ಶನಿವಾರ, ಅಕ್ಟೋಬರ್ 1, 2022
20 °C

ಲಾಲು ಇಲ್ಲದೆ ಬಿಹಾರ ಚಾಲೂ ಆಗುವುದಿಲ್ಲ: ಲಾಲು ಪ್ರಸಾದ್ ಯಾದವ್ ಪುತ್ರಿ ರೋಹಿಣಿ

ಐಎಎನ್‌ಎಸ್‌ Updated:

ಅಕ್ಷರ ಗಾತ್ರ : | |

ನವದೆಹಲಿ: ಬಿಹಾರದಲ್ಲಿ ಬಿಜೆಪಿ ಹಾಗೂ ಜೆಡಿ (ಯು) ಮೈತ್ರಿ ಮುರಿದು ಬಿದ್ದಿದ್ದು, ಮಾಜಿ ಮುಖ್ಯಮಂತ್ರಿ ಲಾಲು ಪ್ರಸಾದ್ ಯಾದವ್ ಅವರ ಆರ್‌ಜೆಡಿ ಜೊತೆ ಹೆಜ್ಜೆ ಹಾಕಲು ನಿತೀಶ್ ಕುಮಾರ್ ಮುಂದಾಗಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಲಾಲು ಪ್ರಸಾದ್ ಯಾದವ್ ಅವರ ಪುತ್ರಿ ರೋಹಿಣಿ ಆಚಾರ್ಯ, ‘ಲಾಲು ಇಲ್ಲದೇ ಬಿಹಾರ ಚಾಲೂ ಆಗುವುದಿಲ್ಲ’ ಎಂಬ ಬೋಜಪುರಿ ವಿಡಿಯೊ ಹಾಡೊಂದನ್ನು ಹಂಚಿಕೊಂಡು ಬಿಜೆಪಿ ವಿರುದ್ಧ ಟೀಕಾಪ್ರಹಾರ ಮಾಡಿದ್ದಾರೆ.

ವೈರಲ್ ಆಗಿದ್ದ ಈ ಹಾಡು 2020 ರ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಆರ್‌ಜೆಡಿ ಬಳಸಿತ್ತು. ಇದೇ ಹಾಡನ್ನು ಹಂಚಿಕೊಂಡು ರೋಹಿಣಿ ಅವರು, ‘ಪಟ್ಟಾಭಿಷೇಕಕ್ಕೆ ತಯಾರಾಗಿ, ಲಾಟೀನು ಹಿಡಿದವರು ಬರುತ್ತಿದ್ದಾರೆ’ ಎಂದು ಒಕ್ಕಣೆ ಬರೆದುಕೊಂಡಿದ್ದಾರೆ.

 

ಅಲ್ಲದೇ ಅವರು ತಮ್ಮ ತಂದೆಯನ್ನು ಕಿಂಗ್ ಮೇಕರ್ ಎಂದು ಕರೆದಿದ್ದಾರೆ. ಮೇವು ಹಗರಣದಲ್ಲಿ ಶಿಕ್ಷೆಗೆ ಒಳಗಾಗಿರುವ ಲಾಲು ಅವರು ಸದ್ಯ ಜಾಮೀನಿನ ಮೇಲೆ ಹೊರಗಿದ್ದಾರೆ. ಆಸ್ಪ‍ತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

2015–2017 ರವರೆಗಿನ ಸಮ್ಮಿಶ್ರ ಸರ್ಕಾರದಲ್ಲಿ ತೇಜಸ್ವಿ ಯಾದವ್ ಅವರು ಡಿಸಿಎಂ ಆಗಿದ್ದರು. ಇದೀಗ ಹೊಸ ಸರ್ಕಾರದಲ್ಲಿ ತೇಜಸ್ವಿ ಮತ್ತೆ ಡಿಸಿಎಂ ಆಗಬಹುದು ಎನ್ನಲಾಗುತ್ತಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು