ಸೋಮವಾರ, ಜನವರಿ 24, 2022
29 °C

ಕೋವ್ಯಾಕ್ಸಿನ್‌ ಬೂಸ್ಟರ್‌ನಿಂದ ಓಮೈಕ್ರಾನ್‌, ಡೆಲ್ಟಾಗೆ ತಡೆ: ಭಾರತ್‌ ಬಯೋಟೆಕ್

ಪ್ರಜಾವಾಣಿ ವೆಬ್‌ ಡೆಸ್ಕ್‌ Updated:

ಅಕ್ಷರ ಗಾತ್ರ : | |

ಓಮೈಕ್ರಾನ್‌ ಹಾಗೂ ಡೆಲ್ಟಾ ರೂಪಾಂತರಗಳಿಗೆ ಕೋವಾಕ್ಸಿನ್‌ ಬೂಸ್ಟರ್‌ ಡೋಸ್‌ ತಡೆಯೊಡ್ಡಲಿದೆ ಎಂದು ಭಾರತ್ ಬಯೋಟೆಕ್ ತಿಳಿಸಿದೆ. 

ಅಟ್ಲಾಂಟಾದ ಎಮೋರಿ ಲಸಿಕೆ ಕೇಂದ್ರದಲ್ಲಿ 13 ವ್ಯಕ್ತಿಗಳಿಂದ ಸಂಗ್ರಹಿಸಿದ ರಕ್ತದ ಸೀರಮ್ ಅನ್ನು ಆಧರಿಸಿ ಅಧ್ಯಯನ ನಡೆಸಲಾಗಿದೆ. ಈ 13 ವ್ಯಕ್ತಿಗಳಿಗೂ ಬೂಸ್ಟರ್‌ ಡೋಸ್‌ ಅನ್ನು ನೀಡಲಾಗಿತ್ತು. 28 ದಿನಗಳ ನಂತರ ಪರೀಕ್ಷೆ ನಡೆಸಲಾಯಿತು. ಕೋವಾಕ್ಸಿನ್‌ ಬೂಸ್ಟರ್‌ ಡೋಸ್‌ನಿಂದ ಓಮೈಕ್ರಾನ್‌ ಮತ್ತು ಡೆಲ್ಟಾ ರೂಪಾಂತರಗಳಿಗೆ ತಡೆಯೊಡ್ಡಬಹುದು ಎಂದು ಈ ಪರೀಕ್ಷೆಯಿಂದ ತಿಳಿದುಬಂದಿದೆ.

ಕೋವಾಕ್ಸಿನ್‌ ಬೂಸ್ಟರ್‌ ಡೋಸ್‌ ಅನ್ನು ಹೈದರಾಬಾದ್ ಮೂಲದ ಭಾರತ್ ಬಯೋಟೆಕ್ ಕಂಪನಿಯು ಅಭಿವೃದ್ಧಿಪಡಿಸಿದೆ. 

ಕೋವ್ಯಾಕ್ಸಿನ್‌ ಬೂಸ್ಟರ್‌ ಡೋಸ್‌ ತೆಗೆದುಕೊಂಡ ಶೇ 90ಕ್ಕಿಂತ ಹೆಚ್ಚು ವ್ಯಕ್ತಿಗಳು ಕೋವಿಡ್‌ ರೂಪಾಂತರಗಳನ್ನು ತಟಸ್ಥಗೊಳಿಸುವ ಪ್ರತಿಕಾಯಗಳನ್ನು ಹೊಂದಿದ್ದಾರೆ ಎಂದು ಭಾರತ್‌ ಬಯೋಟೆಕ್‌ ಮಾಹಿತಿ ನೀಡಿದೆ.

ಹೈದರಾಬಾದ್‌ನ ಭಾರತ್ ಬಯೋಟೆಕ್ ಕಂಪನಿಯು ಪುಣೆಯ ರಾಷ್ಟ್ರೀಯ ವೈರಾಲಜಿ ಸಂಸ್ಥೆ ಹಾಗೂ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಗಳ ಸಹಯೋಗದೊಂದಿಗೆ ಕೋವ್ಯಾಕ್ಸಿನ್ ಲಸಿಕೆ ಅಭಿವೃದ್ಧಿಪಡಿಸಿತ್ತು. 

ಜನವರಿಯಲ್ಲಿ ಕೋವ್ಯಾಕ್ಸಿನ್ ಲಸಿಕೆಯ ತುರ್ತು ಬಳಕೆಗೆ ಕೇಂದ್ರ ಸರ್ಕಾರ ಅನುಮತಿ ನೀಡಿತ್ತು. ನವೆಂಬರ್‌ನಲ್ಲಿ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಕೂಡ ಕೋವ್ಯಾಕ್ಸಿನ್ ಲಸಿಕೆಯ ತುರ್ತು ಬಳಕೆಗೆ ಅನುಮೋದನೆ ನೀಡಿತ್ತು. ಇದರೊಂದಿಗೆ, ಲಸಿಕೆಗೆ ಜಾಗತಿಕ ಮಾನ್ಯತೆ ದೊರೆತಿತ್ತು.
 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು