ಬುಧವಾರ, ಅಕ್ಟೋಬರ್ 21, 2020
26 °C

ಬಿಹಾರ ಚುನಾವಣೆ: ಆರ್‌ಜೆಡಿ 143, ಕಾಂಗ್ರೆಸ್‌ 70 ಸ್ಥಾನಗಳಲ್ಲಿ ಸ್ಪರ್ಧೆ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪಟ್ನಾ: ಆರ್‌ಜೆಡಿ, ಕಾಂಗ್ರೆಸ್‌ ಒಳಗೊಂಡಿರುವ ಮಹಾ ಮೈತ್ರಿಕೂಟದ ಸೀಟು ಹಂಚಿಕೆ ಸಮಸ್ಯೆ ಇತ್ಯರ್ಥಗೊಂಡಿದ್ದು ಆರ್‌ಜೆಡಿ 143 ಹಾಗೂ ಕಾಂಗ್ರೆಸ್‌ 70 ಸ್ಥಾನಗಳಲ್ಲಿ ಸ್ಪರ್ಧೆ ಮಾಡುವುದು ಬಹುತೇಕ ಖಚಿತವಾಗಿದೆ.

243 ವಿಧಾನಸಭೆ ಸ್ಥಾನಗಳಲ್ಲಿ ಮಹಾ ಮೈತ್ರಿಕೂಟದ ಅಂಗಪಕ್ಷಗಳಾದ ಎಡಪಕ್ಷಗಳು 28 ರಿಂದ 30 ಸ್ಥಾನಗಳಲ್ಲಿ, ವಿಕಾಸ್‌ ಶೀಲ್‌ ಪಾರ್ಟಿ 10 ರಿಂದ 12 ಸ್ಥಾನಗಳಲ್ಲಿ ಸ್ಪರ್ಧೆ ಮಾಡಲಿದೆ ಎಂದು ಮಹಾ ಮೈತ್ರಿಕೂಟದ ಉನ್ನತ ಮೂಲಗಳು ತಿಳಿಸಿವೆ.

ಬಿಹಾರದಲ್ಲಿ ಅಕ್ಟೋಬರ್ 28, ನವೆಂಬರ್ 3 ಮತ್ತು 7ರಂದು ಮೂರು ಹಂತಗಳಲ್ಲಿ ವಿಧಾನಸಭೆಗೆ ಚುನಾವಣೆ ನಡೆಯಲಿದೆ. ಈಗಾಗಲೇ ಚುನಾವಣೆ ಆಯೋಗ ಸಿದ್ಧತೆಗಳನ್ನು ಮಾಡಿಕೊಂಡಿದೆ. ಮೊದಲ ಹಂತದ ಚುನಾವಣೆಗೆ ನಾಮಪತ್ರ ಸಲ್ಲಿಸುವ ಪ್ರಕ್ರಿಯೆ ಆರಂಭವಾಗಿದೆ.

ಈ ಹಿಂದೆ ಮಹಾಮೈತ್ರಿ ಕೂಟವನ್ನು ಬೆಂಬಲಿಸಿದ್ದ ಹಿಂದೂಸ್ತಾನಿ ಆವಾಮಿ ಮೋರ್ಚಾ (ಜಾತ್ಯತೀತ) ಅಧ್ಯಕ್ಷ, ಬಿಹಾರ ಮಾಜಿ ಸಿಎಂ ಜಿತನ್‌ ರಾಮ್‌ ಮಾಂಝಿ ಅವರು ಮತ್ತೆ ಎನ್‌ಡಿಎ ಮೈತ್ರಿ ಸೇರಿದ್ದಾರೆ. ಕೇಂದ್ರದ ಮಾಜಿ ಸಚಿವ ಉಪೇಂದ್ರ ಕುಶ್ವಾಹ ನೇತೃತ್ವದ ರಾಷ್ಟ್ರೀಯ ಲೋಕ್‌ ಸಮತಾ ಪಾರ್ಟಿ (ಆರ್‌ಎಲ್‌ಎಸ್‌ಪಿ) ಕೂಡ ಮಹಾಮೈತ್ರಿಯಿಂದ ಹಿಂದೆ ಸರಿದಿದ್ದು ಬಿಎಸ್‌ಪಿ ಜೊತೆ ಮೈತ್ರಿ ಮಾಡಿಕೊಂಡ ಸ್ಪರ್ಧೆ ಮಾಡಲಿದೆ.

ಮಹಾ ಮೈತ್ರಿಕೂಟದ ಮತ್ತೊಂದು ಪಕ್ಷ ಜೆಎಂಎಂ ಪಕ್ಷ 7 ಸ್ಥಾನಗಳಲ್ಲಿ ಸ್ಪರ್ಧೆ ಮಾಡಲಿದೆ. ಬಿಹಾರ ಮತ್ತು ಜಾರ್ಖಂಡ್‌ ಗಡಿ ವ್ಯಾಪ್ತಿಯಲ್ಲಿನ ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಲಿದೆ ಎನ್ನಲಾಗಿದೆ. ಈಗಾಗಲೇ ಜಾರ್ಖಂಡ್‌ ಮುಖ್ಯಮಂತ್ರಿ ಹೇಮಂತ್‌ ಸೂರೇನ್‌ ಹಾಗೂ ಲಾಲು ಪ್ರಸಾದ್‌ ಯಾದವ್‌ ಈ ಬಗ್ಗೆ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು