಟೆಂಬರ್ 30ರಂದು ಚುನಾವಣೆ ನಡೆಯಲಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು